Benefits of Amrutha Balli: ಅಮೃತದಷ್ಟು ಶಕ್ತಿ ಹೊಂದಿರುವ ಅಮೃತ ಬಳ್ಳಿಯ ಪ್ರಯೋಜನಗಳು

Mon, 05 Aug 2024-4:43 pm,

ಅಮೃತ ಬಳ್ಳಿ ಸೇವನೆಯು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಶರೀರದ ಧಾತುಗಳ ವರ್ಧನೆಗೆ ಹಾಗೂ ಪೋಷಣೆಗೆ ಸಹಾಯಕ. ಮಧುಮೇಹ, ಚರ್ಮರೋಗ, ಕೆಲವು ಸಂಧಿಗಳ ರೋಗಗಳು, ಕ್ರಿಮಿ, ಜ್ವರ, ಕೆಮ್ಮು ಇತ್ಯಾದಿ ರೋಗಗಳನ್ನು ಶಮನ ಮಾಡುತ್ತದೆ.

ಅಮೃತ ಬಳ್ಳಿ ಹಾಗೂ ತ್ರಿಫಲಾ ಪುಡಿ ಸೇರಿಸಿ ಕಷಾಯ ತಯಾರಿಸಿ, ಅದಕ್ಕೆ ಜೇನುತುಪ್ಪವನ್ನು ಬೆರೆಸಿ ನಿಯಮಿತವಾಗಿ ಸೇವಿಸಿದರೆ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಅಮೃತ ಬಳ್ಳಿಯ ಎಲೆಗಳನ್ನು ಬೆಲ್ಲದ ಜೊತೆ ಸೇರಿಸಿ ಸೇವನೆ ಮಾಡಿದರೆ ಮಲಬದ್ಧತೆಯ ಸಮಸ್ಯೆಯು ದೂರವಾಗುತ್ತದೆ.

ದಿನಕ್ಕೆ 3 ಬಾರಿ 10 - 20 ಮಿಲಿಯಷ್ಟು ಅಮೃತ ಬಳ್ಳಿಯ ಹಸಿ ರಸವನ್ನು ಸೇವಿಸಿದರೆ ಚರ್ಮ ರೋಗದಿಂದ ಮುಕ್ತಿ ದೊರೆಯುತ್ತದೆ. ಅಮೃತ ಬಳ್ಳಿ ಪುಡಿಗೆ ಶುಂಠಿ ಪುಡಿ ಮತ್ತು ಹಾಲು ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ. 

ಅಮೃತ ಬಳ್ಳಿಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸುಧಾರಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಮೃತ ಬಳ್ಳಿ ಹಲವಾರು ರೋಗಗಳು ಬಾರದಂತೆ ನಿಯಂತ್ರಿಸುತ್ತದೆ. ಇದು ರೋಗ ನಿರೋಧಕ ಶಕ್ತಿ ಹೊಂದಿದೆ. 

ಸಂಧಿಗಳ ಊತ, ನೋವು, ಉರಿ ಸಮಸ್ಯೆಗೆ ಪ್ರತಿದಿನವೂ ಅಮೃತ ಬಳ್ಳಿಯ ಕಷಾಯವನ್ನು ಸೇವಿಸಬೇಕು.  ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link