ಈ ರಾಶಿಯವರು ಕೈಗೆ ಕೆಂಪು ದಾರ ಕಟ್ಟಿದರೆ ಬ್ರಹ್ಮ-ವಿಷ್ಣು-ಮಹೇಶ್ವರರೇ ಜೊತೆ ನಿಂತಂತೆ! ಕಟ್ಟಿದ ಕ್ಷಣದಿಂದಲೇ ಅದೃಷ್ಟದತ್ತ ವಾಲುವುದು ಹಣೆಬರಹ

Sat, 07 Sep 2024-9:19 am,

ಸಾಮಾನ್ಯವಾಗಿ ಕೈಗಳಿಗೆ ಕೆಂಪು ಅಥವಾ ಕಪ್ಪು ದಾರವನ್ನು ಕಟ್ಟುತ್ತೇನೆ. ಇದು ಕೆಲವೊಮ್ಮೆ ದೃಷ್ಟಿ ನಿವಾರಣೆಗಾದರೆ, ಇನ್ನೂ ಕೆಲವೊಮ್ಮೆ ಅದೃಷ್ಟ ತರುವ ಸಂಕೇತವಾಗಿ ಬಳಕೆಯಾಗುತ್ತದೆ. ಈ ಕೆಂಪು ಬಣ್ಣದ ದಾರವನ್ನು ಹತ್ತಿಯಿಂದ ತಯಾರಿಸಲಾಗುತ್ತದೆ.

 

ಇದು ಪ್ರಧಾನವಾಗಿ ಕೆಂಪು ಬಣ್ಣದ್ದಾಗಿದ್ದರೂ, ಹಳದಿ ಮತ್ತು ಬಿಳಿ ಮಿಶ್ರಿತ ಬಣ್ಣವನ್ನು ಸಹ ಹೊಂದಿರುತ್ತದೆ. ಈ ಮೂರು ಎಳೆಗಳನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ ಮೂರು ಶಕ್ತಿಗಳ ಸಂಕೇತವೆಂದು ಪರಿಗಣಿಸಲಾಗಿದೆ.

 

ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಂಪು ಬಣ್ಣದ ದಾರ ಮಂಗಳಕರ. ಆದರೆ ಕೆಲ ರಾಶಿಯವರಿಗೆ ಈ ಬಣ್ಣದ ದಾರ ಹಿಡಿಸುವುದಿಲ್ಲ. ಹೀಗಿರುವಾಗ ಕೆಂಪು ಬಣ್ಣದ ದಾರ ಧರಿಸುವುದರಿಂದ ಆಗುವ ಲಾಭಗಳೇನು? ಯಾವ ರಾಶಿಯವರು ಇದನ್ನು ಧರಿಸಬೇಕು ಮತ್ತು ಧರಿಸಬಾರದು? ಎಂಬುದನ್ನು ತಿಳಿದುಕೊಳ್ಳೋಣ.

 

ಧಾರ್ಮಿಕ ನಂಬಿಕೆಯ ಪ್ರಕಾರ, ಕೈಗೆ ಕೆಂಪು ದಾರವನ್ನು ಕಟ್ಟಿಕೊಂಡ ಜನರನ್ನು ಲಕ್ಷ್ಮಿ ದೇವಿಯು ಸಂತೋಷದಿಂದಿರಿಸುತ್ತಾಳೆ. ಇದರೊಂದಿಗೆ ಆಂಜನೇಯನ ವಿಶೇಷ ಆಶೀರ್ವಾದವೂ ಇವರ ಮೇಲೆ ಇರುತ್ತದೆ. ಇದಷ್ಟೇ ಅಲ್ಲದೆ, ಮಂಗಳನ ಬಣ್ಣವು ಕೆಂಪು. ಆದ್ದರಿಂದ ಕೆಂಪು ಬಣ್ಣವನ್ನು ಧರಿಸುವುದರಿಂದ ಜಾತಕದಲ್ಲಿ ಮಂಗಳನ ಸ್ಥಾನವನ್ನು ಬಲಪಡಿಸುತ್ತದೆ.

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ, ಸಿಂಹ ಮತ್ತು ವೃಶ್ಚಿಕ ರಾಶಿಯ ಜನರು ಕೆಂಪು ದಾರವನ್ನು ಕಟ್ಟಬೇಕು. ನಂಬಿಕೆಯ ಪ್ರಕಾರ, ಈ ರಾಶಿಯ ಜನರು ಕೆಂಪು ದಾರವನ್ನು ಕಟ್ಟುವ ಮೂಲಕ ಆಂಜನೇಯನ ಆಶೀರ್ವಾದವನ್ನು ಪಡೆಯುತ್ತಾರೆ. ಇದರ ಜೊತೆಗೆ ಮಂಗಳ ಮತ್ತು ಸೂರ್ಯ ದೇವ ಕೆಂಪು ಬಣ್ಣದ ದಾರ ಧರಿಸಿದ ಜನರಿಗೆ ವಿಶೇಷ ಕೃಪೆ ತೋರುತ್ತಾರೆ.

 

ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನು ಮಕರ ಮತ್ತು ಕುಂಭ ರಾಶಿಯ ಅಧಿಪತಿ. ಶನಿದೇವನಿಗೆ ಕೆಂಪು ಬಣ್ಣ ಇಷ್ಟವಿರುವುದಿಲ್ಲ. ಶನಿವಾರದಂದು ಶನಿ ದೇವರಿಗೆ ಕಪ್ಪು ಎಳ್ಳನ್ನು ದಾನ ಮಾಡುವುದು ಇದೇ ಕಾರಣಕ್ಕಾಗಿ. ಈ ಎರಡು ರಾಶಿಗಳ ಜನರು ಕೆಂಪು ದಾರ ಅಥವಾ ಕೆಂಪು ಬಣ್ಣದ ಕಲವನ್ನು ಧರಿಸಬಾರದು. ಇದಲ್ಲದೆ, ಮೀನ ರಾಶಿಯವರು ಸಹ ಕೆಂಪು ಬಣ್ಣದ ದಾರವನ್ನು ಧರಿಸಬಾರದು.

 

ಮಂಗಳವಾರದಂದು ಕೆಂಪು ಬಣ್ಣದ ದಾರವನ್ನು ಧರಿಸಬೇಕು. ಹೀಗೆ ಮಾಡಿದರೆ ಬ್ರಹ್ಮದೇವನ ಕೃಪೆಯಿಂದ ಕೀರ್ತಿಯೂ, ವಿಷ್ಣುವಿನ ಕೃಪೆಯಿಂದ ರಕ್ಷಣಾ ಶಕ್ತಿಯೂ, ಶಿವನ ಕೃಪೆಯಿಂದ ಸಕಲ ಸಂಕಟಗಳ ಪರಿಹಾರವೂ ದೊರೆಯುತ್ತದೆ. ಇದರೊಂದಿಗೆ ಲಕ್ಷ್ಮಿ ದೇವಿಯ ಕೃಪೆಯಿಂದ ಸಂಪತ್ತು, ದುರ್ಗಾ ದೇವಿಯ ಕೃಪೆಯಿಂದ ಶಕ್ತಿ ಮತ್ತು ಸರಸ್ವತಿ ದೇವಿಯ ಕೃಪೆಯಿಂದ ಬುದ್ದಿವಂತಿಕೆ ಲಭಿಸುತ್ತದೆ.

 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link