Best Bikes In 125cc Segment: 125cc ಬೈಕ್ ಖರೀದಿಸಬೇಕೆ? ಇಲ್ಲಿವೆ ಬೆಸ್ಟ್ ಆಪ್ಶನ್
1. TVS ರೈಡರ್ 125cc - ಟಿವಿಎಸ್ ಕಂಪನಿಯು ಇತ್ತೀಚೆಗೆ ಈ ಬೈಕ್ ಅನ್ನು ಸ್ಟ್ರೈಕಿಂಗ್ ರೆಡ್, ಬ್ಲೇಜಿಂಗ್ ಬ್ಲೂ, ವಿಕೆಡ್ ಬ್ಲ್ಯಾಕ್ ಮತ್ತು ಫಿಯರಿ ಯೆಲ್ಲೋ ಮುಂತಾದ ಬಣ್ಣ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಕ್ 124.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು 11.22 ಎಚ್‌ಪಿ ಪವರ್ ಮತ್ತು 11.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಪೋರ್ಟಿ ಡಿಸೈನ್ ಕಮ್ಯೂಟರ್ ಬೈಕ್ ಎಲ್ಇಡಿ ಡಿಆರ್ ಎಲ್, ಡಿಜಿಟಲ್ ಡಿಸ್ ಪ್ಲೇ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಂತಹ ಸವಲತ್ತುಗಳನ್ನು ಹೊಂದಿದ್ದು, ಇದು ವಾಹನ ಸವಾರರಿಗೆ ಹೆಚ್ಚಿನ ಉಪಯೋಗವನ್ನು ನೀಡುತ್ತವೆ. ಈ ಬೈಕಿನ ಗರಿಷ್ಠ ವೇಗ 99 ಕಿಮೀ/ಗಂಟೆ ಆಗಿರಲಿದೆ. ಕೇವಲ 5.9 ಸೆಕೆಂಡ್ ಗಳಲ್ಲಿ 0-60 ಕಿಮೀ/ಗಂ ವೇಗವನ್ನು ಹೆಚ್ಚಿಸಬಹುದು. ಬೈಕಿನ ಇಕೋಥ್ರಸ್ಟ್ ಇಂಧನ ಇಂಜೆಕ್ಷನ್ (ಇಟಿಎಫ್‌ಐ) ತಂತ್ರಜ್ಞಾನದ ಎಂಜಿನ್ ಉತ್ತಮ ಮೈಲೇಜ್ ನೀಡುತ್ತದೆ. ಕಂಪನಿಯು ಈ ಬೈಕ್ ಪ್ರತಿ ಲೀಟರ್‌ಗೆ 67 ಕಿಮೀ ಮೈಲೇಜ್ ನೀಡುತ್ತದೆ. ದೆಹಲಿಯಲ್ಲಿ ಈ ಬೈಕಿನ ಎಕ್ಸ್ ಶೋರೂಂ ಬೆಲೆ 77,500 ರೂ.ಗಳಾಗಿವೆ.
2. Bajaj Pulsar 125cc - ಬಜಾಜ್ ಪಲ್ಸರ್ 125 ಸಿಸಿ ತನ್ನ ಉತ್ತಮ ಲುಕ್ ಮತ್ತು ಉತ್ತಮ ವೇಗದ ಜೊತೆಗೆ ಶಕ್ತಿಯುತ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಬೈಕ್ ಎರಡು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮೊದಲ ರೂಪಾಂತರವು ಪ್ರಮಾಣಿತ ಆಸನವಾಗಿದ್ದು, ಎರಡನೆಯದು ವಿಭಜಿತ ಸೀಟಿನಲ್ಲಿ ಬರುತ್ತದೆ. ಸ್ಟ್ಯಾಂಡರ್ಡ್ ವೇರಿಯಂಟ್ ರೂ 77,843 ಮತ್ತು ಸ್ಪ್ಲಿಟ್ ಸೀಟ್ ವೇರಿಯಂಟ್ ಬೆಲೆ ರೂ 80,698 (ಎಕ್ಸ್ ಶೋ ರೂಂ, ದೆಹಲಿ). ಈ ಬೈಕ್ ಕೂಡ 124.4 ಸಿಸಿ ಬಿಎಸ್ 6 ಎಂಜಿನ್ ಹೊಂದಿದ್ದು, 11.64 ಬಿಹೆಚ್ ಪಿ ಪವರ್ ಮತ್ತು 10.8 ಎನ್ ಎಂ ಟಾರ್ಕ್ ಉತ್ಪಾದಿಸಬಲ್ಲದು. ಕಂಪನಿಯು ಈ ಬೈಕ್ ಅನ್ನು 5 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಪರಿಚಯಿಸಿದೆ. ಸಸ್ಪೆನ್ಶನ್ ಬಗ್ಗೆ ಹೇಳುವುದಾದರೆ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಅವಳಿ ಗ್ಯಾಸ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ. ಮತ್ತೊಂದೆಡೆ, ಮೈಲೇಜ್ ವಿಷಯಕ್ಕೆ ಬಂದರೆ, ಈ ಬೈಕ್ 54 ರಿಂದ 55 kmpl ಮೈಲೇಜ್ ನೀಡುತ್ತದೆ.
3. Honda Shine 125cc - ಹೋಂಡಾ ಕಂಪನಿಯ ಉತ್ತಮ ಮಾರಾಟದ ಬೈಕ್‌ಗಳ ಪಟ್ಟಿಯಲ್ಲಿ ಶೈನ್ 125 ಸಿಸಿ ಹೆಸರು ಮುಂಚೂಣಿಯಲ್ಲಿದೆ. ಈ ಬೈಕ್ ಅನ್ನು ಎರಡು ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ, ಇದರ ಶೈನ್ ಡ್ರಮ್ ರೂಪಾಂತರದ ಬೆಲೆ ರೂ 84,481 (ಆನ್ ರೋಡ್) ಮತ್ತು ಶೈನ್ ಡಿಸ್ಕ್ ರೂಪಾಂತರದ ಬೆಲೆ ರೂ 89,715 ಆಗಿದೆ. 4 ಕಲರ್ ಆಯ್ಕೆಗಳೊಂದಿಗೆ ನೀಡಲಾಗುವ ಈ ಬೈಕಿನಲ್ಲಿ 124 ಸಿಸಿ ಬಿಎಸ್ 6 ಸಿಂಗಲ್ ಸಿಲಿಂಡರ್ ಇಂಧನ-ಇಂಜೆಕ್ಟ್ ಎಂಜಿನ್ ಇದೆ, ಇದು 7500 ಆರ್ಪಿಎಂನಲ್ಲಿ 10.8 ಪಿಎಸ್ ಶಕ್ತಿಯನ್ನು ಉತ್ಪಾದಿಸುತ್ತದೆ. ಹೋಂಡಾ ಶೈನ್ ಉತ್ತಮ ಲುಕ್ ಮತ್ತು ಉತ್ತಮ ಮೈಲೇಜ್ ಸಂಯೋಜನೆಯಾಗಿದೆ. ಕಂಪನಿಯ ಹೇಳಿಕೆ ಪ್ರಕಾರ, ಹೋಂಡಾ ಶೈನ್ ಸರಾಸರಿ 55 kmpl ಮೈಲೇಜ್ ನೀಡುತ್ತದೆ.
4. Hero Super Splendor 125cc - ಏಪ್ರಿಲ್‌ನಲ್ಲಿ ಬಿಡುಗಡೆಯಾದ ಹೊಸ ಸೂಪರ್ ಸ್ಪ್ಲೆಂಡರ್ ಬಿಎಸ್ 6 ಬೈಕ್ ಆಗಿದ್ದು 125 ಸಿಸಿ ಇಂಜಿನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಬೈಕ್ 124.7 ಸಿಸಿ ಬಿಎಸ್ 6 ಏರ್-ಕೂಲ್ಡ್, 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಒಎಚ್‌ಸಿ ಎಂಜಿನ್ ಹೊಂದಿದ್ದು, 7500 ಆರ್‌ಪಿಎಂನಲ್ಲಿ 10.73 ಎಚ್‌ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಶನ್ ಮತ್ತು ಹಿಂಭಾಗದಲ್ಲಿ 5-ಹಂತದ ಹೊಂದಾಣಿಕೆ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಶೇನ್ ನೀಡಲಾಗಿದೆ. ಮತ್ತೊಂದೆಡೆ, ಬ್ರೇಕಿಂಗ್ ವ್ಯವಸ್ಥೆಯ ವಿಷಯದಲ್ಲಿ, ಸೂಪರ್ ಸ್ಪ್ಲೆಂಡರ್ ಮುಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಹೊಂದಿದೆ. ಬೆಲೆಯ ಬಗ್ಗೆ ಹೇಳುವುದಾದರೆ, ಸೂಪರ್ ಸ್ಪ್ಲೆಂಡರ್ (ಸೆಲ್ಫ್ ಸ್ಟಾರ್ಟ್ ಡ್ರಮ್ ಬ್ರೇಕ್ ಅಲಾಯ್ ವ್ಹೀಲ್) ನ ಎಕ್ಸ್ ಶೋ ರೂಂ ಬೆಲೆ ರೂ 68,150 ಮತ್ತು ಆರಂಭಿಕ ಎಕ್ಸ್ ಶೋರೂಂ ಬೆಲೆ (ಸೆಲ್ಫ್ ಸ್ಟಾರ್ಟ್ ಡಿಸ್ಕ್ ಬ್ರೇಕ್ ಅಲಾಯ್ ವೀಲ್) ರೂ 71,650 ಆಗಿದೆ. ಈ ಬೈಕ್ ನೆಕ್ಸಸ್ ಬ್ಲೂ, ಗ್ಲೇಜ್ ಬ್ಲ್ಯಾಕ್, ಕ್ಯಾಂಡಿ ಬ್ಲೇಜಿಂಗ್ ರೆಡ್ ಮತ್ತು ಹೆವಿ ಗ್ರೇ ನಂತಹ 4 ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.
5. KTM RC 125cc - ಜನಪ್ರಿಯ ಬೈಕ್ ಕಂಪನಿ ಕೆಟಿಎಂ 125 ಸಿಸಿ ವಿಭಾಗದಲ್ಲಿ ಉತ್ತಮ ಬೈಕ್ ಅನ್ನು ಬಿಡುಗಡೆ ಮಾಡಿದೆ, ಇದನ್ನು ಕೆಟಿಎಂ ಆರ್ಸಿ 125 ಎಂದು ಹೆಸರಿಸಲಾಗಿದೆ. ಸ್ಪೋರ್ಟಿ ಲುಕ್ ಮತ್ತು ಶಕ್ತಿಯುತ ಫೀಚರ್‌ಗಳನ್ನು ಇದು ಹೊಂದಿದ್ದು, ಈ ಬೈಕಿನ ಬೆಲೆ ರೂ 2,04,902 (ಆನ್ ರೋಡ್) ಆಗಿದೆ. ಕೆಟಿಎಂ ಆರ್‌ಸಿ 125 ಸಿಸಿ ಬಿಎಸ್ 6 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 14.5 ಬಿಹೆಚ್‌ಪಿ ಪವರ್ ಮತ್ತು 12 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ ನಲ್ಲಿ 6-ಸ್ಪೀಡ್ ಗೇರ್ ಬಾಕ್ಸ್ ನೀಡಲಾಗಿದೆ ಮತ್ತು ಅದರ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ನೀಡಲಾಗಿದೆ. ಇದು ಎಬಿಎಸ್ ವೈಶಿಷ್ಟ್ಯವನ್ನು ಹೊಂದಿದ್ದು, ಇದರ ಮೈಲೇಜ್ 40 kmpl.