ಬೋಳು ತಲೆಯಲ್ಲಿಯೂ ಕೂದಲು ಮೂಡುವಂತೆ ಮಾಡುತ್ತದೆ ಈ ಮನೆ ಮನೆ ಮದ್ದು
ಒಮ್ಮೆ ಕೂದಲು ಉದುರಲು ಆರಂಭಿಸಿದರೆ ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ಕೂದಲು ಉದುರುವುದು ನಿಯಂತ್ರಿಸುವುದು ಮಾತ್ರವಲ್ಲ ಆ ಜಾಗದಲ್ಲಿ ಕೂದಲು ಬೆಳೆಯುವಂತೆಯೂ ನೋಡಿಕೊಳ್ಳಬೇಕಾಗುತ್ತದೆ. ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯಲು ಸಹಾಯ ಮಾಡುತ್ತವೆ ಈ ವಸ್ತುಗಳು .
ತೆಂಗಿನ ಎಣ್ಣೆ ವಿಟಮಿನ್ ಇಯಲ್ಲಿ ಸಮೃದ್ದವಾಗಿದೆ. ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸಲು ತೆಂಗಿನೆಣ್ಣೆ ಸಹಾಯ ಮಾಡುತ್ತದೆ. ಈರುಳ್ಳಿ ಎಣ್ಣೆ ಕೂದಲು ಉದುರುವುದನ್ನು ತಡೆಯುವುದಲ್ಲದೆ ಕೂದಲಿನ ಬೆಳೆವಣಿಗೆಗೆ ಸಹಾಯ ಮಾಡುತ್ತದೆ.
ಮದರಂಗಿ : ಸಾಮಾನ್ಯವಾಗಿ ಕೂದಲಿಗೆ ಬಣ್ಣ ನೀಡಲು ಇದನ್ನೂ ಬಳಸಲಾಗುತ್ತದೆ. ಆದರೆ ಇದು ಕೂದಲ ಬೆಳವಣಿಗೆಗೆ ಕೂಡಾ ಸಹಾಯ ಮಾಡುತ್ತದೆ.
ಮೊಟ್ಟೆ : ಮೊಟ್ಟೆಯ ಲೋಳೆಯನ್ನು ತೆಂಗಿನ ಎಣ್ಣೆಯ ಜೊತೆ ಬೆರೆಸಿ ಕೂದಲಿಗೆ ಮಸಾಜ್ ಮಾಡಿಕೊಂಡರೆ ಬೋಳು ತಲೆ ಸಮಸ್ಯೆ ನಿವಾರಿಸಬಹುದು.
ಚಕ್ಕೆ ಮತ್ತು ಆಲಿವ್ ಆಯಿಲ್ : ಚಕ್ಕೆ ಪುಡಿಯನ್ನು ಆಲಿವ್ ಆಯಿಲ್ ಜೊತೆ ಬೆರೆಸಿ ಈ ಮಿಶ್ರಣವನ್ನು ನೆತ್ತಿಗೆ, ಕೂದಲಿಗೆ ಹಚ್ಚಿದರೆ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯುತ್ತದೆ.
ತೆಂಗಿನೆಣ್ಣೆ : ಕೂದಲು ಉದುರದಂತೆ ತಡೆಯಲು ಮತ್ತು ಕೂದಲು ಬೆಳೆಯಲು ತೆಂಗಿನೆಣ್ಣೆ ನೈಸರ್ಗಿಕ ಪರಿಹಾರ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)