ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ಪಡೆಯುವುದಷ್ಟೇ ಅಲ್ಲ, ಟ್ಯಾಕ್ಸ್ ಕೂಡ ಉಳಿಸಬಹುದು!
ಸರ್ಕಾರದ ನಿಯಮಾನುಸಾರ ಪ್ರತಿ ಹಣಕಾಸು ವರ್ಷದಲ್ಲಿ ಮಿತಿಗಿಂತ ಹೆಚ್ಚು ಆದಾಯ ಹೊಂದಿರುವವರು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಆದಾಯ ತೆರಿಗೆಯನ್ನು ಉಳಿತಾಯ ಮಾಡಬಹುದು. ಆಷ್ಟೆ ಅಲ್ಲ, ಈ ಹೂಡಿಕೆಗಳಿಂದ ಉತ್ತಮ ಹಣವನ್ನು ಕೂಡ ಗಳಿಸಬಹುದು. ಈ ರೀತಿ ತೆರಿಗೆ ಪ್ರಯೋಜನವನ್ನು ನೀಡುವ ಯೋಜನೆಗಳೆಂದರೆ...
ಸಾರ್ವಜನಿಕ ಭವಿಷ್ಯ ನಿಧಿ-ಪಿಪಿಎಫ್ ನಲ್ಲಿ ಹೂಡಿಕೆಯ ಮೇಲೆ 7.1% ಬಡ್ಡಿ ಪಡೆಯಬಹುದು. ಮಾತ್ರವಲ್ಲ, ಇದರಲ್ಲಿ ಹೂಡಿಕೆ ಮಾಡುವ ಮೂಲಕ ಪ್ರತಿ ವರ್ಷ 1.5 ಲಕ್ಷ ಹೂಡಿಕೆವರೆಗೂ ಆದಾಯ ತೆರಿಗೆಯನ್ನು ಉಳಿಸಬಹುದು. ಮೆಚ್ಯೂರಿಟಿ ಸಮಯದಲ್ಲಿ ಸ್ವೀಕರಿಸಿದ ಸಂಪೂರ್ಣ ಮೊತ್ತವೂ ತೆರಿಗೆ ಮುಕ್ತವಾಗಿರುತ್ತದೆ.
ರಾಷ್ಟ್ರೀಯ ಪಿಂಚಣಿ ಯೋಜನೆ (NPS)ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಇದರಲ್ಲಿ ಹೂಡಿಕೆ ಮಾಡುವುದರಿಂದ ನಿವೃತ್ತಿ ವಯಸ್ಸಿನಲ್ಲಿ ದೊಡ್ಡ ಮೊತ್ತದ ನಿಧಿಯನ್ನು ಪಡೆಯಬಹುದು. ಇದರಲ್ಲಿ ಹೂಡಿಕೆ ಮಾಡುವುದರಿಂದ ಸೆಕ್ಷನ್ 80 CCD (1B) ಅಡಿಯಲ್ಲಿ ರೂ. 50,000 ಹೆಚ್ಚುವರಿ ತೆರಿಗೆ ಕಡಿತವನ್ನು ಪಡೆಯಬಹುದು.
ಇಂದಿನ ಕಾಲಘಟ್ಟದಲ್ಲಿ ಆರೋಗ್ಯ ವಿಮೆ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಆರೋಗ್ಯ ವಿಮೆಯ ಮೂಲಕ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆರೋಗ್ಯ ರಕ್ಷಣೆಯನ್ನು ಒದಗಿಸುವುದು ಮಾತ್ರವಲ್ಲದೆ, ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವ ಮೂಲಕ ಸೆಕ್ಷನ್ 80ಡಿ ಅಡಿಯಲ್ಲಿ ಕಡಿತದ ಪ್ರಯೋಜನವನ್ನು ಪಡೆಯಬಹುದು.
ನೀವು ಮನೆ ಖರೀದಿಸಲು ಯೋಜಿಸುತ್ತಿದ್ದರೆ, ಇದೂ ಕೂಡ ನಿಮಗೆ ಉತ್ತಮ ಹೂಡಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ಮನೆ ಅಥವಾ ಫ್ಲ್ಯಾಟ್ ಖರೀದಿಸಲು ಬ್ಯಾಂಕ್‌ಗಳಿಂದ ಗೃಹ ಸಾಲವನ್ನು ತೆಗೆದುಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಗೃಹ ಸಾಲಕ್ಕಾಗಿ ತೆಗೆದುಕೊಂಡ ಮೊತ್ತ ಮತ್ತು ಅದರ ಮೇಲೆ ವಿಧಿಸುವ ಬಡ್ಡಿ ಎರಡಕ್ಕೂ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.
ಉದ್ಯೋಗಿಗಳ ಸಂಬಳದ ಒಂದು ಭಾಗವು ಇಪಿಎಫ್ ಖಾತೆಗೆ ಹೋಗುತ್ತದೆ. ಇದರ ಮೇಲೆ, ಸೆಕ್ಷನ್ 80 ಸಿ ಅಡಿಯಲ್ಲಿ, ನೀವು ಪಿಎಫ್ ಖಾತೆಯಲ್ಲಿ ವಾರ್ಷಿಕವಾಗಿ ರೂ 1.5 ಲಕ್ಷದವರೆಗಿನ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು.