ಅದೃಷ್ಟ ಒಲಿಯಲು ಪೊರಕೆಯನ್ನು ಮನೆಯ ಈ ದಿಕ್ಕಿನಲ್ಲಿಯೇ ಇಡಿ ! ನಿಮ್ಮ ಗೋಲ್ಡನ್ ಟೈಮ್ ಅಲ್ಲಿಂದಲೇ ಶುರುವಾಗುವುದು!
ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಮನೆಯಲ್ಲಿ ಇಡುವ ಪೊರಕೆಗೂ ಹೆಚ್ಚಿನ ಮಹತ್ವವಿದೆ.
ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಿಂದ ಕೊಳಕು ಮತ್ತು ಬಡತನವನ್ನು ಮಾತ್ರ ಓಡಿಸುತ್ತದೆ.
ವಾಸ್ತು ಪ್ರಕಾರ, ಮನೆಯಲ್ಲಿ ಪೊರಕೆ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಬಡತನವನ್ನು ತೊಡೆದುಹಾಕುತ್ತದೆ. ಪೊರಕೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಅನುಸರಿಸದಿದ್ದರೆ, ಮನೆಯಲ್ಲಿ ಸಮಸ್ಯೆಗಳು ತಪ್ಪಿದ್ದಲ್ಲ.
ಪೊರಕೆ ಇಡುವ ಸರಿಯಾದ ದಿಕ್ಕು ನೈಋತ್ಯ ಅಥವಾ ಪಶ್ಚಿಮ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ದಿಕ್ಕಿನಲ್ಲಿ ಪೊರಕೆಯನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಹರಡುವುದಿಲ್ಲ ಎಂದು ನಂಬಲಾಗಿದೆ. ಇದರಿಂದ ಸಂಪತ್ತು ವೃದ್ಧಿಯಾಗುವುದು.
ಪೊರಕೆಯನ್ನು ಎಂದಿಗೂ ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ಇದು ಮನೆಯಲ್ಲಿ ಬಡತನವನ್ನು ತರುತ್ತದೆ. ಜೊತೆಗೆ ಜಗಳ ತಾಪತ್ರಯಕ್ಕೂ ಕಾರಣವಾಗುತ್ತದೆ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)