ನಿತ್ಯ ಈ ಮಸಾಲೆಗಳನ್ನು ಬಳಸಿದ್ರೆ ಡಯಾಬಿಟಿಸ್ ರೋಗಿಗಳಲ್ಲಿ ಶುಗರ್ ಎಂದಿಗೂ ಹೈ ಆಗುವುದಿಲ್ಲ!
ಡಯಾಬಿಟಿಸ್ ರೋಗಿಗಳು ನಿತ್ಯ ತಮ್ಮ ಆಹಾರದಲ್ಲಿ ಕೆಲವು ಮಸಾಲೆಗಳನ್ನು ಬಳಸುವುದರಿಂದ ಎಂದಿಗೂ ಸಹ ಶುಗರ್ ಹೆಚ್ಚಾಗುವುದೇ ಇಲ್ಲ. ಅಂತಹ ಮಸಾಲೆಗಳೆಂದರೆ...
ಕರ್ಕ್ಯುಮಿನ್, ಉತ್ಕರ್ಷಣ ನಿರೋಧಕಗಳಂತ ಅಂಶ ಅರಿಶಿನದಲ್ಲಿ ಕಂಡು ಬರುವುದರಿಂದ ಇದು ಬ್ಲಡ್ ಶುಗರ್ ನಿಯಂತ್ರಿಸುವ ಪರಿಣಾಮಕಾರಿ ಮದ್ದು.
ಶುಂಠಿಯಲ್ಲಿರುವ ಜಿಂಜಾರೋಯಿಲ್ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.
ಕೆಮ್ಮು-ಕಫಕ್ಕೆ ಸಂಜೀವಿನಿಯಂತಿರುವ ಕರಿಮೆಣಸಿನಲ್ಲಿ ಪೈಪರಿನ್ ಕಂಡು ಬರುತ್ತದೆ. ಇದು ಬ್ಲಡ್ ಶುಗರ್ ಅನ್ನು ಸ್ಥಿರಗೊಳಿಸಲು ಸಹಾಯಕವಾಗಿದೆ.
ಔಷಧೀಯ ಗುಣಗಳಲ್ಲಿ ಸಮೃದ್ಧವಾಗಿರುವ ಬೆಳ್ಳುಳ್ಳಿ ಇನ್ಸುಲಿನ್ ಸ್ರವಿಸುವಿಕೆಯನ್ನು ಸುಧಾರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ವರದಾನವಿದ್ದಂತೆ.
ಕರಗುವ ಫೈಬರ್ ನಲ್ಲಿ ಸಮೃದ್ಧವಾಗಿರುವ ಮೆಂತ್ಯ ಬೀಜಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಇದು ಬ್ಲಡ್ ಶುಗರ್ ನಿಯಂತ್ರಿಸುತ್ತದೆ.
ಲವಂಗದಲ್ಲಿರುವ ಸಂಯುಕ್ತಗಳು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಿ ನೈಸರ್ಗಿಕವಾಗಿ ಶುಗರ್ ಲೆವೆಲ್ ಹೆಚ್ಚಾಗುವುದನ್ನು ತಡೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.