Benefits Of Betel Leaves: ವೀಳ್ಯದೆಲೆಯ ಅದ್ಭುತ ಆರೋಗ್ಯ ಪ್ರಯೋಜನಗಳು
ಚಿಕ್ಕಮಕ್ಕಳಿಗೆ ಉಸಿರಾಟದ ತೊಂದರೆಯಾದಾಗ ವೀಳ್ಯದೆಲೆಗೆ ಹರಳೆಣ್ಣೆ ಹಚ್ಚಿ ಬೆಚ್ಚಗೆ ಮಾಡಿ ಎದೆಯ ಮೇಲೆ ಇಡಬೇಕು. ಇದರಿಂದ ಈ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.
ಹೃದಯ ದೌರ್ಬಲ್ಯವಿದ್ದರೆ ವೀಳ್ಯದೆಲೆ ಶರಬತ್ತು ಸೇವನೆ ಮಾಡುವುದು ಒಳ್ಳೆಯದು. ವೀಳ್ಯದೆಲೆಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಲ್ ಗುಣಗಳಿವೆ. ಇದರಿಂದ ಅನೇಕ ಕಾಯಿಲೆಗಳಿಗೆ ಪರಿಹಾರ ದೊರೆಯುತ್ತದೆ.
ವೀಳ್ಯದೆಲೆ ರಸದಲ್ಲಿ ಜೇನು ಬೆರೆಸಿ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ. ವೀಳ್ಯದೆಲೆಯ ಕಾಂಡ ಅಥವಾ ಬೇರನ್ನು ತೇಯ್ದು ಜೇನುತುಪ್ಪ ಸೇರಿಸಿ ನೆಕ್ಕಿಸಿದರೆ ಚಿಕ್ಕ ಮಕ್ಕಳ ಕಫ-ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.
ಇರುಳುಗಣ್ಣು ನಿವಾರಣೆಗೆ ನಾಲ್ಕೈದು ಹನಿ ವೀಳ್ಯದೆಲೆ ರಸವನ್ನು ಹಾಕಬೇಕು. ನಿಯಮಿತವಾಗಿ ತಾಂಬೂಲ ಸೇವನೆಯಿಂದ ಧ್ವನಿ ಮಧುರವಾಗುತ್ತದೆ.
ಬಾವು ನೋವುಗಳಿಗೆ ವೀಳ್ಯದೆಲೆಯನ್ನು ಬಿಸಿ ಮಾಡಿ ಕಟ್ಟಬೇಕು. ವೀಳ್ಯದೆಲೆ ಸೇವನೆಯು ನೀರಿನ ದಾಹವನ್ನು ಕಡಿಮೆ ಮಾಡುತ್ತದೆ.