Best Quit-Smoking Tips: ಧೂಮಪಾನ ಚಟದಿಂದ ಹೊರಬರಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ
ಧೂಮಪಾನವನ್ನು ತೊರೆಯಲು ಇಚ್ಚಿಸುವವರು ಬಿಸಿ ನೀರನ್ನು ಕೂಡ ಬಳಸಬಹುದು. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಸಿಗರೇಟ್ ಸೇದುವ ಅಭ್ಯಾಸವನ್ನು ಬಿಡಲು ಸಹಾಯ ಮಾಡುತ್ತದೆ.
ಧೂಮಪಾನವನ್ನು (Smoking) ನಿಧಾನವಾಗಿ ಬಿಡಲು ಇರುವ ಒಂದು ಮಾರ್ಗವೆಂದರೆ, ನಿಮಗೆ ಧೂಮಪಾನ ಮಾಡಬೇಕು ಎಂದೆನಿಸಿದಾಗ ತಕ್ಷಣ 1 ಲೋಟ ನೀರಿನಲ್ಲಿ ಒಂದು ಚಿಟಿಕೆ ಕೆಂಪು ಮೆಣಸಿನ ಪುಡಿಯನ್ನು ಬೆರೆಸಿ ಕುಡಿಯಿರಿ. ಈ ರೀತಿ ಮಾಡುವುದರಿಂದ ನೀವು ಸ್ವಲ್ಪ ಸಮಯದವರೆಗೆ ವ್ಯಸನದಿಂದ ಪರಿಹಾರವನ್ನು ಪಡೆಯುತ್ತೀರಿ.
ಇದನ್ನೂ ಓದಿ- Snoring Problem: ಮಲಗುವಾಗ ನೀವೂ ಗೊರಕೆ ಹೊಡೆಯುತ್ತೀರಾ? ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ತಿಳಿಯಿರಿ
ತಜ್ಞರ ಪ್ರಕಾರ, ನಿಮಗೆ ಆಗಾಗ್ಗೆ ಧೂಮಪಾನ ಮಾಡಬೇಕು ಅನಿಸಿದರೆ, ಆ ಸಂದರ್ಭದಲ್ಲಿ ಒಂದು ಚಮಚ ತುರಿದ ಮೂಲಂಗಿಯನ್ನು (Radish) ಅಗಿಯಬಹುದು. ಇದು ತುಂಬಾ ಕಹಿಯಾಗಿದ್ದರೆ, ಇದನ್ನು ಜೇನುತುಪ್ಪದೊಂದಿಗೆ ಕೂಡ ಸೇವಿಸಬಹುದು.
ಇದನ್ನೂ ಓದಿ- Benefits of Bottle Gourd: ನಿಮ್ಮ ಡಯಟ್ನಲ್ಲಿ ಸೋರೆಕಾಯಿ ಸೇರಿಸಿ, ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ
ಓಟ್ಸ್ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ಫೈಬರ್ ಮತ್ತು ಮೆಗ್ನೀಸಿಯಮ್ ಮೆದುಳಿನಲ್ಲಿ ಸಿರೊಟೋನಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಅದರ ಸೇವನೆಯಿಂದ ಮನಸ್ಸು ಶಾಂತವಾಗಿರುತ್ತದೆ. ಓಟ್ಸ್ ತಿನ್ನುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ ಎಂದು ಕೂಡ ಹೇಳಲಾಗುತ್ತದೆ. ನೀವು ಓಟ್ಸ್‌ನಲ್ಲಿ ಬೆರಿಹಣ್ಣುಗಳನ್ನು ಸಹ ತಿನ್ನಬಹುದು, ಇದರ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ (Vitamin C) ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಓಟ್ಸ್ ದೇಹದಿಂದ ವಿಷವನ್ನು ಹೊರಹಾಕುವ ಮೂಲಕ ಧೂಮಪಾನದ ಬಯಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಧೂಮಪಾನದಿಂದ ಜಗತ್ತಿನಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಸಾಯುತ್ತಾರೆ. ಭಾರತದಲ್ಲೂ, ಧೂಮಪಾನದ ಅಡ್ಡ ಪರಿಣಾಮಗಳಿಗೆ ಸಂಬಂಧಿಸಿದ ಆತಂಕಕಾರಿ ಸುದ್ದಿಗಳು ಹೆಚ್ಚಾಗಿ ಮುಂಚೂಣಿಗೆ ಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೂಡ ಈ ಚಟವನ್ನು ಬಿಡಲು ಅಥವಾ ಕಡಿಮೆ ಮಾಡಲು ಬಯಸಿದರೆ, ಮೊದಲು ನಿಮ್ಮ ಇಚ್ಛಾ ಶಕ್ತಿಯನ್ನು ಬಲಪಡಿಸಿ ಮತ್ತು ಈ ಮನೆಮದ್ದುಗಳನ್ನು ಅಳವಡಿಸಿಕೊಳ್ಳಿ. ಅವು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ, ಆದರೆ ಇವುಗಳ ನಿಯಮಿತ ಸೇವನೆಯು ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನವನ್ನು ನೀಡುತ್ತದೆ. (ಸಾಂದರ್ಭಿಕ ಚಿತ್ರ)