ಮನೆ ಬಾಗಿಲಿನ ಈ ಬದಿಯಲ್ಲಿ ಯಾವತ್ತೂ ಚಪ್ಪಲಿ ಬಿಡಬಾರದು!ದರಿದ್ರ ಅಂಟಿಕೊಂಡು ಹೊರಟು ಹೋಗುವುದು ಸಿರಿವಂತಿಕೆ !
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪಾದರಕ್ಷೆ,ಚಪ್ಪಲಿ ಇಡಲು ಕೆಲವು ನಿಯಮಗಳನ್ನು ಹೇಳಲಾಗಿದೆ.ಈ ನಿಯಮಗಳನ್ನು ಪಾಲಿಸಿದರೆ ಜೀವನದಲ್ಲಿ ಎದುರಾಗಬಹುದಾದ ಅನೇಕ ಸಮಸ್ಯೆಗಳು ದೂರವಾಗುವುದು.
ಶೂ ಮತ್ತು ಚಪ್ಪಲಿಗಳನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು.ಚಪ್ಪಲಿಗಳನ್ನು ಮನೆಯ ಮುಂದೆ ತಲೆ ಕೆಳಗಾಗಿ ಬಿಡುವುದರಿಂದ ಮನೆಯೊಳಗೆ ನೆಗಟೀವ್ ಎನರ್ಜಿ ನುಗ್ಗಿ ಮಾನಸಿಕ ನೆಮ್ಮದಿ ಹಾಳಾಗಿ ರೋಗಗಳ ಸುಳಿಗೆ ಸಿಲುಕಿಸುತ್ತದೆ.
ಅಡುಗೆಮನೆ ತಾಯಿ ಅನ್ನಪೂರ್ಣೆಯ ವಾಸಸ್ಥಾನ. ಅಲ್ಲಿ ಪಾದರಕ್ಷೆ ಮತ್ತು ಚಪ್ಪಲಿ ಧರಿಸಿಕೊಂಡು ಹೋಗಬಾರದು.ಇದು ತಾಯಿ ಅನ್ನಪೂರ್ಣೆಗೆ ತೋರುವ ಅಗೌರವ.
ಮಲಗುವ ಕೋಣೆಯಲ್ಲಿ ಶೂ ಮತ್ತು ಚಪ್ಪಲಿಗಳನ್ನು ಇಡಬೇಡಿ. ಇದು ಪತಿ-ಪತ್ನಿಯರ ನಡುವಿನ ಸಂಬಂಧ ಹಳಸಲು ಕಾರಣವಾಗುತ್ತದೆ.
ಬೂಟುಗಳು ಮತ್ತು ಚಪ್ಪಲಿಗಳನ್ನು ಎಂದಿಗೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಬಿಡಬಾರದು.ಈ ಎರಡೂ ದಿಕ್ಕು ಬಹಳ ಮಂಗಳಕರ.ಈ ದಿಕ್ಕುಗಳಲ್ಲಿ ಬೂಟುಗಳು ಮತ್ತು ಚಪ್ಪಲಿಗಳನ್ನು ಬಿಟ್ಟರೆ ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಮನೆ ಪ್ರವೇಶಿಸುವಾಗ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಶೂ ಮತ್ತು ಚಪ್ಪಲಿಗಳನ್ನು ಬಿಟ್ಟರೆ ಉತ್ತಮ.ಇವೆರಡನ್ನೂ ಯಮನ ದಿಕ್ಕುಗಳೆಂದು ಕರೆಯಲಾಗುತ್ತದೆ.ಇಲ್ಲಿ ಚಪ್ಪಲಿ ಬಿಟ್ಟರೆ ಯಾವ ಸಮಸ್ಯೆಯೂ ಇಲ್ಲ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.