Child plan : ಒಂದು ಲಕ್ಷಕ್ಕೆ ಬದಲು ಸಿಕ್ಕಿತು 8 ಲಕ್ಷ ; ಮಕ್ಕಳಿಗಾಗಿ ಬೆಸ್ಟ್ ಚೈಲ್ಡ್ ಮ್ಯುಚ್ಯವಲ್ ಫಂಡ್
ಹೆಚ್ ಡಿಎಫ್ ಸಿ ಚಿಲ್ಡ್ರನ್ ಗಿಫ್ಟ್ ಫಂಡ್ : ಈ ಸ್ಕೀಂ ಅನ್ನು ಮಾರ್ಚ್ 2, 2001 ರಂದು ಪ್ರಾರಂಭಿಸಲಾಯಿತು. ಅಂದಿನಿಂದ ಇದು ವಾರ್ಷಿಕ ಶೇಕಡಾ 16.12 ರಂತೆ ಆದಾಯ ಯವನ್ನು ನೀಡಿದೆ. ಈ ಸ್ಕೀಂ ನಲ್ಲಿ ಕಳೆದ 15 ವರ್ಷಗಳ ಅವಧಿಗೆ 1 ಲಕ್ಷದ ಮೊತ್ತದ ಹೂಡಿಕೆಯು ಸುಮಾರು 8.34 ಲಕ್ಷ ರೂಗಳಷ್ಟಾಗಿದೆ. ಅದೇ ವೇಳೆ, 15 ವರ್ಷಗಳ ಅವಧಿಗೆ 5000 ರೂ.ಗಳ ಮಾಸಿಕ ಎಸ್‌ಐಪಿ ಮೌಲ್ಯ 32 ಲಕ್ಷ ರೂಗಳಷ್ಟಾಗಿದೆ.
ಐಸಿಐಸಿಐ ಪ್ರುಡೆನ್ಶಲ್ ಚೈಲ್ಡ್ ಕೇರ್ ಫಂಡ್ : ಆಗಸ್ಟ್ 31, 2001 ರಂದು ಈ ಸ್ಕೀಂ ಪ್ರಾರಂಭವಾದಾಗಿನಿಂದ ನಿಧಿಯ ಸಿಎಜಿಆರ್ ಆದಾಯವು ಶೇಕಡಾ 15.58 ರಷ್ಟಿದೆ. 15 ವರ್ಷಗಳಲ್ಲಿ ಒಂದು ಲಕ್ಷ ರೂ.ಗಳ ಮೌಲ್ಯ 5.8 ಲಕ್ಷ ರೂ. ಮಾಸಿಕ 5000 ರೂ.ಗಳ ಎಸ್‌ಐಪಿ ಮೌಲ್ಯವು 24 ಲಕ್ಷ ರೂಗಳಷ್ಟಾಗಿದೆ.
ಯುಟಿಐ ಚಿಲ್ಡರ್ನ್ ಕರಿಯರ್ ಫಂಡ್ : ಜುಲೈ 12, 1993 ರಲ್ಲಿ ಈ ಸ್ಕೀಮ್ ಆರಂಭವಾಯಿತು. ಈ ಸ್ಕೀಂ ಆರಂಭವಾದಾಗಿನಿಂದ ನಿಧಿಯ ಶೇಕಡಾ 10 ರಷ್ಟು ಸಿಎಜಿಆರ್ ಆದಾಯವನ್ನು ಹೊಂದಿದೆ. 15 ವರ್ಷಗಳಲ್ಲಿ 1 ಲಕ್ಷ ರೂ.ಗಳ ಮೌಲ್ಯ 4.12 ಲಕ್ಷ ರೂ.ಗಳಾಗಿದ್ದರೆ, ಮಾಸಿಕ 5000 ರೂ.ಗಳ ಎಸ್‌ಐಪಿ ಮೌಲ್ಯವು 20 ಲಕ್ಷ ರೂ.
ಟಾಟಾ ಯಂಗ್ ಸಿಟಿಜನ್ ಫಂಡ್ : ಈ ಸ್ಕೀಂ ಪ್ರಾರಂಭವಾದಾಗಿನಿಂದ ಈ ನಿಧಿಯು ಶೇಕಡಾ 13 ರಷ್ಟು ಸಿಎಜಿಆರ್ ಆದಾಯವನ್ನು ಹೊಂದಿದೆ. 15 ವರ್ಷಗಳಲ್ಲಿ 1 ಲಕ್ಷ ರೂ.ಗಳ ಮೌಲ್ಯ 4.76 ಲಕ್ಷ ರೂ.ಗಳಾಗಿದ್ದರೆ, ಮಾಸಿಕ 5000 ರೂ.ಗಳ ಎಸ್‌ಐಪಿ ಮೌಲ್ಯವು 22.5 ಲಕ್ಷ ರೂ.