ಬೆಳಗ್ಗೆ ಏಳುವಾಗ ತಪ್ಪಿಯೂ ಈ ದಿಕ್ಕಿಗೆ ಮುಖಹಾಕಿ ಏಳಬೇಡಿ... ಇಡೀ ದಿನ ಹಾಳಾಗುವುದು! ಕೈಹಾಕಿದ ಪ್ರತಿ ಕೆಲಸದಲ್ಲೂ ಸೋಲೇ... ದಿನಾಂತ್ಯಕ್ಕೆ ಕಣ್ಣೀರೇ ಸುರಿಯುವುದು!
ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ವಾಸ್ತುವಿನಲ್ಲಿ, ಪ್ರತಿಯೊಂದಕ್ಕೂ ನಿರ್ದಿಷ್ಟ ದಿಕ್ಕನ್ನು ನಿಗದಿಪಡಿಸಲಾಗಿದ್ದು, ಮಲಗಲು-ಏಳಲು ಸಹ ನಿಯಮಗಳನ್ನು ಮಾಡಲಾಗಿದೆ.
ಯಾವುದೇ ವ್ಯಕ್ತಿಯು ಆರೋಗ್ಯವಾಗಿರಲು ಉತ್ತಮ ನಿದ್ರೆ ಬಹಳ ಮುಖ್ಯ. ಸಂಪೂರ್ಣ ನಿದ್ದೆ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ವಾಸ್ತು ಪ್ರಕಾರ, ಸರಿಯಾದ ದಿಕ್ಕಿನಲ್ಲಿ ಮಲಗುವುದು ಎಷ್ಟು ಮುಖ್ಯವೋ... ಅಷ್ಟೇ ಮುಖ್ಯ ಮುಂಜಾನೆ ಏಳುವ ದಿಕ್ಕು.
ತಪ್ಪು ದಿಕ್ಕಿಗೆ ಮುಖಹಾಕಿ ಎದ್ದರೆ ಆ ದಿನ ಸಂಪೂರ್ಣ ಕಠಿಣವಾಗಿರುವುದಲ್ಲದೆ, ಪ್ರತಿ ಕೆಲಸದಲ್ಲೂ ಎಡವುತ್ತಾರೆ. ಅಷ್ಟೇ ಅಲ್ಲದೆ, ಮಾನಸಿಕ ಒತ್ತಡ, ಸೋಮಾರಿತನ ಮತ್ತು ನಕಾರಾತ್ಮಕ ಶಕ್ತಿ ಆವರಿಸಿಕೊಳ್ಳುತ್ತದೆ. ವಾಸ್ತು ಪ್ರಕಾರ ಮಲಗುವ ಮತ್ತು ಏಳುವ ಸರಿಯಾದ ದಿಕ್ಕು ಯಾವುದು ಎಂದು ತಿಳಿಯೋಣ.
ವಾಸ್ತು ಪ್ರಕಾರ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಬಾರದು. ಉತ್ತರ ದಿಕ್ಕನ್ನು ಅಶುಭ ಮತ್ತು ನಕಾರಾತ್ಮಕ ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ. ಉತ್ತರ ದಿಕ್ಕಿಗೆ ಮಲಗುವುದರಿಂದ, ಆ ವ್ಯಕ್ತಿಯು ಅನೇಕ ಪ್ರಮುಖ ಕಾಯಿಲೆಗಳಿಂದ ತೊಂದರೆಗೊಳಗಾಗುತ್ತಾನೆ ಎಂದು ನಂಬಲಾಗಿದೆ.
ಇನ್ನೊಂದೆಡೆ ಮುಂಜಾನೆ ಏಳುವಾಗ ತರಾತುರಿಯಲ್ಲಿ ಅನೇಕರು ಏಳುತ್ತಾರೆ. ಆದರೆ ಈ ವೇಳೆ ದಿಕ್ಕುಗಳನ್ನು ಪರಿಗಣಿಸುವುದು ಅಗತ್ಯ. ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗಿರುವ ನೀವು ನಿಮ್ಮ ಎಡಭಾಗಕ್ಕೆ ಮುಖಹಾಕಿ ಏಳಬೇಕು. ಹೀಗೆ ಮಾಡುವುದರಿಂದ ನೀವು ಆ ದಿನ ಸಂತೋಷದಿಂದ ಇರುತ್ತೀರಿ. ಅಷ್ಟೇ ಅಲ್ಲದೆ, ಕೈಗೊಳ್ಳುವ ಕೆಲಸಗಳು ಯಶಸ್ವಿಯಾಗುತ್ತವೆ.
ವಾಸ್ತು ಪ್ರಕಾರ, ದಕ್ಷಿಣಕ್ಕೆ ತಲೆಯಿಟ್ಟು ಮಲಗುವುದು ತುಂಬಾ ಮಂಗಳಕರ. ಉತ್ತಮ ನಿದ್ರೆಗೆ ಈ ದಿಕ್ಕು ತುಂಬಾ ಒಳ್ಳೆಯದು. ಇದರಿಂದ ಸಂತೋಷ ಮತ್ತು ಸಮೃದ್ಧಿ, ಉತ್ತಮ ಆರೋಗ್ಯ, ಅದೃಷ್ಟ, ಯಶಸ್ಸು ಮತ್ತು ಸಂಪತ್ತಿನ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಜ್ಞಾಪಕ ಶಕ್ತಿ, ಏಕಾಗ್ರತೆ ಮತ್ತು ಆಧ್ಯಾತ್ಮಿಕತೆಯತ್ತ ಒಲವು ಹೆಚ್ಚುತ್ತದೆ. ವಾಸ್ತು ಪ್ರಕಾರ, ಈ ದಿಕ್ಕಿಗೆ ತಲೆಯಿಟ್ಟು ಮಲಗುವುದು ಶಿಕ್ಷಣ ಮತ್ತು ವೃತ್ತಿಗೆ ಹೊಸ ಅವಕಾಶಗಳನ್ನು ತರುತ್ತದೆ.
ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಕೇವಲ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಯಾವುದೇ ಮಾಹಿತಿಯನ್ನು ಅನುಮೋದಿಸುವುದಿಲ್ಲ ಅಥವಾ ದೃಢೀಕರಿಸುವುದಿಲ್ಲ.