ತಿಂಗಳಾನುಗಟ್ಟಲೆಯಿಂದಲೇ ಕಾಡುವ ಕೆಮ್ಮನ್ನು ಒದ್ದೋಡಿಸುತ್ತದೆ ಈ ಮನೆ ಮದ್ದು!ಒಂದೇ ಬಾರಿ ಸೇವಿಸಿದರೆ ಸಾಕು !
ಕೆಮ್ಮು ಆರಂಭವಾಗುವಾಗಲೇ ಔಷಧಿ ಬದಲು ಈ ಮನೆ ಮದ್ದುಗಳನ್ನು ಬಳಸಿದರೆ ಮತ್ತೆ ಎಂದೂ ಕೆಮ್ಮಿನ ಸಮಸ್ಯೆ ಕಾಡುವುದೇ ಇಲ್ಲ.
ಕೆಮ್ಮು ಗುಣಪಡಿಸುವ ಪ್ರಮುಖ ಔಷಧಿ ಎಂದರೆ ನೀರು. ಕೆಮ್ಮು ಇದ್ದಾಗ ಬಹಳಷ್ಟು ನೀರು ಸೇವಿಸಬೇಕು. ಇದರಿಂದ ದೇಹ ಹೈಡ್ರೆಟ್ ಆಗಿರುತ್ತದೆ. ಉಗುರು ಬೆಚ್ಚಗಿನ ನೀರನ್ನೇ ಕುಡಿಯಬೇಕು ಎನ್ನುವುದು ನೆನಪಿರಲಿ.
ಉಗುರು ಬಿಸಿಯಿರುವ ನೀರಿಗೆ ಸ್ವಲ್ಪ ಉಪ್ಪು ಹಾಕಿ ಗಾರ್ಗಲ್ ಮಾಡಬೇಕು. ಇದು ಕೆಮ್ಮಿನಿಂದ ಪರಿಹಾರ ನೀಡಲು ಸಹಾಯ ಮಾಡುತ್ತದೆ.
ಜೇನುತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣವಿರುತ್ತದೆ. ಇದು ಸೋಂಕಿನಿಂದ ರಕ್ಷಣೆ ನೀಡುತ್ತದೆ.
ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸ್ಟೀಮ್ ತೆಗೆದುಕೊಳ್ಳುವುದರಿಂದ ಕೆಮ್ಮು ಬೇಗನೇ ಗುಣವಾಗುತ್ತದೆ.
ಶುಂಠಿ ಚಹಾ ಸೇವಿಸುವ ಮೂಲಕ ಕೂಡಾ ಕೆಮ್ಮಣ್ಣು ನಿವಾರಣೆ ಮಾಡಬಹುದು. ಒಂದು ಲೋಟ ನೀರಿಗೆ ಶುಂಠಿ ಜಜ್ಜಿ ಹಾಕಿ ಚೆನ್ನಾಗಿ ಕುದಿಸಬೇಕು. ಇದಕ್ಕೆ ಒಂದೆರಡು ತುಳಸಿ ಎಲೆ ಸೇರಿಸಿದರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಅರಶಿನ ಹಾಲನ್ನು ಸೇವಿಸಿದರೆ ಬಹಳ ಬೇಗನೆ ಕೆಮ್ಮು ನಿವಾರಣೆಯಾಗುವುದು. ಇದನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.