ವೀಳ್ಯದೆಲೆಯನ್ನು ಈ ರೀತಿ ಬಳಸಿದರೆ ಒಂದೇ ಒಂದು ಬಿಳಿ ಕೂದಲು ಇರಲ್ಲ!

Wed, 28 Feb 2024-2:08 pm,

ಹೊಳೆಯುವ ಮುಖ ಮತ್ತು ಕೂದಲು ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ. ಆದರೆ ಬಿಳಿಕೂದಲಿನ ಸಮಸ್ಯೆ, ಅಥವಾ ಕೂದಲಿಗೆ ಸಂಬಂಧಿಸಿದ ಇತರ ಸಮಸ್ಯೆಗಳು ನಮ್ಮನ್ನು ಚಿಂತೆಗೀಡು ಮಾಡುತ್ತವೆ.

ಈ ಲೇಖನದಲ್ಲಿ ನಾವು ನಿಮಗೆ ವೀಳ್ಯದೆಲೆಯ ಹೇರ್ ಮಾಸ್ಕ್ ಬಗ್ಗೆ ಹೇಳಲಿದ್ದೇವೆ. ಇದನ್ನು ಹಚ್ಚುವ ಮೂಲಕ ನೀವು ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಬಹುದು.

4 ರಿಂದ 5 ವೀಳ್ಯದೆಲೆ, ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಮತ್ತು ನೀರು ಬೇಕಾಗುತ್ತದೆ. ಮಿಕ್ಸರ್ ಗ್ರೈಂಡರ್‌’ನಲ್ಲಿ ವೀಳ್ಯದೆಲೆಯನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ನಂತರ ಅದಕ್ಕೆ ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಮತ್ತು ಸ್ವಲ್ಪ ನೀರು ಸೇರಿಸಿ. ಇನ್ನು ಕೂದಲಿನ ಬೇರುಗಳ ಸಮೇತ ಹಚ್ಚಿ. 5 ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು 30 ನಿಮಿಷಗಳ ಕಾಲ ಒಣಗಲು ಬಿಡಿ. ಇದರ ನಂತರ, ಸಾಮಾನ್ಯ ಶಾಂಪೂ ಮತ್ತು ಕಂಡಿಷನರ್ನೊಂದಿಗೆ ಕೂದಲನ್ನು ತೊಳೆಯಿರಿ. ಹೀಗೆ ವಾರಕ್ಕೊಮ್ಮೆ ಮಾಡಬೇಕು.

4 ರಿಂದ 5 ವೀಳ್ಯದೆಲೆಗಳು, 1 ರಿಂದ 2 ಚಮಚ ತುಪ್ಪ, 1 ಚಮಚ ಜೇನುತುಪ್ಪ ಮತ್ತು ನೀರು ಬೇಕಾಗುತ್ತದೆ. ಪೇಸ್ಟ್ ತಯಾರಿಸಲು ವೀಳ್ಯದೆಲೆ, ನೀರು, ತುಪ್ಪ ಮತ್ತು ಜೇನುತುಪ್ಪವನ್ನು ಗ್ರೈಂಡರ್’ಗೆ ಹಾಕಿ ರುಬ್ಬಿಕೊಳ್ಳಿ. ನಂತರ ಕೂದಲಿಗೆ ಪೇಸ್ಟ್ ಹಚ್ಚಿ. 20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಶಾಂಪೂವಿನಿಂದ ಚೆನ್ನಾಗಿ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಅನುಸರಿಸಿದರೆ ಬಿಳಿ ಕೂದಲು ಕಪ್ಪಾಗುವ ಜೊತೆ ಸುಂದರವಾಗಿ, ಹೊಳೆಯುತ್ತದೆ.

ಪೊಟ್ಯಾಸಿಯಮ್, ನಿಕೋಟಿನಿಕ್ ಆಮ್ಲ, ವಿಟಮಿನ್ ಎ, ಬಿ 1, ಬಿ 2 ಮತ್ತು ಸಿ ಜೊತೆಗೆ ಇತರ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ವೀಳ್ಯದೆಲೆಯಲ್ಲಿ ಕಂಡುಬರುತ್ತವೆ. ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಲ್ಲಿಸುವ ಮೂಲಕ ಕೂದಲು ಉದುರುವಿಕೆಯನ್ನು ತಡೆಯಲು ಈ ಎಲ್ಲಾ ಅಂಶಗಳು ಕಾರ್ಯನಿರ್ವಹಿಸುತ್ತವೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೊರುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link