Cinnamon Water: ಮೆದುಳಿನಿಂದ ಹೃದಯದವರೆಗೂ ತುಂಬಾ ಲಾಭದಾಯಕ ಈ ಆಯುರ್ವೇದ ಪಾನೀಯ
ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಸೇರಿದಂತೆ ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ದಾಲ್ಚಿನ್ನಿ ನೀರನ್ನು ನಿತ್ಯ ಸೇವಿಸುವುದರಿಂದ ಓದಿ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ.
ನಿತ್ಯ ಖಾಲಿ ಹೊಟ್ಟೆಯಲ್ಲಿ ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ ಇದು ಏಕಾಗ್ರತೆ, ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇಯಲ್ಲ, ಮೇಡುಳಿಗೆ ಸಂಬಂಧಿಸಿದ ಆಲ್ಝೈಮರ್ ಕಾಯಿಲೆ ಅಪಾಯವನ್ನೂ ಕಡಿಮೆ ಮಾಡುತ್ತದೆ.
ದಾಲ್ಚಿನ್ನಿಯಲ್ಲಿ ನೈಸರ್ಕಿಕ ಜೀರ್ಣಕಾರಿ ಗುಣಗಳು ಕಂಡು ಬರುವುದರಿಂದ ಇದರ ಪಾನೀಯವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.
ದಾಲ್ಚಿನ್ನಿಯಲ್ಲಿ ಆ್ಯಂಟಿ ಮೈಕ್ರೋಬಿಯಲ್ ಮತ್ತು ಆ್ಯಂಟಿ ವೈರಸ್ ಗುಣಗಳು ಹೆರಳವಾಗಿದ್ದು ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದಾಲ್ಚಿನ್ನಿ ನೀರು ದೇಹದಲ್ಲಿ ಉರಿಯೂತವನ್ನು ಶಮನಗೊಳಿಸುವ ಮೂಲಕ ಚರ್ಮದ ಆರೋಗಯ್ವನ್ನು ಸುಧಾರಿಸಲು ಸಹಾಯಕವಾಗಿದೆ.
ನಿತ್ಯ ದಾಲ್ಚಿನ್ನಿ ನೀರಿನ ಸೇವನೆಯು ಆರೋಗ್ಯಕರ ತೂಕ ಇಳಿಕೆಯನ್ನು ಬೆಂಬಲಿಸುತ್ತದೆ.
ನಿಯಮಿತವಾಗಿ ದಾಲ್ಚಿನ್ನಿ ನೀರು ಕುಡಿಯುವವರಲ್ಲಿ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸಿ ಹೃದಯ ಆರೋಗ್ಯವನ್ನು ಸುಧಾರಿಸಲು ಸಹಕಾರಿ ಆಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.