ಟೆಲಿಕಾಂ ಕಂಪನಿಗಳ ಬೆಸ್ಟ್ ರಿಚಾರ್ಜ್ ಪ್ಲಾನ್ ಯಾವುದು ತಿಳಿಯಿರಿ..!
ಟೆಲಿಕಾಂ ಕಂಪನಿ ಏರ್‌ಟೆಲ್ (Airtel) ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ 499 ರೂ.ಗಳ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆಯಲ್ಲಿ, ಬಳಕೆದಾರರಿಗೆ ಪ್ರತಿದಿನ 2 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಯೋಜನೆಯಲ್ಲಿ, ಬಳಕೆದಾರರು Amazon Priceನ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಅನಿಯಮಿತ ಕರೆಗಳು ಮತ್ತು 100 ಎಸ್‌ಎಂಎಸ್‌ಗಳ ಹೊರತಾಗಿ, Airtel Xstream Premium ಉಚಿತ ಚಂದಾದಾರಿಕೆಯನ್ನು ಸಹ ಯೋಜನೆಯಲ್ಲಿ ನೀಡಲಾಗುತ್ತಿದೆ.
Vodafone- Idea (Vi) ಯ ಅಧಿಕೃತ ವೆಬ್‌ಸೈಟ್ ಪ್ರಕಾರ, 595 ರೂಗಳಿಗೆ ಉತ್ತಮ ಪ್ಲಾನ್ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ, ನೀವು ಪ್ರತಿದಿನ 2 ಜಿಬಿ ಡೇಟಾವನ್ನು ಸಿಗಲಿದೆ. ಇನ್ನೂ ಉತ್ತಮ ವಿಚಾರವೆಂದರೆ, ಮನರಂಜನೆಗಾಗಿ ZEE5 ಪ್ರೀಮಿಯಂ ಮತ್ತು Vi Movies ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಇತರ ಕಂಪನಿಗಳಂತೆ Vi ನಿಮಗೆ ಅನಿಯಮಿತ ಕರೆಗಳು ಮತ್ತು 100 ಉಚಿತ SMS ಅನ್ನು ಸಹ ಒದಗಿಸುತ್ತಿದೆ.
ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ 2 ಜಿಬಿ ಡೇಟಾ ಪ್ಲಾನ್ ನೀಡುತ್ತಿದೆ. ಬಿಎಸ್‌ಎನ್‌ಎಲ್ ಬಳಕೆದಾರರು ಕೇವಲ 189 ರೂಗಳ ರೀಚಾರ್ಜ್‌ನಲ್ಲಿ 2 ಜಿಬಿ ಡೇಟಾವನ್ನು ಪಡೆಯಬಹುದು. ಖಾಸಗಿ ಟೆಲಿಕಾಂನಂತೆ, ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಅನಿಯಮಿತ ಕರೆ ಮತ್ತು ಉಚಿತ ಎಸ್ಎಂಎಸ್ ಸೌಲಭ್ಯವನ್ನು ಸಹ ಒದಗಿಸುತ್ತಿದೆ.
ಜಿಯೋ ರೀಚಾರ್ಜ್ ಪ್ಲಾಣ್ ನಲ್ಲಿಯೂ ಪ್ರತಿದಿನ 2 ಜಿಬಿ ಡೇಟಾ ಲಭ್ಯವಿದೆ. ಈ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಬೆಲೆ 444 ರೂ. ಈ ಯೋಜನೆಯಲ್ಲಿ ಇತರ ವೈಶಿಷ್ಟ್ಯಗಳೊಂದಿಗೆ ಬಳಕೆದಾರರಿಗೆ JioCinema ಮತ್ತು Jio TVಯ ಉಚಿತ ಚಂದಾದಾರಿಕೆ ನೀಡಲಾಗುತ್ತಿದೆ.