ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಅಗ್ಗದ ಟ್ಯಾಬ್ ಗಳಿವು
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎ 7 ಲೈಟ್ ಟ್ಯಾಬ್ಲೆಟ್ 8.7 ಇಂಚುಗಳಷ್ಟು ಗಾತ್ರದ್ದಾಗಿರುತ್ತದೆ. ಇದು ಟಿಎಫ್‌ಟಿ ಡಿಸ್ಪ್ಲೇಯನ್ನು ಹೊಂದಿದೆ. ಇದು 5100mAh ಬ್ಯಾಟರಿಯನ್ನು ಹೊಂದಿದೆ. ಇನ್ನು 8 ಮೆಗಾಪಿಕ್ಸೆಲ್‌ಗಳ ಕ್ಯಾಮೆರಾ ವನ್ನು ಒಳಗೊಂಡಿರುತ್ತದೆ . ಇದರ ಬೆಲೆ 14,999 ರೂ.
iBall iTab MovieZ tablet ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದರ ಬೆಲೆ 12,960 ರೂ. ಇದರ ಸ್ಕ್ರೀನ್ ಅಳತೆ 10.1 ಇಂಚುಗಳದ್ದಾಗಿರುತ್ತದೆ. ಇದು 7000mAh ಬ್ಯಾಟರಿಯನ್ನು ಹೊಂದಿದೆ.
Lenovo Tab4 8 tablet 11,490 ರೂ.ಗೆ ಲಭ್ಯವಿರುತ್ತದೆ. ಇದು 8 ಇಂಚುಗಳ ಸ್ಕ್ರೀನ್ ಹೊಂದಿದ್ದು, 4850mAh ಬ್ಯಾಟರಿಯನ್ನು ಒಳಗೊಂಡಿದೆ. ಇದರ ಪ್ರೈಮರಿ ಕ್ಯಾಮೆರಾ 5 ಮೆಗಾಪಿಕ್ಸೆಲ್‌ಗಳಾಗಿದ್ದು, 2 ಮೆಗಾಪಿಕ್ಸೆಲ್ ನ ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ.
Panasonic Tab 8 HD tablet 10,499 ರೂ. ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಕೂಡಾ 8 ಇಂಚುಗಳ ಪರದೆಯನ್ನು ಹೊಂದಿದೆ. 3 ಜಿಬಿ RAM ಮತ್ತು32 ಜಿಬಿ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದರ ಬ್ಯಾಟರಿ 5100mAh ಆಗಿದೆ.
Lenovo Tab M10 FHD Plus tabletನ ಸ್ಕ್ರೀನ್ 10.3 ಇಂಚುಗಳಷ್ಟಿದೆ . ಈ ಟ್ಯಾಬ್ಲೆಟ್ ರಿಯಾಯಿತಿ ದರದೊಂದಿಗೆ 21,999 ರೂ.ಗೆ ಲಭ್ಯವಿದೆ. ಇದರ ಬ್ಯಾಟರಿ ಸಾಮರ್ಥ್ಯ 5000mAh ಆಗಿದೆ.