Benefits of Basil Seeds: ಬೇಸಿಗೆಯಲ್ಲಿ ಕಾಮಕಸ್ತೂರಿ ಜ್ಯೂಸ್ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ
)
ಕಾಮ ಕಸ್ತೂರಿಯ ಎಲೆ ಹಾಗೂ ಹಸಿ ಶುಂಠಿ ಸೇರಿಸಿ ಚಟ್ನಿ ತಯಾರಿಸಿ ತಿನ್ನುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಮಕ್ಕಳಲ್ಲಿ ಕಾಡುವ ಜಂತು ಹುಳ ಸಮಸ್ಯೆಗೆ 6-8 ಹನಿ ಕಾಮಕಸ್ತೂರಿ ಎಲೆಯ ರಸವನ್ನು ಕುಡಿಸಿದರೆ ಪರಿಹಾರ ದೊರೆಯತ್ತದೆ.
)
ಉರಿ ಮೂತ್ರ ಸಮಸ್ಯೆಗೆ ಇದು ಪರಿಹಾರ ನೀಡುತ್ತದೆ.ಈ ಬೀಜಗಳನ್ನು ರಾತ್ರಿ ನೀರಿನಲ್ಲಿ ಎರಡು ಟೀ ಚಮಚ ಕಾಮಕಸ್ತೂರಿ ಬೀಜ ನೆನೆಸಿ ಬೆಳಗ್ಗೆ ಕುಡಿಯುವುದರಿಂದ ಪ್ರಯೋಜನ ದೊರೆಯುತ್ತದೆ.
)
ಇಂದು ಬಹುತೇಕರನ್ನು ಮಲಬದ್ಧತೆ, ಮೂಲವ್ಯಾಧಿ ರೋಗಗಳಿಗೆ ಕಾಮಕಸ್ತೂರಿ ಬೀಜಗಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಕಲ್ಲು ಸಕ್ಕರೆ ಸೇರಿಸಿ ಶರಬತ್ತು ತಯಾರಿಸಿ ಕುಡಿದರೆ ಪರಿಹಾರ ದೊರೆಯುತ್ತದೆ.
ಕಾಮ ಕಸ್ತೂರಿ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಇಳಿಕೆಯಾಗುತ್ತದೆ. ತೂಕ ನಷ್ಟದ ಪ್ಲ್ಯಾನ್ ಮಾಡುವವರು ತಮ್ಮ ಡಯೆಟ್‌ನಲ್ಲಿ ಇದರ ಜ್ಯೂಸ್‌ಅನ್ನು ಸೇರಿಸಿಕೊಳ್ಳಬೇಕು.
ನೆಗಡಿ, ಕೆಮ್ಮಿಗೆ ಕಾಮಕಸ್ತೂರಿ ಎಲೆಗಳೊಂದಿಗೆ ಹಸಿ ಶುಂಠಿ, ಲವಂಗ ಸೇರಿಸಿ ಕಷಾಯ ಮಾಡಿ ಕುದಿಯಬೇಕು. ಬಾಯಿಯ ದುರ್ಗಂಧ , ವಸಡುಗಳ ನೋವಿಗೆ ಇದರ ಎಲೆ ಸೇವಿಸಬೇಕು.