ವಾಸ್ತು ಪ್ರಕಾರ ಇದು ಮಲಗಲು ಅತ್ಯಂತ ಶ್ರೇಷ್ಠ ದಿಕ್ಕು, ಆದರೆ.. ಈ ದಿಕ್ಕಿನಲ್ಲಿ ಮಲಗಲೇಬಾರದು..!
![ವಾಸ್ತು ನಿಯಮ Vastu Rules](https://kannada.cdn.zeenews.com/kannada/sites/default/files/2024/10/05/452107-vastutipsforsleeping-1.jpg?im=FitAndFill=(500,286))
ದೈನಂದಿನ ಜೀವನದಲ್ಲಿ ಪ್ರಮುಖ ವಿಷಯಗಳಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಬದುಕಿನಲ್ಲಿ ಸುಖ-ಶಾಂತಿ, ನೆಮ್ಮದಿ, ಕೀರ್ತಿ ಎಲ್ಲವೂ ಸಿಗುತ್ತದೆ.
![ಮಲಗುವ ದಿಕ್ಕು Sleeping Direction](https://kannada.cdn.zeenews.com/kannada/sites/default/files/2024/10/05/452106-vastutipsforsleeping-2.jpg?im=FitAndFill=(500,286))
ವಾಸ್ತು ಪ್ರಕಾರ, ಮಲಗುವ ದಿಕ್ಕು ಕೂಡ ಬಹಳ ಮುಖ್ಯ. ಸರಿಯಾದ ದಿಕ್ಕಿನಲ್ಲಿ ತಲೆಹಾಕಿ ಮಲಗುವುದರಿಂದ ನೆಮ್ಮದಿ ನಿದ್ರೆ, ಆರೋಗ್ಯ ವೃದ್ಧಿ ಆಗುವಂತೆಯೇ, ತಪ್ಪಾದ ದಿಕ್ಕಿನಲ್ಲಿ ತಲೆಯಿಟ್ಟು ಮಲಗಿದರೆ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ.
![ಪೂರ್ವ ದಿಕ್ಕು East Direction For Sleeping](https://kannada.cdn.zeenews.com/kannada/sites/default/files/2024/10/05/452105-vastutipsforsleeping-3.jpg?im=FitAndFill=(500,286))
ವಾಸ್ತು ಪ್ರಕಾರ, ಪೂರ್ವ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದು ಶುಭ. ಇದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಆರೋಗ್ಯವೂ ಸುಧಾರಿಸುತ್ತದೆ.
ಪಶ್ಚಿಮ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದರೆ ಜೀವನದಲ್ಲಿ ಅಶಾಂತಿ ಹೆಚ್ಚಾಗಿ ಬದುಕು ನೆಮ್ಮದಿ ಇಲ್ಲದಂತಾಗುತ್ತದೆ.
ಈಶಾನ್ಯ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದರಿಂದ ಸಾಲ, ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ.
ಶಾಂತಿಯಿಂದ ನಿದ್ರೆ ಮಾಡಲು ದಕ್ಷಿಣ ದಿಕ್ಕು ಅತ್ಯಂತ ಶ್ರೇಷ್ಟವಾದ ದಿಕ್ಕು. ಈ ದಿಕ್ಕಿಗೆ ತಲೆ ಹಾಕು ಮಲಗುವುದರಿಂದ ಜೀವನದಲ್ಲಿ ಶಾಂತಿ, ಕೀರ್ತಿ, ಯಶಸ್ಸು ಸಿಗಲಿದೆ.
ವಾಸ್ತು ಪ್ರಕಾರ, ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿನಲ್ಲಿ ತಲೆ ಹಾಕಿ ಮಲಗಬಾರದು. ಇದರಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವುದರ ಜೊತೆಗೆ ಆಯುಷ್ಯವೂ ಕಡಿಮೆಯಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.