ಪ್ರಕೃತಿಯಲ್ಲೇ ಸಿಗುವ ಈ ಎಲೆ ಸಾಕು… ರಸ ಹಿಂಡಿ ತೆಂಗಿನೆಣ್ಣೆಗೆ ಬೆರೆಸಿ ಹಚ್ಚಿದರೆ ನಿಮಿಷದಲ್ಲಿ ಕಡು ಕಪ್ಪಾಗುತ್ತೆ ಬಿಳಿಕೂದಲು

Sun, 10 Mar 2024-2:12 pm,

ಇಂದು ಹೆಚ್ಚಿನ ಯುವಕರು ಕೆಲವು ಕೂದಲಿನ ಸಮಸ್ಯೆಯಿಂದ ತೊಂದರೆಗೊಳಗಾಗಲು ಇದುವೇ ಪ್ರಮುಖ ಕಾರಣವಾಗಿದೆ. ಒಡೆದ ತುದಿಗಳು, ತಲೆಹೊಟ್ಟು, ಒಣ ಕೂದಲು ಮತ್ತು ಕೂದಲು ಉದುರುವುದು ಇತ್ಯಾದಿ ಸಮಸ್ಯೆಗಳು ಇಂದಿನ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ಕಾಡುತ್ತಿವೆ.

ಇದಲ್ಲದೇ ಕೂದಲಿಗೆ ಸರಿಯಾದ ಆರೈಕೆ ಮಾಡದ ಕಾರಣ ಈ ಸಮಸ್ಯೆಗಳು ಕೂದಲನ್ನು ನಿರ್ಜೀವಗೊಳಿಸುತ್ತದೆ. ಆದರೆ ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವುದರ ಮೂಲಕ, ಕೂದಲಿನ ಸಮಸ್ಯೆಗಳನ್ನು ನಿವಾರಿಸಬಹುದು ಮತ್ತು ಅವುಗಳ ಬೆಳವಣಿಗೆಯನ್ನು ಸುಧಾರಿಸಬಹುದು.

ಈ ಲೇಖನದಲ್ಲಿ ಕೂದಲಿಗೆ ಲ್ಯಾವೆಂಡರ್ ಎಣ್ಣೆ ಮತ್ತು ಅಲೋವೆರಾವನ್ನು ಬಳಸುವುದರಿಂದ ಆಗುವ ಪ್ರಯೋಜನಗಳನ್ನು ಬಗ್ಗೆ ಮಾಹಿತಿ ನೀಡಲಾಗಿದೆ. ಲ್ಯಾವೆಂಡರ್ ಬದಲಿಗೆ ನೈಸರ್ಗಿಕವಾಗಿ ಸಿಗುವ ತೆಂಗಿನೆಣ್ಣೆಯನ್ನು ಸಹ ಬಳಕೆ ಮಾಡಬಹುದು.

ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಲ್ಯಾವೆಂಡರ್ ಎಣ್ಣೆ ಅಥವಾ ತೆಂಗಿನೆಣ್ಣೆ ಮತ್ತು ಅಲೋವೆರಾವನ್ನು ಬಳಸಬಹುದು. ಈ ನೈಸರ್ಗಿಕ ವಸ್ತುಗಳಲ್ಲಿ ಹಲವು ರೀತಿಯ ಔಷಧೀಯ ಗುಣಗಳಿವೆ.

ಲ್ಯಾವೆಂಡರ್ ಎಣ್ಣೆ ಮತ್ತು ಅಲೋವೆರಾ ಜೆಲ್ ಎರಡೂ ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಎಣ್ಣೆ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ತಲೆಹೊಟ್ಟು ಮತ್ತು ಇತರ ನೆತ್ತಿಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಲೋವೆರಾ ಜೆಲ್‌’ನಲ್ಲಿ ವಿಟಮಿನ್‌’ಗಳು ಮತ್ತು ಖನಿಜಗಳು ಕಂಡುಬರುತ್ತವೆ, ಇದು ನೆತ್ತಿಯನ್ನು ತೇವಗೊಳಿಸುತ್ತದೆ ಮತ್ತು ಪೋಷಣೆಯನ್ನು ನೀಡುತ್ತದೆ. ಇದರಿಂದಾಗಿ ಕೂದಲು ವೇಗವಾಗಿ ಬೆಳೆಯುತ್ತದೆ.

ಕೊಬ್ಬರಿ ಎಣ್ಣೆ ಮತ್ತು ಅಲೋವೆರಾ ಜೆಲ್ ಎರಡೂ ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿವೆ. ಇವೆರಡೂ ಸಹ ನೆತ್ತಿಯ ರಂಧ್ರಗಳನ್ನು ತೆರೆಯುತ್ತದೆ ಮತ್ತು ಆಳವಾದ ಪೋಷಣೆಯನ್ನು ನೀಡುತ್ತದೆ. ಈ ಕಾರಣದಿಂದಾಗಿ, ಕೂದಲು ದಪ್ಪವಾಗಿ, ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ.

ಕೂದಲು ಉದುರುತ್ತಿದ್ದರೆ ಅಥವಾ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಲ್ಯಾವೆಂಡರ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಮತ್ತು ಅಲೋವೆರಾ ಜೆಲ್ ಅನ್ನು ಬಳಸಬಹುದು. ಎಣ್ಣೆ ನೆತ್ತಿಯ ಮೇಲೆ ರಕ್ತ ಪರಿಚಲನೆ ಸುಧಾರಿಸಿ, ಕೂದಲು ಉದುರುವುದು ಕಡಿಮೆ ಮಾಡುತ್ತದೆ. ಇದರೊಂದಿಗೆ, ಅಲೋವೆರಾದಲ್ಲಿ ಕಂಡುಬರುವ ಕಿಣ್ವಗಳು ನೆತ್ತಿಯ ಸತ್ತ ಜೀವಕೋಶಗಳನ್ನು ಸರಿಪಡಿಸಲು ಕೆಲಸ ಮಾಡುತ್ತದೆ.

ಈ ಎಣ್ಣೆ ತಯಾರಿಸಲು ಲ್ಯಾವೆಂಡರ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಮಾರುಕಟ್ಟೆಯಿಂದ ಖರೀದಿಸಿ. ಈಗ ಎರಡು ಚಮಚ ತಾಜಾ ಅಲೋವೆರಾ ಜೆಲ್ ತೆಗೆದುಕೊಳ್ಳಿ. ಅಕ್ಕೆ ಸುಮಾರು 8 ರಿಂದ 10 ಹನಿ ಲ್ಯಾವೆಂಡರ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಸೇರಿಸಿ. ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಪೇಸ್ಟ್ ಸಿದ್ಧವಾದಾಗ ಅದನ್ನು ತಲೆಗೆ ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ವಾರಕ್ಕೆ ಎರಡು ಬಾರಿ ಬಳಸಬಹುದು.

ಕೂದಲಿನ ಅನೇಕ ಸಮಸ್ಯೆಗಳನ್ನು ನಿವಾರಿಸಲು ಈ ಎಣ್ಣೆಯನ್ನು ಬಳಸಬಹುದು. ಇದು ಕೂದಲಿನ ಬೆಳವಣಿಗೆಗೆ, ಬಿಳಿ ಕೂದಲಿನ ಸಮಸ್ಯೆ ಸೇರಿದಂತೆ ಅನೇಕ ವಿಧಗಳಲ್ಲಿ ಪರಿಹಾರ ನೀಡುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link