ಈ ಎಲೆಯನ್ನು ʻಹೀಗೆʼ ಬಳಸಿ ಕೂದಲನ್ನು ಬಲವಾಗಿ, ದಟ್ಟವಾಗಿ ಅಷ್ಟೆ ಅಲ್ಲದೆ ಹೊಳೆಯುವಂತೆ ಮಾಡಿ`..!

Sat, 17 Aug 2024-11:52 am,

ಕೂದಲು ಉದುರುವಿಕೆಗೆ ಬೇವಿನ ಎಣ್ಣೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಬಳಸುವುದರಿಂದ ನಿಮ್ಮ ಕೂದಲನ್ನು ಆರೋಗ್ಯವಾಗಿಡಬಹುದು.  

ಹೆಚ್ಚಿನ ಜನರು ಕೂದಲು ಉದುರುವಿಕೆಯಿಂದ ತೊಂದರೆಗೊಳಗಾಗುತ್ತಾರೆ. ಅಂತಹ ಸಂದರ್ಭಗಳಲ್ಲಿ, ಅವರು ಅನೇಕ ಹೊಸ ಉತ್ಪನ್ನಗಳನ್ನು ತಮ್ಮ ಕೂದಲಿನ ಮೇಲೆ ಪ್ರಯೋಗ ಮಾಡುತ್ತಾರೆ.  

ಆದರೆ ಈ ಯಾವ ಹೊಸ ಉತ್ಪನ್ನಗಳಿಂದಲೂ ನಿಮ್ಮ ಕೂದಲನ್ನು ಕಾಪಾಡುವುದಕ್ಕೆ ಸಾಧ್ಯವಿಲ್ಲ, ನೀವು ಕೂಡ ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಶುಷ್ಕತೆಯಿಂದ ಬಳಲುತ್ತಿದ್ದರೆ, ಈ ಪುಟದಲ್ಲಿ ನೀಡಿರುವ ಟಿಪ್ಸ್‌ ಅನ್ನು ಅನುಸರಿಸಿ ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಲಿಗೂ ಗುಡ್‌ ಬೈ ಹೇಳಿ.  

ಕೂದಲನ್ನು ಬಲಪಡಿಸಲು ಬೇವಿನ ಎಣ್ಣೆ ಅತ್ಯುತ್ತಮ ಆಯ್ಕೆಯಾಗಿದೆ. ಬೇವಿನ ಎಲೆ ಅನೇಕ ಔಷದೀಯ ಗುಣಗಳಿಂದ ಕೂಡಿದ್ದು, ಇದು ನಿಮ್ಮ ಕೂದಲನ್ನು ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ.  

ಕೂದಲಿನ ಹೊರತಾಗಿ, ಬೇವಿನ ಎಣ್ಣೆಯು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ.ಬೇವು ಆಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ಇನ್‌ಫ್ಲಮೇಟರಿ ಗುಣಗಳನ್ನು ಹೊಂದಿದೆ.   

ಬೇವಿನ ಎಣ್ಣೆ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ.ಕೂದಲಿನಲ್ಲಿ ತಲೆಹೊಟ್ಟು ಇರುವವರು ಬೇವಿನ ಎಣ್ಣೆಯನ್ನು ಕೂದಲಿಗೆ ಬಳಸಬೇಕು. ಇದರಿಂದ ತುರಿಕೆ ಮತ್ತು ತಲೆಹೊಟ್ಟು ನಿವಾರಣೆಯಾಗುತ್ತದೆ.  

ಬೇವಿನ ಎಣ್ಣೆ ಕೂದಲು ಕಿರುಚೀಲಗಳನ್ನು ಬಲಪಡಿಸುವುದಷ್ಟೆ ಅಲ್ಲದೆ ಕೂದಲು ಒಡೆಯುವಿಕೆಯನ್ನು ತಡೆಯುತ್ತದೆ. ಬೇವಿನ ಎಣ್ಣೆ ನೆತ್ತಿಯನ್ನು ಪೋಷಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.   

ನೀವು ನಿಮ್ಮ ಕೂದಲಿನ ಹೊಳಪನ್ನು ಹೆಚ್ಚಿಸಲು ಬಯಸಿದರೆ, ಬೇವಿನ ಎಣ್ಣೆಯನ್ನು ಬಳಸಬಹುದು. ಇದು ಕೂದಲನ್ನು ಆಳವಾಗಿ ಪೋಷಿಸುತ್ತದೆ ಮತ್ತು ಪರೋಪಜೀವಿಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.   

ಸ್ವಲ್ಪ ಬೇವಿನ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದನ್ನು ನಿಮ್ಮ ನೆತ್ತಿಯ ಮೇಲೆ ನಿಧಾನವಾಗಿ ಹಚ್ಚಿ, 30 ನಿಮಿಷಗಳ ಕಾಲ ಬಿಡಿ, ನಂತರ ನಿಮ್ಮ ಕೂದಲನ್ನು ಶಾಂಪೂ ಮಾಡಿ ಮತ್ತು ತೊಳೆಯಿರಿ.   

ಬೇವಿನ ಎಣ್ಣೆಯನ್ನು ಮೊಸರು, ತೆಂಗಿನ ಎಣ್ಣೆ ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಕೂದಲು ಮತ್ತು ನೆತ್ತಿಯ ಮೇಲೆ 30 ನಿಮಿಷಗಳ ಕಾಲ ಅನ್ವಯಿಸಿ ನಂತರ ಕೂದಲನ್ನು ಶಾಂಪುವಿನಿಂದ ತೊಳೆಯಿರಿ, ಇದರಿಂದ ನಿಮ್ಮ ಕೂದಲು ಉದುರುವುದಷ್ಟೆ ಅಲ್ಲದೆ ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಲು ಮಾಯವಾಗುತ್ತದೆ.  

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link