Rose Water: ಚರ್ಮಕ್ಕೆ ಪ್ರಯೋಜನಕಾರಿ ರೋಸ್ ವಾಟರ್
ಒಂದು ಚಮಚ ಲವಂಗದ ಪುಡಿಯನ್ನು ಒಂದು ಟೀಚಮಚ ರೋಸ್ ವಾಟರ್ ಜೊತೆ ಬೆರೆಸಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ರಾತ್ರಿ ಮಲಗುವ ಮೊದಲು ಮೊಡವೆಗಳ ಮೇಲೆ ಹಚ್ಚುವುದರಿಂದ ಚರ್ಮದ ಮೇಲಿನ ಮೊಡವೆಗಳು ನಿವಾರಣೆಯಾಗುತ್ತವೆ.
ಮಸುಕಾದ ಚರ್ಮ: ಒಂದು ಬಟ್ಟಲಿನಲ್ಲಿ ಒಂದು ಚಮಚ ನಿಂಬೆ ರಸ (Lemon Juice) ಮತ್ತು ಒಂದು ಚಮಚ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರಾತ್ರಿ ಮಲಗುವ ಮುನ್ನ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ, ಅದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ- Dandruff Remedies: ತಲೆಹೊಟ್ಟಿನ ಸಮಸ್ಯೆ ನಿವಾರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಮುಖದ ಮೇಲಿನ ಕಲೆ ನಿವಾರಣೆಗೆ: ಒಂದು ಚಮಚ ಹಸಿರು ಕಾಳಿನ ಪುಡಿಗೆ ಅಗತ್ಯ ಪ್ರಮಾಣದ ರೋಸ್ ವಾಟರ್ (Rose Water) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ ಲಘುವಾಗಿ ಮಸಾಜ್ ಮಾಡಿ. ಬಳಿಕ ಮುಖ ತೊಳೆಯಿರಿ. ವಾರಕ್ಕೆ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಮುಖದ ಮೇಲಿನ ಕಲೆ ನಿವಾರಣೆ ಆಗಿ ಚರ್ಮವು ಕಾಂತಿಯುತವಾಗಿ ಕಾಣುತ್ತದೆ.
ಇದನ್ನೂ ಓದಿ- Turmeric Cleanser For Skin: ಮುಖದ ಮೇಲಿನ ಕಲೆ, ಡೆಡ್ ಸ್ಕಿನ್ ನಿವಾರಣೆಗೆ ಬಳಸಿ ಅರಿಶಿನದ ಕ್ಲೆನ್ಸರ್
ಒಣ ಕೂದಲು: ಎರಡು ಚಮಚ ಗ್ಲಿಸರಿನ್ ಮತ್ತು ಎರಡು ಚಮಚ ರೋಸ್ ವಾಟರ್ ಬೆರೆಸಿ ತಲೆಗೆ ಹಚ್ಚಿ ಐದು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿದರೆ ಕೂದಲು ತುಂಬಾ ಮೃದುವಾಗಿ ಕಾಣುತ್ತದೆ.