Investment Tips: ಯಾವುದೇ ಕಡೆ ಹೂಡಿಕೆ ಮಾಡುವ ಮುನ್ನ ಈ 3 ಸಂಗತಿಗಳನ್ನು ನೆನಪಿನಲ್ಲಿಡಿ ಮತ್ತು ಸಂಭವನೀಯ ಹಾನಿಯಿಂದ ಪಾರಾಗಿ

Fri, 25 Nov 2022-4:23 pm,

1. ಹೂಡಿಕೆ ಮಾಡುವುದು ಒಳ್ಳೆಯ ಅಭ್ಯಾಸ. ಇದರಿಂದ ನೀವು ನಿಮ್ಮ ಉಳಿತಾಯದ ಮೇಲೆ ಉತ್ತಮ ಆದಾಯವನ್ನು ಗಳಿಕೆ ಮಾಡಬಹುದು. ಆದರೂ ಕೂಡ ಹೂಡಿಕೆ ಮಾಡುವ ಮುನ್ನ ಕೆಲವು ಅಭ್ಯಾಸಗಳನ್ನು ಹೊಂದಿರುವುದು ತುಂಬಾ ಮುಖ್ಯ. ಹೂಡಿಕೆ ಮಾಡುವಾಗ ಮೂರು ಹೂಡಿಕೆ ಅಭ್ಯಾಸಗಳನ್ನು ಅನುಸರಿಸಿದರೆ, ಕಾಲಕ್ರಮೇಣ ಉತ್ತಮ ಆದಾಯವನ್ನು ನೀವು ಪಡೆಯಬಹುದು.  

2. ಹೂಡಿಕೆ ಮಾಡಲು, ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಇಂದು ಹೂಡಿಕೆಯ ಮುಖ್ಯ ಮೂರು ಅಭ್ಯಾಸಗಳ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು, ತನ್ಮೂಲಕ ನೀವು ಉತ್ತಮ ಆದಾಯವನ್ನು ಸಂಪಾದಿಸಬಹುದು.  

3. ನಿಯಮಿತ ಹೂಡಿಕೆ- ನಿಮ್ಮ ಗಳಿಕೆಯಲ್ಲಿ ಉಳಿತಾಯ ಮಾಡುವುದು ಮತ್ತು ಹೂಡಿಕೆ ಮಾಡುವುದು ಒಂದು ಉತ್ತಮ ಅಭ್ಯಾಸವಾಗಿದೆ. ಆದರೆ ನಿಮ್ಮ ಈ ಹೂಡಿಕೆಯು ನಿಯಮಿತವಾಗಿರಬೇಕು, ಆಗ ಮಾತ್ರ ಹೂಡಿಕೆಯ ಮೂಲಕ ಉತ್ತಮ ಲಾಭವನ್ನು ಗಳಿಸಬಹುದು. ನಿಯಮಿತ ಹೂಡಿಕೆಗಾಗಿ, ನೀವು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಚೆನ್ನಾಗಿ ಅಧ್ಯಯನ ನಡೆಸಿ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ಗಡುವು ಮೀರುವ ಮುನ್ನ ಹೂಡಿಕೆ ಮಾಡಿ. ಹೂಡಿಕೆಗಾಗಿ ಸ್ವಯಂಚಾಲಿತವಾಗಿ ವರ್ಗಾಯಿಸಲು ನಿಮ್ಮ ಖಾತೆಯಿಂದ ಪೂರ್ವ-ನಿರ್ಧರಿತ ಮೊತ್ತವನ್ನು ಹೊಂದಿಸಿ. ಈ ರೀತಿ ನೀವು ನಿಯಮಿತ ಹೂಡಿಕೆಯನ್ನು ಮಾಡಬಹುದು.  

4. ಹೂಡಿಕೆಯನ್ನು ವೈವಿಧ್ಯಗೊಳಿಸಿ- ಯಾವಾಗಲೂ ಹೂಡಿಕೆಗಾಗಿ ಪೋರ್ಟ್ಫೋಲಿಯೊ ಸಿದ್ಧಪಡಿಸಿ. ನಿಮ್ಮ ಪೋರ್ಟ್‌ಫೋಲಿಯೊವನ್ನು ನೀವು ಸಮರ್ಪಕವಾಗಿ ವೈವಿಧ್ಯಗೊಳಿಸಬೇಕು. ಹೂಡಿಕೆಯು ನಿಮ್ಮ ಹಣಕಾಸಿನ ಗುರಿಗಳಿಗೆ ಅನುಗುಣವಾಗಿರಬೇಕು. ದೀರ್ಘಾವಧಿಯ ಗುರಿಗಳಿಗಾಗಿ, ನೀವು ಈಕ್ವಿಟಿ ಫಂಡ್ ಗಳಲ್ಲಿ ಹೆಚ್ಚು ಹೂಡಿಕೆ ಮಾಡಬಹುದು. ಅಲ್ಪಾವಧಿಯ ಗುರಿಗಳಿಗಾಗಿ, ನಿಮ್ಮ ಬಂಡವಾಳವನ್ನು ಸುರಕ್ಷಿತಗೊಳಿಸುವ ಸ್ಥಿರ ಆದಾಯದ ಸ್ವತ್ತುಗಳಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಪ್ರೊಫೈಲ್‌ಗೆ ಸೂಕ್ತವಾದ ಪೋರ್ಟ್‌ಫೋಲಿಯೊವನ್ನು ರಚಿಸಲು ವೃತ್ತಿಪರರ ಸಹಾಯವನ್ನು ಸಹ ನೀವು ಪಡೆದುಕೊಳ್ಳಬಹುದು.  

5. ಭಾವನೆಗಳ ಮೇಲೆ ಹಿಡಿತವಿರಲಿ- ಮನುಷ್ಯ ಭಾವನಾತ್ಮಕ  ಜೀವಿ ಮತ್ತು ಭಾವನೆಗಳ ಕಾರಣದಿಂದ ಆತ ಅನೇಕ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೇ. ಆದರೂ ಕೂಡ ಭಾವನೆಗಳು ನಮ್ಮನ್ನು ದೊಡ್ಡ ಹೂಡಿಕೆದಾರರನ್ನಾಗಿ ಸಿದ್ಧಪದಿಸುವುದಿಲ್ಲ. ಮಾರುಕಟ್ಟೆಯ ಏರಿಳಿತಗಳು ಭಯ ಮತ್ತು ದುರಾಸೆಯನ್ನು ಉಂಟುಮಾಡಬಹುದು, ಇಂತಹ ಪರಿಸ್ಥಿತಿಯಲ್ಲಿ ಜನರು ಮಾರುಕಟ್ಟೆಯ ಏರಿಳಿತವನ್ನು ನೋಡಿದ ನಂತರವೂ ಭಾವನೆಗಳಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ನಷ್ಟವನ್ನೂ ಅನುಭವಿಸುತ್ತಾರೆ. ಹೀಗಿರುವಾಗ ನೀವು ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ‘ಕಡಿಮೆ ಖರೀದಿಸಿ, ಹೆಚ್ಚು ಮಾರಾಟ ಮಾಡಿ’ ಎಂಬ ತತ್ವದಡಿ ಕೆಲಸ ಮಾಡಬೇಕು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link