ಊಟಕ್ಕಿಂತ ಅರ್ಧ ಗಂಟೆ ಮೊದಲು ಈ ಒಣ ಹಣ್ಣು ಸೇವಿಸಿದರೆ ಬ್ಲಡ್ ಶುಗರ್ ನಾರ್ಮಲ್ ಆಗಿರುವುದು ಖಂಡಿತಾ ! ಮಧುಮೇಹಿಗಳಿಗೆ ಇದು ಸಂಜೀವಿನಿ
ಮಧುಮೇಹ ಇದ್ದಾಗ ರಕ್ತದ ಸಕ್ಕರೆ ಹೆಚ್ಚಾಗದಂತೆ ತಡೆಯಲು ಆಹಾರ ಪದಾರ್ಥಗಳಲ್ಲಿ ಪಥ್ಯ ಮಾಡಬೆಲಾಗುತ್ತದೆ. ಏನು ತಿನ್ನಬೇಕು, ಏನು ಕುಡಿಯಬೇಕು ಎನ್ನುವುದನ್ನು ಅಳೆದು ತೂಗಿ ಮಾಡಬೇಕಾಗುತ್ತದೆ. ಆದರೆ ಊಟಕ್ಕೆ ಅರ್ಧ ಗಂಟೆ ಈ ಒಣಹಣ್ಣು ತಿಂದರೆ ಶುಗರ್ ಏರುವ ಚಿಂತೆಯೇ ಎದುರಾಗುವುದಿಲ್ಲ.
ಬ್ಲಡ್ ಶುಗರ್ ಏರದಂತೆ ತಡೆಯಬೇಕಾದರೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಭೋಜನ ಹೀಗೆ ಏನೇ ಇರಲಿ ಆಹಾರ ಸೇವಿಸುವ ಅರ್ಧ ಗಂಟೆ ಮೊದಲು ಈ ಒಣ ಹಣ್ಣು ತಿನ್ನಲು ಮರೆಯಬೇಡಿ.
ಬಾದಾಮಿಯನ್ನು ಆಹಾರ ಸೇವನೆಯ ಅರ್ಧ ಗಂಟೆ ಮುನ್ನ ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
ಬಾದಾಮಿಯಲ್ಲಿ ಹೇರಳವಾದ ಮೊನೊ- ಎನ್ ಸ್ಯಾಚ್ಯುರೆಟೆಡ್ ಫ್ಯಾಟ್, ಫೈಬರ್ ಮತ್ತು ಪ್ರೋಟೀನ್ ಕಂಡು ಬರುತ್ತದೆ. ಇದು ಬ್ಲಡ್ ಶುಗರ್ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ.
ಬ್ಲಡ್ ಶುಗರ್ ಹೆಚ್ಚಾಗುವುದೇ ಆಹಾರ ಸೇವಿಸಿದ ಮೇಲೆ.ಇದನ್ನು ಕಂಟ್ರೋಲ್ ಮಾಡಬೇಕಾದರೆ ಆಹಾರ ಸೇವಿಸುವ ಅರ್ಧ ಗಂಟೆ ಮುನ್ನ 20 ಗ್ರಾಂ ಬಾದಾಮಿ ತಿನ್ನುವುದು ಒಳ್ಳೆಯದು.
ಹಾಗಂತ ಬಾದಾಮಿಯನ್ನು ಹಾಗೆಯೇ ತೆಗೆದು ತಿನ್ನುವುದಲ್ಲ. ಬಾದಾಮಿಯನ್ನು 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಸಿಪ್ಪೆ ಸುಲಿದೇ ತಿನ್ನಬೇಕು.ಸಿಪ್ಪೆ ಸಹಿತ ಬಾದಾಮಿಯನ್ನು ಎಂದೂ ಸೇವಿಸಬಾರದು.
ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.