Fiber Rich Breakfast: ಉತ್ತಮ ಆರೋಗ್ಯಕ್ಕಾಗಿ ಅತ್ಯುತ್ತಮ ಫೈಬರ್ ಭರಿತ ಉಪಹಾರಗಳಿವು
ಸಸ್ಯ ಆಧಾರಿತ ಆಹಾರಗಳಲ್ಲಿ ಫೈಬರ್ ಹೆಚ್ಚಾಗಿ ಕಂಡು ಬರುತ್ತದೆ. ಮಹಿಳೆಯರಿಗೆ ದಿನಕ್ಕೆ 21 ರಿಂದ 25 ಗ್ರಾಂ ಪೋಷಕಾಂಶದ ಅಗತ್ಯವಿರುತ್ತದೆ ಮತ್ತು ಪುರುಷರಿಗೆ 30 ರಿಂದ 38 ಗ್ರಾಂ ಅಗತ್ಯವಿರುತ್ತದೆ. ಇದು ನಮ್ಮ ಜೀರ್ಣಾಂಗವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ಅತ್ಯುತ್ತಮ ಫೈಬರ್ ಭರಿತ ಉಪಹಾರಗಳು ಯಾವುವೆಂದರೆ...
ನಿತ್ಯ ಒಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. ಬೆಳಗಿನ ಉಪಹಾರದಲ್ಲಿ ಒಂದು ಮಧ್ಯಮ ಗಾತ್ರದ ಸೇಬು ತಿನ್ನುವುದರಿಂದ ಸರಿಸುಮಾರು 4.4 ಗ್ರಾಂ ಫೈಬರ್ ಲಭ್ಯವಾಗುತ್ತದೆ.
ದುಬಾರಿ ಹಣ್ಣುಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿರುವ ಆವಕಾಡೊ ಫೈಬರ್‌ನ ಅತ್ಯುತ್ತಮ ಮೂಲ. ಈ ಹಣ್ಣಿನ ಸೇವನೆಯಿಂದ ಹಲವು ರೋಗಗಳಿಂದ ದೂರ ಉಳಿಯಬಹುದು.
ಒಂದು ಕಪ್ ಬ್ಲಾಕ್ ಬೀನ್ಸ್ ಸೇವನೆಯಿಂದ ದೇಹಕ್ಕೆ 15ಗ್ರಾಂ ಫೈಬರ್ ಸಿಗುತ್ತದೆ. ಬ್ಲಾಕ್ ಬೀನ್ಸ್ ಫೈಬರ್ ಮಾತ್ರವಲ್ಲದೆ ಹೊಟ್ಟೆಗೆ ಪ್ರಯೋಜನಕಾರಿಯಾದ ಇನ್ನೂ ಹಲವು ಪೋಷಕಾಂಶಗಳನ್ನು ಹೊಂದಿದೆ.
ಆರೋಗ್ಯಕರ ತೂಕ ಇಳಿಕೆಗಾಗಿ ಅತ್ಯುತ್ತಮ ಉಪಾಹಾರ ಎಂದು ಪರಿಗಣಿಸಲಾಗಿರುವ ಆಹಾರಗಳಲ್ಲಿ ಓಟ್ಸ್ ಕೂಡ ಒಂದು . ಒಂದು ಕಪ್ ಓಟ್ಸ್ ಸೇವನೆಯಿಂದ ಸುಮಾರು 8ಗ್ರಾಂ ಫೈಬರ್ ಲಭ್ಯವಾಗುತ್ತದೆ. ಇದು ಉದರದ ಆರೋಗ್ಯಕ್ಕೆ ಮಾತ್ರವಲ್ಲ, ಬ್ಲಡ್ ಶುಗರ್ ಅನ್ನು ಕೂಡ ಕಂಟ್ರೋಲ್ ಮಾಡುತ್ತದೆ.
ಸಿರಿ ಧಾನ್ಯಗಳಲ್ಲಿ ಒಂದಾದ ನವಣೆ ಅಕ್ಕಿಯನ್ನು ಬೆಳಗಿನ ಉಪಹಾರದಲ್ಲಿ ಸೇರಿಸುವುದರಿಂದ ಇದು ದೇಹಕ್ಕೆ ಫೈಬರ್ ಜೊತೆಗೆ ಸಾಕಷ್ಟು ಪ್ರೊಟೀನ್ ಅನ್ನು ಕೂಡ ನೀಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.