ಮನೆಯಂಗಳದಲ್ಲಿ ಈ ಗಿಡ ನೆಟ್ಟರೆ ಒಂದೇ ಒಂದು ಹಾವು ಕೂಡ ಅತ್ತಕಡೆ ಬರಲ್ಲ ಗ್ಯಾರಂಟಿ
ಹಸಿರು ಗಿಡಗಳ ನಡುವೆ ಹಿತಕರ ವಾತಾವರಣದಲ್ಲಿ ಸ್ವಲ್ಪ ಹೊತ್ತು ಆರಾಮವಾಗಿ ಕುಳಿತರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದ್ರೆ ಕೆಲವೊಮ್ಮೆ ಇಂಥ ತಂಪಾದ ಗಿಡಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತವೆ
ಅಂತಹ ಸಂದರ್ಭದಲ್ಲಿ ಹಾವುಗಳನ್ನು ಓಡಿಸಲು ನಾನಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದರೆ ನಿಮ್ಮ ಗಾರ್ಡನ್’ನಲ್ಲಿ ಕೆಲವೊಂದು ಗಿಡಗಳನ್ನು ಬೆಳೆಸಿದರೆ ಹಾವುಗಳು ಅತ್ತಕಡೆ ಬರದಂತೆ ತಡೆಯಬಹುದು. ಹಾವುಗಳಿಗೆ ಇಷ್ಟವಾಗದ ಗಿಡಗಳು ನಿಮ್ಮ ತೋಟದಲ್ಲಿ ಬೆಳೆಸಿ ಇವುಗಳ ವಾಸನೆಯಿಂದ ಹಾವುಗಳು ದೂರ ಓಡುತ್ತವೆ.
ಈ ಗಿಡವನ್ನು ಹಾವು ನಿವಾರಕ ಸಸ್ಯ ಎಂದೇ ಕರೆಯಲಾಗುತ್ತದೆ. ಕಡಿಮೆ ಎತ್ತರದಲ್ಲಿ ಬೆಳೆಯುವ ಈ ಗಿಡ ಗಾರ್ಡನ್’ನಲ್ಲಿ ಇದ್ದರೆ ಅತ್ತಕಡೆ ಹಾವು ಬರದಂತೆ ತಡೆಯುತ್ತದೆ. ಹೆಚ್ಚಾಗಿ ರೈತರು ತಮ್ಮ ಹೊಲದಲ್ಲಿ ಈ ಗಿಡವನ್ನು ಬೆಳೆಸುತ್ತಾರೆ. ಆದರೆ ತಿಂಗಳಿಗೊಮ್ಮೆಯಾದರೂ ಗಿಡವನ್ನು ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಎಲೆಗಳು ಇಡೀ ಅಂಗಳದಲ್ಲಿ ಹರಡಬಹುದು.
ಫ್ರೆಂಚ್ ಮತ್ತು ಅಮೇರಿಕನ್ ಚೆಂಡು ಹೂವು ಬಲವಾದ ವಾಸನೆಯನ್ನು ಹೊಂದಿರುತ್ತವೆ. ಕೆಂಪು, ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಹೊಂದಿರುವ ಚೆಂಡು ಹೂವಿನ ಗಿಡಗಳನ್ನು ಬೆಳೆಸಿದರೆ, ಹಾವುಗಳು ಅತ್ತಕಡೆ ಬರಲ್ಲ.
ಬೆಳ್ಳುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಸಲ್ಫೋನಿಕ್ ಆಮ್ಲವನ್ನು ಹೊಂದಿರುತ್ತದೆ. ಹಾವುಗಳಿಗೆ ಈ ವಾಸನೆ ಇಷ್ಟವಾಗುವುದಿಲ್ಲ. ಆದ್ದರಿಂದ ಮನೆಯಂಗಳದಲ್ಲಿ ಇದನ್ನು ಬೆಳೆಸಿದರೆ ಹಾವುಗಳು ಬರಲ್ಲ.
ಹೆಸರೇ ಸೂಚಿಸುವಂತೆ ಇದರ ವಾಸನೆ ನಿಂಬೆಯನ್ನು ಹೋಲುತ್ತದೆ. ಇದೊಂದು ರೀತಿಯ ಹುಲ್ಲು ಆಗಿದ್ದು, ಶ್ರೀಲಂಕಾ ಮತ್ತು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಹುಲ್ಲಿನ ಸಿಟ್ರಸ್ ಪರಿಮಳವು ಹಾವುಗಳು ಬಾರದಂತೆ ತಡೆಯುತ್ತದೆ.
ಸೂಚನೆ: ವಿವಿಧ ಅಧ್ಯಯನಗಳು, ಸಂಶೋಧನೆಗಳು ಮತ್ತು ಆರೋಗ್ಯ ಜರ್ನಲ್’ಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ. ಈ ಮಾಹಿತಿಯು ವೈದ್ಯಕೀಯ ಆರೈಕೆ ಅಥವಾ ಚಿಕಿತ್ಸೆಗೆ ಬದಲಿಯಾಗಿಲ್ಲ. ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ ಖಂಡಿತವಾಗಿಯೂ ತಜ್ಞರನ್ನು ಸಂಪರ್ಕಿಸಬೇಕು. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.