ಬೆಳಗ್ಗೆ ಎದ್ದ ಕೂಡಲೇ ಈ ಎಲೆಯ ಜೊತೆ ಒಂದು ಮೊಗ್ಗು ಲವಂಗ ತಿನ್ನಿ !ಬ್ಲಡ್ ಶುಗರ್ ನಾರ್ಮಲ್ ಮಾಡಲು ಬೇರೆ ಮದ್ದು ಬೇಡವೇ ಬೇಡ !
ಮಧುಮೇಹ ಇದ್ದರೆ ಜೀವನ ಪೂರ್ತಿ ಔಷಧಿ ತೆಗೆದುಕೊಳ್ಳಲೇ ಬೇಕು.ಆಗ ಮಾತ್ರ ರಕ್ತದ ಸಕ್ಕರೆ ನಿಯಂತ್ರಣದಲ್ಲಿ ಇರುತ್ತದೆ.ಕೆಲವೊಂದು ಮನೆ ಮದ್ದಿನ ಮೂಲಕ ಕೂಡಾ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು.
ವೀಳ್ಯದೆಲೆಯನ್ನು ಸಾಮಾನ್ಯವಾಗಿ ಎಲ್ಲರೂ ಸೇವಿಸುತ್ತಾರೆ. ಆದರೆ,ವೀಳ್ಯದೆಲೆಯ ಜೊತೆಗೆ ಒಂದು ಮೊಗ್ಗು ಲವಂಗ ಸೇವಿಸಿದರೆ ಮಧುಮೇಹವನ್ನು ನಿಯಂತ್ರಣಕ್ಕೆ ತರುವುದು ಸಾಧ್ಯ.
ವೀಳ್ಯದೆಲೆಯಲ್ಲಿ ಅಯೋಡಿನ್,ಪೊಟ್ಯಾಸಿಯಮ್,ವಿಟಮಿನ್ ಎ,ವಿಟಮಿನ್ ಬಿ 1 ಮತ್ತು ನಿಕೋಟಿನಿಕ್ ಆಮ್ಲವನ್ನು ಹೊಂದಿರುತ್ತವೆ.ಚಯಾಪಚಯವನ್ನು ಸುಧಾರಿಸುವಲ್ಲಿ ವಿಟಮಿನ್ ಬಿ 1 ಪ್ರಮುಖ ಪಾತ್ರ ವಹಿಸುತ್ತದೆ.ಹೀಗಾಗಿ ಇದು ರಕ್ತದ ಸಕ್ಕರೆಯನ್ನು ಕೂಡಾ ನಿಯಂತ್ರಣದಲ್ಲಿ ಇಡುತ್ತದೆ.
ಲವಂಗದಲ್ಲಿರುವ ಉತ್ಕರ್ಷಣ ನಿರೋಧಕಗಳು ಮೇದೋಜ್ಜೀರಕ ಗ್ರಂಥಿಯ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಮೇದೋಜ್ಜೀರಕ ಗ್ರಂಥಿಯ ಮೂಲಕ ಇನ್ಸುಲಿನ್ ಉತ್ಪತ್ತಿಯಾಗುತ್ತದೆ.ಆದ್ದರಿಂದ, ಪ್ರತಿದಿನ ಲವಂಗವನ್ನು ಸೇವಿಸಿದರೆ ಸಕ್ಕರೆ ಮಟ್ಟದ ಬಗ್ಗೆ ಚಿಂತಿಸಬೇಕಾಗಿಲ್ಲ.
ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಅಂದರೆ ಖಾಲಿ ಹೊಟ್ಟೆಗೆ ಒಂದು ವೀಳ್ಯದೆಲೆಯ ಜೊತೆಗೆ ಒಂದೆರಡು ಮೊಗ್ಗು ಲವಂಗ ಇಟ್ಟು ಪಾನ್ ರೀತಿಯಲ್ಲಿಯೇ ಜಗಿದು ಸೇವಿಸಿ. ಹೀಗೆ ಮಾಡಿದರೆ ಯಾವುದೇ ಕಾರಣಕ್ಕೂ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ ಎನ್ನಲಾಗುತ್ತದೆ.
ಇನ್ನೊಂದು ವಿಧಾನದ ಪ್ರಕಾರ ವೀಳ್ಯದೆಲೆಯನ್ನು ಜಜ್ಜಿ ಅದನ್ನು ಮತ್ತು ಒಂದೆರಡು ಮೊಗ್ಗು ಲವಂಗವನ್ನು ಒಂದು ಲೋಟ ನೀರಿಗೆ ಹಾಕಿ ರಾತ್ರಿಯಿಡೀ ನೆನೆಯಲು ಬಿಡಿ, ಬೆಳಗ್ಗೆ ಎದ್ದ ಕೂಡಲೇ ಹಳಸಲು ಬಾಯಿಗೆ ಆ ನೀರನ್ನು ಹಾಗೆಯೇ ಕುಡಿದು ಬಿಡಿ.
ಮೇಲೆ ಹೇಳಿದ ಎರಡು ವಿಧಾನಗಳಲ್ಲಿ ಯಾವುದನ್ನು ಅಳವಡಿಸಿದರೂ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇರುವುದು ಗ್ಯಾರಂಟಿ ಎನ್ನಲಾಗಿದೆ.(ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)