ಲಕ್ಷ್ಮಿ ಕೃಪೆಗೆ ಪಾತ್ರರಾಗಿ, ಅದೃಷ್ಟ ನಿಮ್ಮದಾಗಬೇಕೆಂದರೆ.. ದೀಪಾವಳಿ ಹಬ್ಬದಂದು ಈ ಬಣ್ಣದ ಬಟ್ಟೆಗಳನ್ನು ಧರಿಸಿ!!

Fri, 25 Oct 2024-7:42 am,

Best color clothes to wear on diwali: ದೀಪಾವಳಿಯಂದು ಬಟ್ಟೆಗಳನ್ನು ಖರೀದಿಸುವ ಮೊದಲು ನಿಮಗೆ ಯಾವ ಬಣ್ಣದ ಬಟ್ಟೆ ಹೆಚ್ಚು ಸೂಕ್ತ ಮತ್ತು ಯಾವ ಬಣ್ಣವನ್ನು ತಪ್ಪಿಸುವುದು ಉತ್ತಮ ಎಂಬುದು ತುಂಬಾ ಮುಖ್ಯ. ದೀಪಾವಳಿಯಂದು ಕೆಲವು ಬಣ್ಣಬಣ್ಣದ ಬಟ್ಟೆಗಳನ್ನು ಧರಿಸುವುದು ಲಕ್ಷ್ಮಿ ದೇವಿಯ ಕೃಪೆ ನಿಮ್ಮದಾಗುತ್ತದೆ.   

ದೀಪಾವಳಿ ಎಂದರೆ ಸಂತೋಷದ ಹಬ್ಬ, ಬೆಳಕಿನ ಹಬ್ಬದಂದು ಬಾಳು ಬೆಳಗಬೇಕು ಎಂಬುದು ಎಲ್ಲರ ಆಶಯ. ದೀಪಾವಳಿ ಹಬ್ಬ ಬಂತೆಂದರೆ ಸಾಕು, ಹಲವರು ಒಂದು ತಿಂಗಳಿಗೂ ಮುಂಚೆಯೇ ಶಾಪಿಂಗ್‌ ಮಾಡಲು ಆರಂಭಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಹೊಸ ಬಟ್ಟೆ, ಹೊಸ ವಸ್ತುಗಳನ್ನು ಖರೀದಿಸುತ್ತಾರೆ.   

ದೀಪಾವಳಿ ಹಬ್ಬದಂದು ಯಾವ ಬಣ್ಣವು ಅದೃಷ್ಟವನ್ನು ತರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು . ಲಕ್ಷ್ಮಿ ದೇವಿಗೆ ಇಷ್ಟವಾಗುವ ಬಣ್ಣಗಳ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವುದು ಉತ್ತಮ. ಆಗ ಮಾತ್ರ ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹವು ಹೇರಳವಾಗಿ ಸಿಗುತ್ತದೆ. ದೀಪಾವಳಿ ಹಬ್ಬದಂದು ಕೆಲವು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ, ನಿಮಗೆ ಅದೃಷ್ಟ ಒಲಿದು ಬರಲಿದೆ, ಹಾಗೆಯೇ, ಕೆಲವು ಬಣ್ಣದ ಉಡುಪುಗಳನ್ನು ಈ ದಿನದಂದು ದೂರವಿಡುವುದು ಉತ್ತಮ. ಹಾಗಾದರೆ ಆ ಬಣ್ಣಗಳು ಯಾವುದು? ತಿಳಿಯಲು ಮುಂದೆ ಓದಿ...  

ನಮ್ಮ ಜೀವನದಲ್ಲಿ ಬಣ್ಣಗಳು ಬಹಳ ಮುಖ್ಯ. ಬಣ್ಣವು ನಿಮ್ಮ ಮನಸ್ಥಿತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದರರ್ಥ ಪ್ರತಿಯೊಂದು ಬಣ್ಣವು ಅದರೊಂದಿಗೆ ಸಂಬಂಧಿಸಿದ ಭಾವನೆಯನ್ನು ಹೊಂದಿದೆ. ಧಾರ್ಮಿಕವಾಗಿ, ಕೆಲವು ಬಣ್ಣಗಳು ಸಹ ಸಕಾರಾತ್ಮಕತೆ ಹಾಗೂ ನಕಾರಾತ್ಮಕತೆಯೊಂದಿಗೆ ಸಂಬಂಧ ಹೊಂದಿದೆ. ಧಾರ್ಮಿಕ ಹಬ್ಬಗಳು ಮತ್ತು ಆಚರಣೆಗಳಲ್ಲಿ ಕೆಲವು ಬಣ್ಣಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.   

ಹಬ್ಬದಂದು ಧರಿಸಿಬೇಕಾದ ಬಣ್ಣಗಳು ದೀಪಾವಳಿಗೆ ಹೊಸ ಬಟ್ಟೆಗಳನ್ನು ಖರೀದಿಸುವ ಮೊದಲು ಸರಿಯಾದ ಬಣ್ಣಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದರಿಂದ ನೀವು ಸರಿಯಾದ ಉಡುಪನ್ನು ಆಯ್ಕೆ ಮಾಡಬಹುದು. ದೀಪಾವಳಿಯಂದು ನೀವು ಗುಲಾಬಿ, ಚಿನ್ನ, ನೀಲಿ, ಹಸಿರು, ಕೆಂಪು, ಕಿತ್ತಳೆ, ಹಳದಿ, ಬಿಳಿಯಂತಹ ಪ್ರಕಾಶಮಾನವಾದ, ಆಕರ್ಷಕ ಬಣ್ಣಗಳನ್ನು ಧರಿಸಬಹುದು. 

ಹಬ್ಬದಂದು ಧರಿಸಬಾರದಾದ ಬಣ್ಣಗಳು ದೀಪಾವಳಿಯಲ್ಲಿ ನೀವು ಏನು ಧರಿಸುತ್ತೀರಿ ಎಂಬುದು ಕೂಡ ಬಹಳ ಮುಖ್ಯ. ಆದ್ದರಿಂದ ನೀವು ನಿಮ್ಮ ಬಟ್ಟೆಗಳನ್ನು ಎಚ್ಚರಿಕೆಯಿಂದ ಆರಿಸಬೇಕು. ದೀಪಾವಳಿಗೆ ಕಪ್ಪು ಬಟ್ಟೆ ಖರೀದಿಸಬಾರದು. ಧಾರ್ಮಿಕವಾಗಿ ಕಪ್ಪು ಬಣ್ಣವನ್ನು ದುಃಖ ಮತ್ತು ಬಡತನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಕಪ್ಪು ಬಣ್ಣ ಮತ್ತು ಅದರ ವಿಭಿನ್ನ ಛಾಯೆಗಳನ್ನು ಧರಿಸದಿರುವುದು ಉತ್ತಮ   

ZEENEWS TRENDING STORIES

By continuing to use the site, you agree to the use of cookies. You can find out more by Tapping this link