Best Monsoon Treks: ಭಾರತದ 7 ಪ್ರಮುಖ ಚಾರಣ ಸ್ಥಳಗಳು ಇಲ್ಲಿವೆ ನೋಡಿ…
ಸಿಕ್ಕಿಂನ ಜೋಂಗ್ರಿ ಚಾರಣದ ಬಗ್ಗೆ ಎಂದಾದರೂ ಕೇಳಿದ್ದೀರಾ? ಜೋಂಗ್ರಿ ಚಾರಣವು ನಿಮ್ಮನ್ನು ಸುಂದರ ಸಿಕ್ಕಿಂ ಭೂದೃಶ್ಯದ ನಿಸರ್ಗ ಸೌಂದರ್ಯ ಸವಿಯಲು ಕರೆದೊಯ್ಯುತ್ತದೆ. ಸುತ್ತಲೂ ಭವ್ಯವಾದ ಶಿಖರಗಳಿರುವ ಈ ಪ್ರದೇಶಲ್ಲಿ ಚಾರಣ ಕೈಗೊಂಡರೆ ನಿಮಗೆ ಉತ್ತಮ ಅನುಭವ ಸಿಗಲಿದೆ.
ಪುಣೆಯ ಸಿಂಹಗಡವು ಮಳೆಗಾಲದಲ್ಲಿ ಚಾರಣಕ್ಕೆ ಹೇಳಿಮಾಡಿಸಿದಂತಿರುವ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದೆ. ಮಳೆಗಾಲದಲ್ಲಿ ಈ ಸ್ಥಳವು ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಈ ಸುಂದರ ಪ್ರದೇಶವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಕ್ಯಾಮೆರಾ ಜೊತೆಗೆ ಚಾರಣ ಕೈಗೊಂಡು ಅಲ್ಲಿನ ನಿಸರ್ಗ ಸೌಂದರ್ಯವನ್ನು ಸೆರೆಹಿಡಿಯಬಹುದು.
ಉತ್ತರಾಖಂಡದ ಬೆರಗುಗೊಳಿಸುವ ಹೂವುಗಳ ಕಣಿವೆಯು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಇದು ಮಳೆಗಾಲದಲ್ಲಿ ಆನಂದಿಸಬಹುದಾದ ಸುಂದರ ಚಾರಣ ಯಾತ್ರೆಗಳಲ್ಲಿ ಒಂದಾಗಿದೆ. ಲೆಕ್ಕವಿಲ್ಲದಷ್ಟು ಹೂಗಳು ಪೂರ್ಣವಾಗಿ ಅರಳುವ ದೃಶ್ಯವನ್ನು ನೀವು ಇಲ್ಲಿ ಕಣ್ತುಂಬಿಕೊಳ್ಳಬಹುದು.
ಹಿಮಾಚಲ ಪ್ರದೇಶವು ಅನೇಕ ಜನಪ್ರಿಯ ಟ್ರೆಕ್ಕಿಂಗ್ ತಾಣಗಳನ್ನು ಹೊಂದಿದೆ. ಈ ಪೈಕಿ ಹಂಪ್ಟಾ ಪಾಸ್ ಚಾರಣ ಪ್ರದೇಶ ಪ್ರಸಿದ್ಧವಾಗಿದೆ. ಈ ಪ್ರದೇಶದಲ್ಲಿ ಚಾರಣ ಕೈಗೊಂಡ ಪ್ರತಿಯೊಬ್ಬರಿಗೂ ರೋಮಾಂಚಕಾರಿ ಅನುಭವ ಸಿಗಲಿದೆ.
ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮನಾಲಿಯೂ ಒಂದು. ಮನಾಲಿಯ ಪರ್ವತ ಪ್ರದೇಶಗಳ ನಿಸರ್ಗ ಸೌಂದರ್ಯ ಸವಿಯಲು ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಹಚ್ಚ ಹಸಿರಿನ ಹುಲ್ಲುಗಾವಲು ಮತ್ತು ಸುಂದರ ಪ್ರಕೃತಿಯ ನೋಟಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಚಾರಣ ಕೈಗೊಳ್ಳುವುದು ಉತ್ತಮ. ಮನಾಲಿಯಿಂದ ಉತ್ತರಕ್ಕೆ 20 ಕಿ.ಮೀ ದೂರದಲ್ಲಿರುವ ಭೃಗು ಸರೋವರದ ಚಾರಣಕ್ಕೆ ನೀವು ಗುಲಾಬಾದಿಂದ ತೆರಳಬಹುದು.
ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಪ್ರಮುಖವಾಗಿದೆ. ಇದನ್ನು ಭೂಮಿ ಮೇಲಿನ ಸ್ವರ್ಗವೆಂದು ಕರೆಯಲಾಗುತ್ತದೆ. ಸಮುದ್ರ ಮಟ್ಟದಿಂದ ಸುಮಾರು 6,330 ಅಡಿ ಎತ್ತರವಿರುವ ಈ ಪ್ರದೇಶಕ್ಕೆ ದೇಶ-ವಿದೇಶಗಳ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಹಿಮಾಲಯ ಮತ್ತು ನೀಲಗಿರಿ ಪರ್ವತ ಶ್ರೇಣಿಗಳ ನಡುವಿನ ಅತಿ ಎತ್ತರದ ಪ್ರದೇಶವಾಗಿದೆ. ಚಿಕ್ಕಮಗಳೂರಿನಿಂದ ಸುಮಾರು 20 ಕಿ.ಮಿ. ದೂರದಲ್ಲಿರುವ ಮುಳ್ಳಯ್ಯನಗಿರಿ ಚಾರಣಕ್ಕೆ ಹೇಳಿಮಾಡಿಸಿದ ತಾಣವಾಗಿದೆ.
ಇದು ಭೂಮಿಯ ಮೇಲಿನ ಸ್ವರ್ಗಕ್ಕಿಂತ ಕಡಿಮೆಯಿಲ್ಲ ಮತ್ತು ಪ್ರತಿ ಚಾರಣಿಗರಿಗೂ ಸಂತೋಷವನ್ನು ನೀಡುತ್ತದೆ. ಇದು ಉತ್ತರಾಖಂಡದ ಧೌಲಾದಿಂದ ಪ್ರಾರಂಭವಾಗುವ ಮತ್ತು ಹಿಮಾಚಲ ಪ್ರದೇಶದ ಸಾಂಗ್ಲಾದಲ್ಲಿ ಕೊನೆಗೊಳ್ಳುವ 4,650 ಮೀಟರ್ ಎತ್ತರದ ಎತ್ತರದ ಚಾರಣವಾಗಿದೆ.