Happy New Year: 2023 ಹೊಸ ವರ್ಷಾಚರಣೆಯ ಬೆಸ್ಟ್ ಫೋಟೋಗಳು ವೈರಲ್: ನಿಮ್ಮ ಚಿತ್ರಗಳೂ ಇವೆಯೇ ಪರೀಕ್ಷಿಸಿ?

Sun, 01 Jan 2023-7:40 am,

ಹೊಸ ವರ್ಷ 2023 ಪ್ರಾರಂಭವಾದ ತಕ್ಷಣ, ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ಪಟಾಕಿಗಳನ್ನು ಬಾನೆತ್ತರದಲ್ಲಿ ಸಿಡಿಸಲಾಯಿತು. ಈ ಪಟಾಕಿಯ ದೃಶ್ಯವು ತುಂಬಾ ಸುಂದರವಾಗಿತ್ತು.

2023 ರ ಹೊಸ ವರ್ಷವನ್ನು ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. 2023ರ ಹೊಸ ವರ್ಷದ ಸಂದರ್ಭದಲ್ಲಿ ಪಟಾಕಿ ಸಿಡಿಸಲಾಯಿತು. ಇಲ್ಲಿ ಕಟ್ಟಡಗಳನ್ನು ದೀಪಗಳಿಂದ ಅಲಂಕರಿಸಲಾಗಿತ್ತು.

ಆಸ್ಟ್ರೇಲಿಯಾದ ಸಿಡ್ನಿ ನಗರದ ಒಪೆರಾ ಹೌಸ್ ಬಳಿ 2023 ರ ಹೊಸ ವರ್ಷವನ್ನು ಜನರು ಭರ್ಜರಿಯಾಗಿ ವೆಲ್ ಕಂ ಮಾಡಿದ್ದಾರೆ. ಇಲ್ಲಿ ಜನರು ಪಟಾಕಿಗಳ ಚಿತ್ರಗಳನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿತು.

ಹೊಸ ವರ್ಷ 2023 ಅನ್ನು ಯುರೋಪಿಯನ್ ದೇಶವಾದ ಫ್ರಾನ್ಸ್‌ನಲ್ಲಿಯೂ ಹುರುಪಿನಿಂದ ಆಚರಿಸಲಾಯಿತು. 2023 ರ ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ಯಾರಿಸ್‌ನಲ್ಲಿ ಜಮಾಯಿಸಿದರು ಮತ್ತು ಪಾರ್ಟಿ ಮಾಡಿದರು. ಇಲ್ಲಿನ ಪಾರ್ಟಿಯಲ್ಲಿ ಜನರು ಸಂಗೀತಕ್ಕೆ ತಕ್ಕಂತೆ ಕುಣಿಯುತ್ತಿರುವುದು ಕಂಡು ಬಂತು.

ಯುಎಸ್ಎಯ ನ್ಯೂಯಾರ್ಕ್‌ನಲ್ಲಿರುವ ಟೈಮ್ ಸ್ಕ್ವೇರ್‌ನಲ್ಲಿ ಜನರು 2023 ರ ಹೊಸ ವರ್ಷವನ್ನು ವಿಜೃಂಭಣೆಯಿಂದ ಆಚರಿಸಿದರು. ಹೊಸ ವರ್ಷ 2023 ರ ಸಂದರ್ಭದಲ್ಲಿ ಜನರು ಟೈಮ್ ಸ್ಕ್ವೇರ್‌ನಲ್ಲಿ ಜಮಾಯಿಸಿ ಸಂಭ್ರಮಿಸಿದರು.

ಕೋವಿಡ್ ಬಿಕ್ಕಟ್ಟಿನ ನಡುವೆಯೂ ಚೀನಾದಲ್ಲಿ ಹೊಸ ವರ್ಷ 2023 ರ ಸಂಭ್ರಮವನ್ನು ಜೋರಾಗಿ ಆಚರಿಸಲಾಯಿತು. ಪಾರ್ಟಿಯ ಸಮಯದಲ್ಲಿ ಜನರು ತುಂಬಾ ಸಂತೋಷದಿಂದ ಕಾಣುತ್ತಿದ್ದರು ಮತ್ತು ಪರಸ್ಪರ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿತು. ಹೊಸ ವರ್ಷ 2023 ಆರಂಭವಾಗುತ್ತಿದ್ದಂತೆ, ಆಕಾಶದಲ್ಲಿ ಹಾರುವ ಬಲೂನ್‌ಗಳನ್ನು ಬಿಟ್ಟು ಸಂತಸ ಸೂಚಿಸಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link