Best Saving Tips: ತಿಂಗಳಿಗೆ ಮನೆಯಲ್ಲಿಯೇ ಕುಳಿತು 50 ಸಾವಿರ ಬಡ್ಡಿ ಗಳಿಸಿ, ಇಂದೇ ನಿಮ್ಮ ಹೆಸರಿನಲ್ಲಿ ಈ ಖಾತೆ ತೆರೆಯಿರಿ
1. ಸ್ವಂತ ಹೆಸರಿನ ಮೇಲೆ ಅಥವಾ ಕುಟುಂಬ ಸದಸ್ಯರ ಹೆಸರಿನ ಮೇಲೆ ಹೂಡಿಕೆ ಮಾಡಿ - ಹಣದುಬ್ಬರದ ಗ್ರಾಫ್ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಒಂದು ಅಂದಾಜಿನ ಪ್ರಕಾರ, ನಿವೃತ್ತಿಯ ನಂತರ ನಿಮಗೆ ಪ್ರತಿ ತಿಂಗಳು 50 ಸಾವಿರ ರೂಪಾಯಿ ಅಗತ್ಯಬೀಳುವ ಸಾದ್ಯತೆ ಇದೆ ಎನ್ನಲಾಗುತ್ತದೆ, ಹೀಗಾಗಿ ಶೀಘ್ರದಲ್ಲೇ ಸ್ವಂತ ಹೆಸರಿನ ಮೇಲೆಯೇ ಆಗಲಿ ಅಥವಾ ಯಾವುದೇ ಕುಟುಂಬದ ಸದಸ್ಯರ ಹೆಸರಿನಲ್ಲಿ ಹೂಡಿಕೆಯನ್ನು ಆರಂಭಿಸಿ.
2. ಯಾವುದೇ ಟೆನ್ಶನ್ ಇಲ್ಲದೆಯೇ 1.25 ಕೋಟಿ ಫಂಡ್ ನಿರ್ಮಾಣಗೊಳ್ಳಲಿದೆ - ಪ್ರಸ್ತುತ, ಬ್ಯಾಂಕ್‌ಗಳ ಸರಾಸರಿ ವಾರ್ಷಿಕ ಬಡ್ಡಿ ದರವು ಶೇಕಡಾ 5 ರಷ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಇಳಿಕೆಯಾಗುವ ಸಾಧ್ಯತೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿ ತಿಂಗಳು 50 ಸಾವಿರ ರೂಪಾಯಿಗಳ ಬಡ್ಡಿ ಪಡೆಯಲು, ನೀವು 1.2 ಕೋಟಿ ನಿಧಿಯನ್ನು ಹೊಂದಿರಬೇಕು. ಇದಕ್ಕಾಗಿ ನೀವು SIP ನಲ್ಲಿ ಹೂಡಿಕೆ ಮಾಡಬೇಕು.
3. ಶೇ.12ರಷ್ಟು ಆದಾಯ ಸಿಗಲಿದೆ - ಉದಾಹರಣೆಗೆ, ಈಗ ನಿಮಗೆ 30 ವರ್ಷ ಅಂದುಕೊಳ್ಳೋಣ. ಹೀಗಿರುವಾಗ ನೀವು ನಿಮ್ಮ ಹೆಸರಿನಲ್ಲಿ ತಿಂಗಳಿಗೆ ರೂ.3500 ರೂಪಾಯಿಗಳಿಗೆ SIP ಮಾಡಲು ಆರಂಭಿಸಿದರೆ, ಇಂದಿನ ಪರಿಸ್ಥಿತಿಯಲ್ಲಿ SIP ಗಳಲ್ಲಿ, ನೀವು ಕನಿಷ್ಟ ಶೇ. 12 ರಷ್ಟು ವಾರ್ಷಿಕ ಆದಾಯವನ್ನು ಪಡೆಯಬಹುದು.
4. ಒಂದೂವರೆ ಕೋಟಿ ರೂ.ಗಳ ಕಾರ್ಪಸ್ ಸಿದ್ಧವಾಗಲಿದೆ - 30 ವರ್ಷಗಳವರೆಗೆ ಒಂದು ವೇಳೆ ನೀವು ಪ್ರತಿ ತಿಂಗಳಿಗೆ 3500 ರೂ.ಗಳ ವ್ಯವಸ್ಥಿತ ಹೂಡಿಕೆ ಮಾಡಿದರೆ, ನಂತರ ನೀವು 12.60 ಲಕ್ಷ ರೂ. ಕಾರ್ಪಸ್ ಸಿದ್ಧ ವಾಗಲಿದೆ. ಇದರ ಮೇಲೆ, ನೀವು ವಾರ್ಷಿಕವಾಗಿ ಸರಾಸರಿ ಶೇ. 12 ರಷ್ಟು ಆದಾಯವನ್ನು ಪಡೆದರೂ ಕೂಡ 30 ವರ್ಷಗಳು ಪೂರ್ಣಗೊಂಡಾಗ, ನಿಮ್ಮ ಬಳಿ 1.23 ಕೋಟಿಗಳ ನಿಧಿ ಸಂಗ್ರಹವಾಗಲಿದೆ.
5. ಪ್ರತಿ ತಿಂಗಳು 50 ಸಾವಿರ ರೂ.ಬಡ್ಡಿ ಸಿಗಲಿದೆ - ಇದೀಗ ನಿಮ್ಮ ಬಳಿ ಸಂಗ್ರಹವಿರುವ 1.23 ಕೋಟಿ ರೂ.ಗಳ ನಿಧಿಯ ಮೇಲೆ ನೀವು ಶೇ.5 ರಷ್ಟು ವಾರ್ಷಿಕ ಬಡ್ಡಿದರವನ್ನು ಲೆಕ್ಕ ಹಾಕಿದರೆ, ಅದು ವಾರ್ಷಿಕವಾಗಿ 6.15 ಲಕ್ಷ ರೂ. ಆಗುತ್ತದೆ. ತನ್ಮೂಲಕ ನೀವು ಪ್ರತಿ ತಿಂಗಳು 50 ಸಾವಿರ ರೂಪಾಯಿ ಆದಾಯವನ್ನು ಸುಲಭವಾಗಿ ಪಡೆಯಬಹುದು.
6. ಮ್ಯೂಚವಲ್ ಫಂಡ್ ಮತ್ತು ಅವುಗಳಿಂದ ಬರುವ ಆದಾಯ - ಎಸ್‌ಬಿಐ ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್ ಕಳೆದ ಕೆಲವು ವರ್ಷಗಳಲ್ಲಿ ಶೇ. 20.04 ರಷ್ಟು ಆದಾಯವನ್ನು ನೀಡಿದೆ. ಇನ್ನೊಂದೆಡೆ, ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್ ಯೋಜನೆಯು ಶೇ, 18.14 ಮತ್ತು ಇನ್ವೆಸ್ಕೊ ಇಂಡಿಯಾ ಮಿಡ್‌ಕ್ಯಾಪ್ ಮ್ಯೂಚುಯಲ್ ಫಂಡ್ ಸ್ಕೀಮ್ ಶೇ.16.54 ಆದಾಯವನ್ನು ನೀಡಿದೆ ಎಂಬುದು ಇಲ್ಲಿ ಗಮನಾರ್ಹ.