ನೀರಿನಲ್ಲಿ ಈ ಪದಾರ್ಥ ಹಾಕಿ ಸಿಂಪಡಿಸಿದ್ರೆ ಜಿರಳೆ.. ನೊಣಗಳೆಲ್ಲ ಕ್ಷಣಾರ್ಧಲ್ಲೇ ಮಾಯವಾಗುತ್ತವೆ! ಬೇಕಿದ್ರೆ ಟ್ರೈ ಮಾಡಿ ನೋಡಿ!!
ಮನೆಯಲ್ಲಿ ಜಿರಳೆಗಳು ಓಡಾಡುವುದನ್ನು ಯಾರೂ ಇಷ್ಟಪಡುವುದಿಲ್ಲ, ಆದರೂ ಕೆಲವರು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಜಿರಳೆಗಳು ಬ್ಯಾಕ್ಟೀರಿಯಾವನ್ನು ಹರಡುವ ಕೆಲಸ ಮಾಡುತ್ತವೆ. ಅವು ತಮ್ಮ ಬ್ಯಾಕ್ಟೀರಿಯಾವನ್ನು ಅಡುಗೆ ಪಾತ್ರೆಗಳು, ತರಕಾರಿಗಳು ಮತ್ತು ಹಣ್ಣುಗಳ ಮೇಲೆ ಬಿಡುತ್ತವೆ.. ಈ ಕಾರಣದಿಂದಾಗಿ, ರೋಗ ಹರಡುವ ಅಪಾಯ ಹೆಚ್ಚಾಗುತ್ತದೆ. ಜಿರಳೆಗಳನ್ನು ತಪ್ಪಿಸಲು, ಜನರು ಸ್ವಚ್ಛಗೊಳಿಸಲು ಹೆಚ್ಚು ಗಮನ ನೀಡುಬೇಕು..
ಅನೇಕ ಬಾರಿ, ಒರೆಸಿದ ನಂತರವೂ ಜಿರಳೆಗಳು ನೆಲದ ಮೇಲೆ ಓಡಾಡುವುದನ್ನು ನೀವು ಗಮನಿಸಿರಬಹುದು.. ಆದರೆ ಆಗ ಅವುಗಳನ್ನು ಹೇಗೆ ಓಡಿಸಬೇಕು ಎಂದು ಅರ್ಥವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮಾಪ್ ಬಕೆಟ್‌ನಲ್ಲಿ ಲವಂಗದ ಜೊತೆಗೆ ಕೆಲವು ವಸ್ತುಗಳನ್ನು ಬೆರೆಸುವ ಉಪಾಯವನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಈ ತಂತ್ರಗಳನ್ನು ಅಳವಡಿಸಿಕೊಂಡರೆ ನೀವು ನೆಲದ ಮೇಲೆ ಜಿರಳೆ.. ನೋಣಗಳನ್ನು ನೋಡುವುದೇ ಇಲ್ಲ..
ಜಿರಳೆಗಳನ್ನು ನೊಣಗಳನ್ನು ಓಡಿಸಲು ನೀವು ಲವಂಗವನ್ನು ಬಳಸಬಹುದು.. ಇದಕ್ಕಾಗಿ ಲವಂಗವನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಂಡು ಆ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ. ನಂತರ ಅದನ್ನು ಮಾಪಿಂಗ್ ಬಕೆಟ್‌ನಲ್ಲಿ ಮಿಶ್ರಣ ಮಾಡಿ.. ನೆಲ ಒರೆಸಿ..
ಜಿರಳೆಗಳು ಬಿರಿಯಾನಿ ಎಲೆಗಳ ವಾಸನೆಯನ್ನು ಇಷ್ಟಪಡುವುದಿಲ್ಲ, ಆದ್ದರಿಂದ ನೀವು ಅದನ್ನು ನೆಲ ಒರೆಸಲು ಬಳಸಬಹುದು. ಮೊದಲು ಬಿರಿಯಾನಿ ಎಲೆಗಳ ಪೇಸ್ಟ್ ಅನ್ನು ತಯಾರಿಸಿ ಬಕೆಟ್‌ನಲ್ಲಿ ಒಂದು ಚಮಚ ಹಾಕಿ ಮಿಶ್ರಣ ಮಾಡಿ ಬಳಿಕ ಆ ನೀರಿನಿಂದ ಮನೆ ಸ್ವಚ್ಚಗೊಳಿಸಿ.
ಹಾಗಲಕಾಯಿ ಜಿರಳೆಗಳನ್ನು ತೊಡೆದುಹಾಕಲು ಉಪಯುಕ್ತವಾಗಿದೆ. ಇದರ ಪೇಸ್ಟ್‌ನ್ನು ಅಥವಾ ಕುದಿಸಿದ ನೀರನ್ನು ಸೇರಿಸಿ ನೆಲ ಒರೆಸಿದರೇ ಒಂದು ಜಿರಳೆ.. ಸೊಳ್ಳೆ ನೊಣ ಯಾವ ಕೀಟಗಳೂ ಮನೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ..
(ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ)