ಮಲಗುವ ಮುನ್ನ ಇದೊಂದು ಹಣ್ಣು ಸೇವೀದರೆ ಕ್ಷಣ ಮಾತ್ರದಲ್ಲಿ ಆವರಿಸುವುದು ಗಾಢ ನಿದ್ದೆ !ಇದು ನೈಸರ್ಗಿಕ ನಿದ್ದೆ ಮಾತ್ರೆ ಎಂದರೆ ತಪ್ಪಲ್ಲ !
ಮಲಗುವ ಮುನ್ನ ಕೆಲಕಾಲ ನಡೆದಾಡುವುದು, ನೆತ್ತಿ ಮಸಾಜ್ ಮಾಡುವುದು, ಕೆಲವೊಂದು ಮಂತ್ರ ಪಠಿಸುವುದು ಮಾಡಿದರೆ ನಿದ್ದೆ ಬರುತ್ತದೆ ಎಂದು ಹೇಳುತ್ತಾರೆ. ಆದರೆ ಇದು ಎಲ್ಲಾ ಸದರ್ಭಗಳಲ್ಲಿಯೂ ಸಾಧ್ಯವಾಗುವುದಿಲ್ಲ.
ಇದರ ಬದಲು ಮಲಗುವ ಮುನ್ನ ಈ ಹಣ್ಣನ್ನು ತಿಂದರೆ, ಕೆಲ ನಿಮಿಷಗಳಲ್ಲಿಯೇ ಗಾಢ ನಿದ್ದೆ ನಿಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ನಿದ್ರಾಹೀನತೆ ಸಮಸ್ಯೆ ಇರುವವರು ಖಂಡಿತವಾಗಿಯೂ ಈ ಹಣ್ಣನ್ನು ಪ್ರಯತ್ನಿಸುವುದು ಒಳ್ಳೆಯದು.
ಮಲಗುವ ಮುನ್ನ ಬಾಳೆಹಣ್ಣು ತಿಂದರೆ ಬಹಳ ಬೇಗ ನಿದ್ದೆ ಬರುತ್ತದೆ. ಬಾಳೆಹಣ್ಣಿನಲ್ಲಿ ಮೆಗ್ನಿಸಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ಇದು ಪ್ರಾಕೃತಿಕ ನಿದ್ದೆಯ ಮಾತ್ರೆಯಂತೆ ಕೆಲಸ ಮಾಡುತ್ತದೆ.
ದಣಿದ ಸ್ನಾಯುಗಳನ್ನು ವಿಶ್ರಾಂತಿಗೊಳಿಸುವಲ್ಲಿ ಬಾಳೆಹಣ್ಣು ಬಹುದೊಡ್ಡ ಪಾತ್ರ ವಹಿಸುತ್ತದೆ.ಇದರಲ್ಲಿ ಮೆದುಳನ್ನು ಶಾಂತಗೊಳಿಸುವ ಅಮೈನೊ ಆಮ್ಲ ಟ್ರಿಪ್ಟೊಫಾನ್ ಕೂಡಾ ಇರುವುದರಿಂದ ಇದು ನಿದ್ದೆಗೆ ಸಹಾಯ ಮಾಡುತ್ತದೆ.
ರಾತ್ರಿ ಹೊತ್ತು ಉತ್ತಮ ನಿದ್ದೆ ಬರಬೇಕಾದರೆ ಮೆಗ್ನೀಸಿಯಮ್ ಮತ್ತು ಮೆಲಟೋನಿನ್ ಹೊಂದಿರುವ ಆಹಾರವನ್ನು ಸೇವಿಸಬೇಕು. ಇದು ಉತ್ತಮ ನಿದ್ರೆಗೆ ಸಹಾಯ ಮಾಡುವ ಅಂಶ.
ಒಂದು ವೇಳೆ ಬಾಳೆಹಣ್ಣು ತಿನ್ನಲು ಇಷ್ಟವಿಲ್ಲ ಎಂದಾದರೆ ಮೆಲಟೋನಿನ್ ಅಥವಾ ನಿದ್ರೆಯ ಹಾರ್ಮೋನ್ ಉತ್ಪಾದಿಸಲು ಸಹಾಯ ಮಾಡುವ ದ್ರಾಕ್ಷಿ, ಚೆರ್ರಿ ಹಣ್ಣು, ಸ್ಟ್ರಾಬೆರಿ ಕೂಡಾ ಸೇವಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ