Flaxseeds Benefits For Hair: ಕೂದಲಿನ ಹಲವು ಸಮಸ್ಯೆಗಳಿಗೆ ಅಗಸೆಬೀಜ ಒಂದೇ ಪರಿಹಾರ
ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅಗಸೆ ಬೀಜಗಳು ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಚರ್ಮ, ಮಹಿಳೆಯರು ಮತ್ತು ಪುರುಷರ ಆರೋಗ್ಯಕ್ಕೆ ವರದಾನದಂತಿರುವ ಅಗಸೆಬೀಜಗಳನ್ನು ಸಾಮಾನ್ಯವಾಗಿ ತೂಕ ಇಳಿಕೆಗಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಅಗಸೆ ಬೀಜಗಳು ಕೂದಲು ಉದುರುವಿಕೆ ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲದು. ತಜ್ಞರ ಪ್ರಕಾರ, ಅಗಸೆ ಬೀಜದ ಬಳಕೆಯಿಂದ ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಕೂದಲಿನ ಆರೈಕೆಯಲ್ಲಿ ಅಗಸೆಬೀಜ ಹೇಗೆ ಪ್ರಯೋಜನಕಾರಿ ಆಗಿದೆ ಎಂದು ತಿಳಿಯೋಣ...
ಅಗಸೆ ಬೀಜಗಳಲ್ಲಿ ಕೂದಲ ಬೆಳವಣಿಗೆಗೆ ಸಹಕಾರಿಯಾಗಿರುವ ವಿಟಮಿನ್ ಇ ಹೇರಳವಾಗಿ ಕಂಡು ಬರುತ್ತದೆ. ಹಾಗಾಗಿ, ಕೂದಲು ಉದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯಲು ಅಗಸೆ ಬೀಜ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ.
ಅಗಸೆ ಬೀಜಗಳಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್ ಮತ್ತು ಸೆಲೆನಿಯಮ್ ಕಂಡು ಬರುತ್ತದೆ. ಇದು ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ಅಗಸೆ ಬೀಜಗಳ ಬಳಕೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಅಗಸೆ ಬೀಜಗಳ ಎಣ್ಣೆಯೂ ಉರಿಯೂತದ ಅಂಶಗಳನ್ನು ಒಳಗೊಂಡಿದ್ದು ಇದು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬಳಕೆಯಿಂದ ತಲೆಹೊಟ್ಟಿನ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
ಅಗಸೆ ಬೀಜಗಳಲ್ಲಿ ಆಲ್ಪಾ-ಲಿನೋಲೆನಿಕ್ ಆಮ್ಲ ಹೇರಳವಾಗಿ ಕಂಡು ಬರುತ್ತದೆ. ಮಾತ್ರವಲ್ಲ ಇದರಲ್ಲಿ ಒಮೆಗಾ-3 ಕೊಬ್ಬಿನಾಂಶವೂ ಕಂಡು ಬರುವುದರಿಂದ ಅಗಸೆ ಬೀಜಗಳ ಬಳಕೆಯಿಂದ ಉದ್ದವಾದ ಬಲವಾದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.