ಯುವಕರು ಅತಿಯಾಗಿ ಬಳಸುವ ದೇಸಿ ಆಪ್ ಗಳಿವು..!

Thu, 03 Mar 2022-4:51 pm,

ಇದು ಗೇಮಿಂಗ್ ಮತ್ತು ಇ-ಸ್ಪೋರ್ಟ್ಸ್ ಸಮುದಾಯಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೊಬೈಲ್ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಬಳಕೆದಾರರು ತಮ್ಮ ಪ್ರೊಫೈಲ್ ಅನ್ನು ಕಸ್ಟಮೈಸ್ ಮಾಡಬಹುದು. ಅವರ ಗೇಮಿಂಗ್ ಅಂಕಿಅಂಶಗಳನ್ನು ಶೇರ್ ಮಾಡಬಹುದು. ಈ ಅಪ್ಲಿಕೇಶನ್‌ ಮೂಲಕ  ವಿವಿಧ ಗೇಮರ್‌ಗಳೊಂದಿಗೆ ಸಂಪರ್ಕ ಸಾಧಿಸಬಹುದು. 

ಲೆಹರ್ ಲೈವ್  ಡಿಸ್ಕಶನ್  ಅಪ್ಲಿಕೇಶನ್ ಆಗಿದ್ದು, ಇದರಲ್ಲಿ ಬಳಕೆದಾರರು ಅವರಿಗೆ ಆಸಕ್ತಿಯಿರುವ ಲೈವ್ ಮತ್ತು  ರಿಯಲ್ ಟೈಮ್ ಡಿಸ್ಕಶನ್ ಭಾಗವಾಗಬಹುದು. ಈ ಚರ್ಚೆಗಳನ್ನು ಆಡಿಯೋ-ಓನ್ಲಿ ಅಥವಾ ಲೈವ್-ವಿಡಿಯೋ ಸ್ವರೂಪದಲ್ಲಿ ಡಿಸ್ಕಶನ್ ಮಾಡಬಹುದು. ಇಲ್ಲಿ ಡಿಸ್ಕಶನ್  ಶುರು ಮಾಡಬಹುದು. ಅಥವಾ ಚಾಲ್ತಿಯಲ್ಲಿರುವ್ ಡಿಸ್ಕಶನ್  ಭಾಗವಾಗಬಹುದು. 

13 ರಿಂದ 18 ವರ್ಷಗಳ ನಡುವಿನ ಬಳಕೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ, ಈ ಅಪ್ಲಿಕೇಶನ್‌ನಲ್ಲಿ ವಿಶೇಷವಾದ  ಮಾರ್ಕೆಟ್ ಪ್ಲೇಸ್ ಅನ್ನು ರಚಿಸಲಾಗಿದೆ ಇದರಿಂದ ಬಳಕೆದಾರರು ಉನ್ನತ ಬ್ರಾಂಡ್‌ಗಳ ಉತ್ಪನ್ನಗಳನ್ನು ಖರೀದಿಸಬಹುದು.  ಇದರಲ್ಲಿ ಸ್ನೇಹಿತರನ್ನು ಸಹ ಮಾಡಬಹುದು ಮತ್ತು ಯುವಕರು ತಮ್ಮದೇ ಆದ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ.

Zoro ಅಪ್ಲಿಕೇಶನ್‌ನ ಸಹಾಯದಿಂದ, ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಆನ್‌ಲೈನ್‌ನಲ್ಲಿ ವ್ಯಕ್ತಪಡಿಸಬಹುದು. ಇಲ್ಲಿ ನಿಮ್ಮ ನಿಜವಾದ ಹೆಸರು ಮತ್ತು ಮಾಹಿತಿಯನ್ನು ನೀಡುವ ಅಗತ್ಯವಿರುವುದಿಲ್ಲ. 

ಸ್ವೆಲ್ ಧ್ವನಿ ಆಧಾರಿತ ಸಾಮಾಜಿಕ ವೇದಿಕೆಯಾಗಿದ್ದು, ಇದರಲ್ಲಿ ನೀವು ಚಿತ್ರಗಳು ಮತ್ತು ಲಿಂಕ್‌ಗಳ ಜೊತೆಗೆ ಐದು ನಿಮಿಷಗಳವರೆಗೆ ಆಡಿಯೊವನ್ನು ಲಗತ್ತಿಸಬಹುದು. ನಿಮ್ಮ ಸ್ವಂತ 'ಸ್ವೆಲ್‌ಕಾಸ್ಟ್' ಅನ್ನು ರಚಿಸುವ ಮೂಲಕ ಈ ಅಪ್ಲಿಕೇಶನ್‌ನಲ್ಲಿ ಪ್ರೊಫೈಲ್ ಅನ್ನು ರಚಿಸಬಹುದು.  ಇದರಲ್ಲಿ ನಿಮ್ಮ ಭಾಷೆಯಲ್ಲಿ ಆಡಿಯೊಗಳನ್ನು ಹಾಕಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link