Chicken for weight loss : ನಿತ್ಯ ಚಿಕನ್ ನಿಂದ ತಯಾರಿಸಿದ ಈ ಭಕ್ಷ್ಯಗಳನ್ನು ತಿಂದರೆ ತೂಕ ಕಳೆದುಕೊಳ್ಳಬಹುದು.!

Thu, 17 Nov 2022-4:43 pm,

ದಹಿ ಚಿಕನ್  : ದಹಿ ಚಿಕನ್ ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದೆ. ಮಾತ್ರವಲ್ಲದೆ ಇದರ ರುಚಿ ಕೂಡಾ ಚೆನ್ನಾಗಿರುತ್ತದೆ. ಈ ಖಾದ್ಯದಲ್ಲಿ ಬಳಸುವ ಜೀರಿಗೆ, ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನಕಾಯಿ, ಅರಿಶಿನವು ತೂಕವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಮತ್ತೊಂದೆಡೆ, ಪ್ರೋಟೀನ್‌ನ ಸಮೃದ್ಧ ಮೂಲದಲ್ಲಿ ಸೇರಿಸಲಾದ ಚಿಕನ್  ದೇಹಕ್ಕೆ ಅಗತ್ಯವಾದ ಪ್ರೋಟೀನ್ ಅನ್ನು ನೀಡುತ್ತದೆ. ಅದಕ್ಕಾಗಿಯೇ ನೀವು ಈ ಖಾದ್ಯವನ್ನು ತೂಕ ನಷ್ಟ ಆಹಾರದ ಭಾಗವಾಗಿ ಸೇರಿಸಿಕೊಳ್ಳಬಹುದು. 

ಲೆಮನ್ ಚಿಕನ್ ಸೂಪ್ : ಸೂಪ್ ಯಾವಾಗಲೂ ತೂಕ ನಷ್ಟದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಇದು ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ . ಲೆಮನ್ ಚಿಕನ್ ಸೂಪ್‌ನಲ್ಲಿ ನಿಂಬೆ ಮತ್ತು ಚಿಕನ್ ಅನ್ನು ಬಳಸಿದಾಗ, ಅದು ದೇಹವನ್ನು ನಿರ್ವಿಷಗೊಳಿಸುವುದು ಮಾತ್ರವಲ್ಲದೆ ಅಗತ್ಯವಿರುವ ಪ್ರಮಾಣದ ಪ್ರೋಟೀನ್ ಅನ್ನು ಸಹ ನೀಡುತ್ತದೆ.

ಗ್ರಿಲ್ಡ್ ಚಿಕನ್ ಸಲಾಡ್ : ಗ್ರಿಲ್ಡ್ ಚಿಕನ್ ಸಲಾಡ್ ತಯಾರಿಸಲು, ಚಿಕನ್ ಲಿವರ್ ಜೊತೆಗೆ ನಿಂಬೆ, ಆಲಿವ್ ಎಣ್ಣೆ, ಬೆಳ್ಳುಳ್ಳಿ, ಪುದೀನ ಮುಂತಾದವುಗಳು ಬೇಕಾಗುತ್ತವೆ. ಇದಲ್ಲದೆ ಈ ಸಲಾಡ್‌ನಲ್ಲಿ ಪಾಲಕ್, ಕ್ಯಾಪ್ಸಿಕಂ, ಸೌತೆಕಾಯಿ ಮತ್ತು ಟೊಮೆಟೊವನ್ನು ಸಹ ಬಳಸಬಹುದು. ಈ ಎಲ್ಲಾ ವಸ್ತುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುತ್ತವೆ.  

 ಲೆಮನ್ ಪೆಪ್ಪರ್ ಚಿಕನ್ : ಲೆಮನ್ ಪೆಪ್ಪರ್ ಚಿಕನ್  ತಯಾರಿಸಲು ಚಿಕನ್  ಜೊತೆಗೆ ನಿಂಬೆ ರಸ, ಬೆಳ್ಳುಳ್ಳಿ ಪುಡಿ ಮತ್ತು ಮೆಣಸಿನ ಪುಡಿ ಬೇಕಾಗುತ್ತದೆ. ಈ ಖಾದ್ಯವನ್ನು ಬೇಯಿಸಲು  ಆಲಿವ್ ಎಣ್ಣೆಯನ್ನು ಬಳಸಬಹುದು. ಈ ಖಾದ್ಯವು  ರುಚಿಕರವಾಗಿರುವುದಲ್ಲದೆ, ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನೂ ನೀಡುತ್ತವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link