ಯಾವುದೇ ಪಥ್ಯ ಬೇಡ.. ಆಹಾರ ನೀರು ಸೇವನೆಯಲ್ಲಿ ಈ ಕಾಳಜಿ ವಹಿಸಿ ಒಂದೇ ತಿಂಗಳಲ್ಲಿ ತೂಕ ಇಳಿಸಿ, ಡೊಳ್ಳುಹೊಟ್ಟೆ ಚಪ್ಪಟೆಯಾಗೋದು ಗ್ಯಾರಂಟಿ!
ಯಾವ ಆಹಾರ ಸೇವಿಸಬೇಕು, ನೀರು ಕುಡಿಯುವುದು ಹೇಗೆ, ಆಹಾರ ಸೇವಿಸುವಾಗ ಯಾವ ಕ್ರಮ ಅನುಸರಿಸಬೇಕು ಎಂಬಂತ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ದೇಹದಲ್ಲಿ ಶೇಖರವಾಗಿರುವ ಎಂತಹ ಕಠಿಣ ಕೊಬ್ಬನ್ನೂ ಕೂಡ ಸುಲಭವಾಗಿ ಕರಗಿಸಬಹುದು.
ತೂಕ ಇಳಿಕೆಗಾಗಿ ಫೈಬರ್ ಸಮೃದ್ಧ ಆಹಾರ, ಪ್ರೊಟೀನ್ ಹೆರಳವಾಗಿರುವ ಫುಡ್ ಸೇವಿಸುವುದರ ಜೊತೆಗೆ ಸಂಸ್ಕರಿಸಿದ ಆಹಾರಳನ್ನು ತಪ್ಪಿಸುವುದು ಮುಖ್ಯವಾಗಿದೆ.
ನಿತ್ಯ ಸಾಕಷ್ಟು ನೀರು ಕುಡಿಯುವುದರಿಂದ ಚಯಾಪಚಯ ಹೆಚ್ಚಾಗುತ್ತದೆ. ಇದು ಹಸಿವನ್ನು ಸಹ ಕಡಿಮೆ ಮಾಡುವುದರಿಂದ ತೂಕ ಇಳಿಕೆಗೆ ಲಾಭದಾಯಕವಾಗಿದೆ.
ಆತುರಾತುರವಾಗಿ ತಿನ್ನುವುದರಿಂದ ಹೆಚ್ಚು ಆಹಾರ ತಿನ್ನುವಿರಿ. ಇದನ್ನು ಜೀರ್ಣಿಸಿಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಇದರ ಬದಲಿಗೆ ಚೆನ್ನಾಗಿ ಅಗಿದು ತಿನ್ನುವುದರಿಂದ ಹೊಟ್ಟೆ ಬೇಗ ತುಂಬುತ್ತದೆ. ಹೆಚ್ಚು ತಿನ್ನುವುದನ್ನು ತಪ್ಪಿಸಬಹುದು. ಇದು ತೂಕ ಇಳಿಕೆಯಲ್ಲಿ ಪರಿಣಾಮಕಾರಿ ಆಗಿದೆ.
ಆಹಾರಪದ್ದತಿಯ ಜೊತೆಗೆ ನಿತ್ಯ ಒಂದಿಷ್ಟು ದೈಹಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದ ದೇಹದಲ್ಲಿ ಶೇಖರವಾಗಿರುವ ಫ್ಯಾಟ್ ಸುಲಭವಾಗಿ ಕರಗಿ, ಡುಮ್ಮ ಹೊಟ್ಟೆ ಚಪ್ಪಟೆಯಾಗುತ್ತದೆ.
ಸಕ್ಕರೆ, ಸೋಡಾ ಮಿಶ್ರಿತ ಕೊಲ್ಡ್ ಡ್ರಿಂಕ್ಸ್ ಸೇವನೆಯನ್ನು ತಪ್ಪಿಸಿದರೆ ಇದು ತೂಕ ಇಳಿಕೆಯಲ್ಲಿ ಪರಿಣಾಮಕಾರಿ ಕೊಡುಗೆ ನೀಡುತ್ತದೆ.
ತೂಕ ಇಳಿಕೆಗೆ ಪ್ರತಿದಿನ ಸಾಕಷ್ಟು ನಿದ್ರೆ ಮಾಡುವುದು ತುಂಬಾ ಅವಶ್ಯಕ. ನಿತ್ಯ 8-9 ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ ತೂಕ ಇಳಿಕೆ ಸುಲಭವಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.