ಆರೋಗ್ಯದ ಗಣಿ ವೀಳ್ಯದೆಲೆ.. ಈ ರೋಗಗಳಿಗೆ ಇದರಲ್ಲಿದೆ ಮದ್ದು!
ವೀಳ್ಯದೆಲೆಯು ಕೀಲು ನೋವು, ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆ, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದಲೂ ವೀಳ್ಯದೆಲೆ ಪರಿಹಾರ ನೀಡುತ್ತದೆ.
ವೀಳ್ಯದೆಲೆಯಲ್ಲಿ ಬೆಳ್ಳುಳ್ಳಿ ಎಸಳು, ಸಣ್ಣ ತುಂಡು ಶುಂಠಿ, ಜೇನುತುಪ್ಪ ಬೆರೆಸಿ ಜಗಿದು ತಿನ್ನಬೇಕು. ಇದನ್ನು ಸೇವಿಸುವುದರಿಂದ ರಕ್ತನಾಳಗಳಲ್ಲಿರುವ ಬ್ಲಾಕ್‌ಗಳು ಕ್ಲೀಯರ್ ಆಗುತ್ತವೆ. ರಕ್ತ ಸಂಚಾರ ಸುಧಾರಿಸುತ್ತದೆ.
ಚಳಿಗಾಲದಲ್ಲಿ ಮಕ್ಕಳು ಹೆಚ್ಚಾಗಿ ಶೀತಕ್ಕೆ ಒಳಗಾಗುತ್ತಾರೆ. ವೀಳ್ಯದೆಲೆಗೆ ಸ್ವಲ್ಪ ಅರಿಶಿನ ಹಾಕಿ ಮಗುವಿನ ತಲೆಗೆ ತಿಕ್ಕಿದರೆ ಶೀತ ಬೇಗ ಕಡಿಮೆಯಾಗುತ್ತದೆ.
ನಿದ್ರಾಹೀನತೆಯಿಂದ ಬಳಲುತ್ತಿರುವವರು ವೀಳ್ಯದೆಲೆಯಿಂದ ಮಾಡಿದ ಈ ಹಲ್ವಾವನ್ನು ಸೇವಿಸಬೇಕು. ಇದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.