ಈ ಹಣ್ಣಿನ ಗಿಡದ ಎಲೆಯನ್ನು ಬೆಳಿಗ್ಗೆ ಹಳಸು ಬಾಯಲ್ಲೇ ಜಗಿದರೆ ಒಂದೇ ವಾರದಲ್ಲಿ ತೂಕ ಇಳಿಯುತ್ತೆ !
ಹಸಿ ಪೇರಲ ಎಲೆಗಳನ್ನು ಜಗಿಯುವುದು ಕೂಡ ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಪೇರಲ ಎಲೆಗಳು ದೇಹದಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವಲ್ಲಿ ಬಹಳ ಪ್ರಯೋಜನಕಾರಿ.
ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆಯನ್ನು ಜಗಿದು ತಿನ್ನುವುದು ಜೀರ್ಣಕ್ರಿಯೆಗೆ ಒಳ್ಳೆಯದು.
ಪೇರಲ ಹಣ್ಣು ಮತ್ತು ಪೇರಲ ಎಲೆಗಳಲ್ಲಿ ಹೇರಳವಾದ ನಾರಿನಂಶವಿದೆ. ಈ ಫೈಬರ್ ಸಂಕೀರ್ಣ ಪಿಷ್ಟವನ್ನು ದೇಹದಲ್ಲಿ ಸಕ್ಕರೆಯಾಗಿ ಪರಿವರ್ತಿಸಲು ಅನುಮತಿಸುವುದಿಲ್ಲ.
ಬೆಳಗ್ಗೆ ಎದ್ದ ಕೂಡಲೇ ಹಳಸು ಬಾಯಲ್ಲೇ ಪೇರಲ ಎಲೆಗಳನ್ನು ತಿಂದರೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೇರಲ ಎಲೆಗಳನ್ನು ಜಗಿಯುವುದು ಅಥವಾ ಅದನ್ನು ಕುದಿಸಿ ನೀರು ಕುಡಿಯುವುದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಂಟ್ರೋಲ್ ಮಾಡುತ್ತದೆ. 1 ತಿಂಗಳ ಕಾಲ ನಿಯಮಿತವಾಗಿ ತಿನ್ನುವುದರಿಂದ ನೀವು ಪರಿಣಾಮವನ್ನು ಕಾಣಲು ಪ್ರಾರಂಭಿಸುತ್ತೀರಿ.
ದೇಹವು ಆಹಾರದಿಂದ ಹೆಚ್ಚು ಸುಕ್ರೋಸ್ ಮತ್ತು ಮಾಲ್ಟೋಸ್ ಅನ್ನು ಹೀರಿಕೊಳ್ಳುವಾಗ, ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಪೇರಲ ಎಲೆಗಳು ಈ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಪೇರಲ ಎಲೆಯ ಟೀ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮಧುಮೇಹ ನಿಯಂತ್ರಿಸಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)