ಈ ಹಣ್ಣನ್ನು ಸೇವಿಸಿದ ನಿಮಿಷಗಳಲ್ಲಿಯೇ ನಾರ್ಮಲ್ ಆಗುತ್ತದೆ ಹೈ ಬ್ಲಡ್ ಪ್ರೆಶರ್ !ಹೃದಯಾಘಾತವಾಗದಂತೆ ತಡೆಯುವ ಪರಮ ಔಷಧವಿದು !
)
ಹೈ ಬಿಪಿ ಅಥವಾ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು, ಔಷಧಿಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಆದರೆ ಕೆಲವು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ಬಿಪಿ ಮಟ್ಟವನ್ನು ನೈಸರ್ಗಿಕವಾಗಿ ನಾರ್ಮಲ್ ಮಾಡಬಹುದು.
)
ಟೊಮೆಟೊ ರಸವನ್ನು ಕುಡಿಯುವುದರಿಂದ ಅಧಿಕ ಬಿಪಿ ಮಟ್ಟವನ್ನು ಕಡಿಮೆ ಮಾಡಬಹುದು. ಆಂಟಿಆಕ್ಸಿಡೆಂಟ್‌ಗಳು, ಆಂಟಿಬ್ಯಾಕ್ಟೀರಿಯಲ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
)
ಅಧ್ಯಯನದ ಪ್ರಕಾರ, ಕ್ರ್ಯಾನ್ಬೆರಿ ಹಣ್ಣುಗಳು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.8 ವಾರಗಳ ಕಾಲ ಕ್ರ್ಯಾನ್ಬೆರಿ ಜ್ಯೂಸ್ ಸೇವಿಸಿದ ಜನರಲ್ಲಿ ರಕ್ತದೊತ್ತಡದ ಮಟ್ಟದಲ್ಲಿ ಇಳಿಕೆ ಕಂಡುಬರುತ್ತದೆ.
ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದಾಳಿಂಬೆ ತಿನ್ನುವುದು ಮತ್ತು ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡ ಹೆಚ್ಚಾಗುವುದನ್ನು ತಡೆಯಬಹುದು.
ಪೌಷ್ಟಿಕಾಂಶದ ಆಗರವಾಗಿರುವ ಬೀಟ್ರೂಟ್ ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಅಂಶಗಳ ಹೊರತಾಗಿ, ಉತ್ಕರ್ಷಣ ನಿರೋಧಕಗಳನ್ನು ಕೂಡಾ ಹೊಂದಿವೆ. ಬೀಟ್ರೂಟ್ ತಿನ್ನುವುದು ಮತ್ತು ಬೀಟ್ರೂಟ್ ಜ್ಯೂಸ್ ಕುಡಿಯುವುದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಫೈಬರ್ ಮತ್ತು ಪೊಟ್ಯಾಸಿಯಮ್ ಹೊರತುಪಡಿಸಿ, ವಿಟಮಿನ್ ಎ ಕೂಡಾ ಕ್ಯಾರೆಟ್‌ನಲ್ಲಿ ಕಂಡುಬರುತ್ತದೆ. ಈ ಎಲ್ಲಾ ಅಂಶಗಳು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಕೆಲಸ ಮಾಡುತ್ತವೆ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.