ಈ ಸೊಪ್ಪಿನಲ್ಲಿದೆ ತ್ವಚೆಯನ್ನು ಹೊಳೆಯುವಂತೆ ಮಾಡುವ ಶಕ್ತಿ..! ಆದರೆ ಹೀಗೆ ಬಳಸಿ

Sat, 30 Sep 2023-3:31 pm,

ಮೊಡವೆಗಳಿಂದ ಮುಕ್ತಿ ನೀಡುತ್ತದೆ: ಪುದೀನಾ ಎಲೆಗಳಲ್ಲಿ ವಿಟಮಿನ್‌ ಎ ಅಧಿಕವಾಗಿರುವುದರಿಂದ ಇದು ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ತುತ್ತಾಗುವ ಮೊಡವೆ ಸಮಸ್ಯೆಗಲನ್ನು ನಿವಾರಿಸುತ್ತದೆ. ಇದಕ್ಕಾಗಿ ನೀವು ಪುದೀನಾ ಎಲೆಗಳ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ.   

ಪುದೀನಾ ಎಲೆಗಳು ಗಾಯವನ್ನು ಗುಣಪಡಿಸುತ್ತವೆ: ಪುದೀನಾ ಎಲೆಗಳ್ಲಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಚರ್ಮದ ಉರಿಯನ್ನು ಶಮನ ಮಾಡುತ್ತವೆ. ಇದಕ್ಕಾಗಿ ಪುದೀನಾ ಎಲೆಯ ರಸವನ್ನು ಗಾಯ ಪೀಡಿತ ಪ್ರದೇಶಕ್ಕೆ ಹಚ್ಚಬೇಕು ಇದರಿಂದ ಸುಡುವ ಸಂವೇದನೆ ಕಡಿಮೆಯಾಗುತ್ತದೆ.   

ಚರ್ಮವನ್ನು ಹೈಡ್ರೇಟ್‌ ಮಾಡುತ್ತದೆ: ಪುದೀನಾ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯವಂತೆ ಮಾಡಲು ಸಹಕಾರಿಯಾಗುತ್ತದೆ. ಇದು ನಿಮ್ಮ ಚರ್ಮದಲ್ಲಿನ ಸುಕ್ಕುಗಳು, ನೆರಿಗೆಗಳನ್ನು ತೆಗೆದುಹಾಕಲು ಪುದೀನಾ ಎಲೆಗಳು ಸಹಕಾರಿಯಾಗಿವೆ.   

ಕಪ್ಪು ವರ್ತುಲಗಳನ್ನು ಕಡಿಮೆ ಮಾಡುತ್ತದೆ: ಪುದೀನಾ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಕಣ್ಣುಗಳ ಕೆಳಗಡೆ ಆಗಿರುವ ಡಾರ್ಕ್ ಸರ್ಕಲ್ ಗಳನ್ನು ಕಡಿಮೆಮಾಡಿ, ಚರ್ಮವನ್ನು ಹೊಳೆಯುವಂತೆ ಮಾಡುತ್ತವೆ. ಇದಕ್ಕಾಗಿ ಪುದೀನಾ ಪೇಸ್ಟ್‌ನ್ನು ರಾತ್ರಿಯಿಡೀ ಕಣ್ಣಿನ ಕೆಳಗಡೆ ಹಚ್ಚಿಕೊಳ್ಳಿ.   

ಪುದೀನಾ ಚರ್ಮದ ಟೋನ್‌ನ್ನು ಹೆಚ್ಚಿಸುತ್ತದೆ: ಪುದೀನಾ ಚರ್ಮದ ಮೇಲೆ ಉಂಟಾಗಿರುವ ಕಲೆಗಳನ್ನು ತಡೆಯುತ್ತದೆ. ಇದು ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link