Best Bank FD Rates: 1 ವರ್ಷದ ಫಿಕ್ಸಡ್ ಡೆಪಾಸಿಟ್‌ಗೆ ಯಾವ ಬ್ಯಾಂಕುಗಳು ಎಷ್ಟು ಬಡ್ಡಿ ನೀಡುತ್ತೆ?
2024ರ ಜುಲೈ 24ರಿಂದ ಜಾರಿಗೆ ಬಂದ ದರಗಳ ಪ್ರಕಾರ, HDFC ಬ್ಯಾಂಕ್ 1 ವರ್ಷದ ಸ್ಥಿರ ಠೇವಣಿಗೆ 6.6% ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ 7.1% ನೀಡುತ್ತದೆ
ಈ ಖಾಸಗಿ ಬ್ಯಾಂಕ್ ಒಂದು ವರ್ಷದಿಂದ 15 ತಿಂಗಳವರೆಗಿನ FD ಖಾತೆಗೆ ಸಾರ್ವಜನಿಕರಿಗೆ 6.7% ಮತ್ತು ಹಿರಿಯ ನಾಗರಿಕರಿಗೆ 7.20% ಬಡ್ಡಿ ದರವನ್ನು ನೀಡುತ್ತದೆ.
ಒಂದು ವರ್ಷದ ಸ್ಥಿರ ಠೇವಣಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್, ಸಾರ್ವಜನಿಕರಿಗೆ 7.1% ಮತ್ತು ಹಿರಿಯ ನಾಗರಿಕರಿಗೆ 7.6% ಬಡ್ಡಿ ನೀಡುತ್ತದೆ. ಇದು ಜೂನ್ 14ರಿಂದ ಜಾರಿಗೆ ಬಂದಿದೆ.
ಕಳೆದ ಅಕ್ಟೋಬರ್ 16ರಿಂದ ಒಂದು ವರ್ಷದ ಸ್ಥಿರ ಠೇವಣಿಗೆ ಫೆಡರಲ್ ಬ್ಯಾಂಕ್ ಸಾರ್ವಜನಿಕರಿಗೆ 6.8% ಮತ್ತು ಹಿರಿಯ ನಾಗರಿಕರಿಗೆ 7.3% ಬಡ್ಡಿ ದರವನ್ನು ನೀಡುತ್ತದೆ.
ಭಾರತದ ಅತಿದೊಡ್ಡ ಬ್ಯಾಂಕ್ SBI ಜೂನ್ 15ರಿಂದ ಜಾರಿಗೆ ಬರುವಂತೆ, ಒಂದು ವರ್ಷದ ಸ್ಥಿರ ಠೇವಣಿಯಲ್ಲಿ ಸಾರ್ವಜನಿಕರಿಗೆ 6.8% ಮತ್ತು ಹಿರಿಯ ನಾಗರಿಕರಿಗೆ 7.3% ಬಡ್ಡಿ ನೀಡುತ್ತದೆ.
ಕೆನರಾ ಬ್ಯಾಂಕ್ ಸಹ ಸ್ಥಿರ ಠೇವಣಿಗಳಿಗೆ 6.85% ಮತ್ತು ಒಂದು ವರ್ಷದ ಸ್ಥಿರ ಠೇವಣಿಗಳಿಗೆ 7.35% ಬಡ್ಡಿ ನೀಡುತ್ತದೆ. ಈ ದರಗಳು ಜೂನ್ 11ರಿಂದ ಜಾರಿಗೆ ಬಂದಿದೆ.
ಒಂದು ವರ್ಷದ FD ಖಾತೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾರ್ವಜನಿಕರಿಗೆ 6.85% ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿ ದರವನ್ನು ನೀಡುತ್ತದೆ. ಇದು ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ.