Diabetic Tips: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.. ದಿನವಿಡೀ ಶುಗರ್ ನಿಯಂತ್ರಣದಲ್ಲಿರುತ್ತದೆ!
ನಾವು ಬೆಳಗ್ಗಿನ ಜಾವ ನಮ್ಮ ದಿನವನ್ನು ಹೇಗೆ ಶುರು ಮಾಡುತ್ತೇವೆ ಎಂಬುದು ಬಹಳ ಮುಖ್ಯ, ದಿನವನ್ನು ಆರೋಗ್ಯವಾಗಿ ಆರಂಭಿಸುವುದರಿಂದ ನಾವು ದಿನವಿಡೀ ಆರೋಗ್ಯ ಹಾಗೂ ಶಕ್ತಿಯುತವಾಗಿ ಇರಬಹುದು. ಅದಕ್ಕಾಗಿಯೇ ಬೆಳಿಗ್ಗೆ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ದಿನವಿಡೀ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ವಿಶೇಷವಾಗಿ ಮಧುಮೇಹಿಗಳಿಗೆ ಬೆಳಿಗ್ಗಿನ ಆಹಾರ ತುಂಬಾ ಮುಖ್ಯ. ಮಧುಮೇಹಿಗಳು ಮುಂಜಾನೆ ಈ ಆಹಾರವನ್ನು ಸೇವಿಸಿದರೆ ಆರೋಗ್ಯವಂತರಾ ದಿನವಿಡೀ ಸುಸ್ತು ಶುಗರ್ ಎಚ್ಚಳದಂತಹ ತೊಂದರೆಗಳಿಲ್ಲದೆ ಉತ್ಸಾಹದಿಂದ ಕೆಲಸ ಮಾಡಬಹುದು.
ನೀವು ಪ್ರೋಟೀನ್, ಉತ್ತಮ ಕೊಬ್ಬು, ನಾರಿನಂಶದ ಸಮತೋಲಿತ ಆಹಾರವನ್ನು ಸೇವಿಸಬೇಕು ಇದು ನಿಮ್ಮ ಇಡೀ ದಿನವು ಸರಾಗವಾಗಿ ನಡೆಸಲು ಸಹಾಯ ಮಾಡುತ್ತದೆ.
ಯಕೃತ್ತಿನಲ್ಲಿ ಬೆಳಿಗ್ಗೆ ಗ್ಲೂಕೋಸ್ ಉತ್ಪತ್ತಿಯಾಗುವುದರಿಂದ ಅದು ದಿನವಿಡೀ ಶಕ್ತಿಯಿಂದ ತುಂಬಿರುತ್ತದೆ, ಅತಿಯಾದ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ದಿನವಿಡೀ ತಲೆತಿರುಗುವಿಕೆ ಅಧಿಕ ರಕ್ತದ ಸಕ್ಕರೆಯ ಸಂಕೇತವಾಗಿದೆ.
ಪ್ರತಿಯೊಬ್ಬರೂ ತಮ್ಮ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿಡಲು ಬಯಸುತ್ತಾರೆ. ಅದಕ್ಕಾಗಿ ನಾನಾ ಸಲಹೆಗಳನ್ನು ಅನುಸರಿಸುತ್ತಾರೆ.
ಬೆಳಿಗ್ಗೆ ಒಂದು ಚಮಚ ತುಪ್ಪದೊಂದಿಗೆ ಅರಿಶಿನ ಪುಡಿಯನ್ನು ತಿನ್ನುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇದು ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ತುಪ್ಪವು ಮಧುಮೇಹಿಗಳಿಗೆ ಬಹಳ ಮುಖ್ಯವಾದ ಆಹಾರ ಪದಾರ್ಥವಾಗಿದೆ ಏಕೆಂದರೆ ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟು, ನಿಮ್ಮನ್ನು ದಿನವಿಡೀ ಆಕ್ಟಿವ್ ಆಗಿ ಇಡುತ್ತದೆ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.