ವಿಜಯದಶಮಿ ದಿನ ಬೆಳಗುವ ದೀಪಕ್ಕೆ ತುಪ್ಪ ಅಲ್ಲ ಈ ಎಣ್ಣೆ ಬಳಸಿ!ದೀಪವನ್ನು ಇದೇ ದಿಕ್ಕಿನಲ್ಲಿಟ್ಟರೆ ಉಕ್ಕುವುದು ಧನ !ಬಂಗಲೆ, ಕಾರು, ಸಿರಿ ಸಂಪತ್ತು ಖಂಡಿತಾ ಒಲಿಯುವುದು
ವಿಜಯ ದಶಮಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ.ಈ ದಿನ ಮನೆಯಲ್ಲಿ ಬೆಳಗುವ ದೀಪಕ್ಕೂ ಅಷ್ಟೇ ಪ್ರಾಧಾನ್ಯತೆ ಇದೆ.
ವಿಜಯದಶಮಿ ದಿನ ದೀಪಗಳನ್ನು ಹಚ್ಚುವ ನಿಯಮವನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ಎಷ್ಟು ದೀಪಗಳನ್ನು ಹಚ್ಚಬೇಕು?ಯಾವ ದೀಪಕ್ಕೆ ಯಾವ ಎಣ್ಣೆ ಬಳಸಬೇಕು ಎನ್ನುವುದನ್ನು ಕೂಡಾ ಹೇಳಲಾಗಿದೆ.
ಶಾಸ್ತ್ರದ ಪ್ರಕಾರ ವಿಜಯ ದಶಮಿ ದಿನ 10 ದೀಪಗಳನ್ನು ಬೆಳಗಿಸಬಹುದು. ಈ ಪೈಕಿ 9 ದೀಪಗಳಿಗೆ ಸಾಸಿವೆ ಎಣ್ಣೆಯನ್ನೇ ಬಳಸಬೇಕು.ಒಂದು ದೀಪಕ್ಕೆ ತುಪ್ಪ ಬಳಸಬೇಕು.
ಹಿಂದೂ ಧರ್ಮದ ಪೂಜ್ಯ ಸಸ್ಯಗಳಾದ ತುಳಸಿ, ಅಶ್ವಥ ಮರ, ಶಮಿ, ಆಲ ಮತ್ತು ಬಾಳೆಗೆ 5 ದೀಪಗಳನ್ನು ಬೆಳಗಿಸಬೇಕು.ಈ ದೀಪಗಳಿಗೆ ತುಪ್ಪವನ್ನೇ ಬಳಸಬೇಕು.
ವಿಜಯದಶಮಿಯಂದು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ , ಆಗ್ನೇಯ, ವಾಯುವ್ಯ, ನೈಋತ್ಯ ಹೀಗೆ ಅಷ್ಟ ದಿಕ್ಕಿನಲ್ಲಿಯೂ ದೀಪವನ್ನು ಬೆಳಗಿಸುವುದು ಮಂಗಳಕರ.
ದಸರಾದಲ್ಲಿ ದೀಪಗಳನ್ನು ಹಚ್ಚುವ ಸಮಯ ಬಹಳ ಮುಖ್ಯ.ಬೆಳಿಗ್ಗೆ ಮತ್ತು ಸಂಜೆ ತುಪ್ಪದ ದೀಪವನ್ನು ಹಚ್ಚಬೇಕು.ಉಳಿದ ದೀಪಗಳನ್ನು ಸಾಯಂಕಾಲವಷ್ಟೇ ಬೆಳಗಿಸಬೇಕು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ZEE NEWS ಅದನ್ನು ಖಚಿತಪಡಿಸುವುದಿಲ್ಲ.