Diabetes Diet: ದಿನ ಬೆಳಿಗ್ಗೆ ಈ ತಿಂಡಿಗಳನ್ನು ತಿಂದರೆ ಹೆಚ್ಚಾಗಲ್ಲ ಡಯಾಬಿಟಿಸ್
ಪ್ರತಿದಿನ ಬೆಳಿಗ್ಗೆ ಉಪಹಾರದಲ್ಲಿ ದಕ್ಷಿಣ ಭಾರತದ ಕೆಲವು ಆಹಾರಗಳನ್ನು ಸೇವಿಸುವುದು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಇದರಿಂದ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿಡಬಹುದು ಎನ್ನಲಾಗುತ್ತದೆ. ಅಂತಹ ಆಹಾರಗಳೆಂದರೆ...
ಡಯಾಬಿಟಿಸ್ ಸಮಸ್ಯೆ ಇರುವವರು ಬೆಳಿಗ್ಗೆ ಉಪಹಾರದಲ್ಲಿ ನಾರಿನಂಶ ಮತ್ತು ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಹೆಸರುಬೇಳೆಯಿಂದ ತಯಾರಿಸಿದ ದೋಸೆ ಸವಿಯುವುದರಿಂದ ಇದು ರಕ್ತದ ಸಕ್ಕರೆ ನಿಯಂತ್ರಣವನ್ನು ಬೆಂಬಲಿಸುತ್ತದೆ.
ಮೆಂತ್ಯ ಸೊಪ್ಪು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಳಿಗ್ಗೆ ವೇಳೆ ಇದರಿಂದ ಚಪಾತಿ ತಯಾರಿಸಿ ಸೇವಿಸುವುದರಿಂದ ಮಧುಮೇಹ ಹೆಚ್ಚಾಗುವುದಿಲ್ಲ.
ಮಧುಮೇಹಿಗಳು ನಿತ್ಯ ಬೆಳಿಗ್ಗೆ ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯ ತರಕಾರಿ ಉಪ್ಪಿಟ್ಟು ಸವಿಯುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
ಡಯಾಬಿಟಿಸ್ ಇರುವವರಿಗೆ ರಾಗಿ ಒಂದು ದಿವ್ಯೌಷಧ ಇದ್ದಂತೆ. ಬೆಳಗಿನ ಉಪಹಾರದಲ್ಲಿ ರಾಗಿ ರೊಟ್ಟಿ ತಿನ್ನುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಪ್ರಯೋಜನಕಾರಿ ಆಗಿದೆ.
ಮಧುಮೇಹಿಗಳು ಬೆಳಿಗ್ಗೆ ವೇಳೆ ನುಗ್ಗೆ ಸೊಪ್ಪು, ನುಗ್ಗೆ ಕಾಯಿ ಬಳಸಿದ ಖಾದ್ಯಗಳನ್ನು ಸೇವಿಸುವುದರಿಂದಲೂ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.