ಬೆಳಿಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ..? ಏನಂತಾರೆ ವೈದ್ಯರು

Tue, 07 May 2024-8:53 pm,

ಹೆಚ್ಚಿನ ಜನರು ಬೆಳಿಗ್ಗೆ ಹಲ್ಲುಜ್ಜಿದ ನಂತರ ಆಹಾರ ಸೇವನೆ ಮಾಡ್ತಾರೆ. ಅಲ್ಲದೆ, ಬಾಯಿ ತೊಳೆದ ನಂತರವೇ ನೀರು ಕುಡಿಯಲು ಇಷ್ಟಪಡುತ್ತಾರೆ. ವೈದ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಆರೋಗ್ಯವಾಗಿರಲು ದಿನಕ್ಕೆ 8-10 ಗ್ಲಾಸ್ ನೀರನ್ನು ಕುಡಿಯಬೇಕು. ಬೆಳಿಗ್ಗೆ ಬೆಡ್‌ ಮೇಲಿಂದ ಎದ್ದ ನಂತರ ಮೊದಲು ನೀರು ಕುಡಿಯುವುದು ಉತ್ತಮ ಅಂತ ಹೇಳಲಾಗುತ್ತದೆ..  

ಈ ಕುರಿತು ಹಲವಾರು ಜನರ ಮನದಲ್ಲಿ ಗೊಂದಲವಿದೆ. ಬೆಳಿಗ್ಗೆ ಹಲ್ಲು ತಿಕ್ಕಿದ ನಂತರ ನೀರು ಕುಡಿಯಬೇಕಾ..? ಅಥವಾ ಹಾಗೆಯೇ ಕುಡಿದರೇ ಒಳ್ಳೆಯದಾ..? ಎನ್ನುವುದು ಅವರ ಪ್ರಶ್ನೆ. ನಿಮಗೂ ಈ ಬಗ್ಗೆ ಅನುಮಾನವಿದ್ದರೇ ಈ ಸುದ್ದಿ ನಿಮಗೆ ಸಹಾಯ ಮಾಡುತ್ತದೆ..  

ಆಯುರ್ವೇದದಿಂದ ಆರೋಗ್ಯ ತಜ್ಞರವರೆಗೆ ಬೆಳಿಗ್ಗೆ ಎದ್ದ ನಂತರ ಬಾಯಿ ತೊಳೆಯದೇ ನೀರು ಕುಡಿಯುವುದರಿಂದ ಅನೇಕ ರೋಗಗಳು ಪ್ರಾರಂಭವಾಗುವ ಮೊದಲೇ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಈ ಕಾಯಿಲೆಗಳಲ್ಲಿ ಗ್ಯಾಸ್, ಅಸಿಡಿಟಿ, ಚರ್ಮ ರೋಗಗಳು, ಮಲಬದ್ಧತೆ, ಮಂದತೆ, ಬಿಪಿ ಮತ್ತು ಮಧುಮೇಹ ಕೂಡ ಸೇರಿವೆ.   

ಬಾಯಿ ತೊಳೆಯದೇ ಬೆಳಿಗ್ಗೆ ನೀರು ಕುಡಿಯುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ, ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ, ಇದು ಕ್ಯಾಲೊರಿಗಳನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿದರೆ ಸ್ಥೂಲಕಾಯ ಸಮಸ್ಯೆಯಿಂದ ಪಾರಾಗಬಹುದು ಎಂಬುದು ಹಲವು ತಜ್ಞರ ಅಭಿಪ್ರಾಯ.   

ಹೈ ಬಿಪಿ ಮತ್ತು ಹೈ ಶುಗರ್ : ಬೆಳಿಗ್ಗೆ ನೀರು ಕುಡಿಯುವುದರಿಂದ ಅಧಿಕ ಬಿಪಿ ಮತ್ತು ರಕ್ತದಲ್ಲಿನ ಸಕ್ಕರೆಯ ಸಮಸ್ಯೆಯನ್ನು ನಿಯಂತ್ರಿಸಬಹುದು. ಅದಕ್ಕಾಗಿ ಬೆಳಗ್ಗೆ ಎದ್ದು ಒಂದು ಲೋಟ ಬೆಚ್ಚಗಿನ ನೀರು ಕುಡಿಯಿರಿ.  

ಉತ್ತಮ ಜೀರ್ಣಕ್ರಿಯೆ : ಬೆಳಿಗ್ಗೆ ಹಲ್ಲುಜ್ಜದೆ ನೀರನ್ನು ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಈ ಅಭ್ಯಾಸವು ಅಸಿಡಿಟಿ, ಮಲಬದ್ಧತೆ, ಗ್ಯಾಸ್ ಅನ್ನು ಹೋಗಲಾಡಿಸಿ ಆರೋಗ್ಯಕರ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.  

ಉತ್ತಮ ರೋಗನಿರೋಧಕ ಶಕ್ತಿ : ಬೆಳಿಗ್ಗೆ ಹಲ್ಲುಜ್ಜುವ ಮೊದಲು ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕಾಲೋಚಿತ ಪರಿವರ್ತನೆಯಿಂದ ಶೀತ-ಕೆಮ್ಮಿನ ಹೆಚ್ಚಿನ ದೂರುಗಳನ್ನು ಹೊಂದಿರುವ ಜನರು ಬೆಳಿಗ್ಗೆ ಬಾಯಿಯ ಮೂಲಕ ನೀರನ್ನು ಕುಡಿಯಬೇಕು. ಹಲ್ಲುಜ್ಜಿದ ನಂತರ 15-20 ನಿಮಿಷಗಳ ಕಾಲ ತಿನ್ನುವುದು ಮತ್ತು ಕುಡಿಯುವುದನ್ನು ತಡೆಯಬೇಕು. ಹೀಗೆ ಮಾಡುವುದರಿಂದ ಟೂತ್ ಪೇಸ್ಟ್ ನ ಗುಣಗಳು ಕಡಿಮೆಯಾಗುತ್ತವೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link