ಸ್ಟೋನ್ ರೂಪ ಪಡೆಯುವ ಮುನ್ನವೇ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕುತ್ತದೆ ವೀಳ್ಯದೆಲೆ!ಈ ಹೊತ್ತಿನಲ್ಲಿ ಹೀಗೆಯೇ ಸೇವಿಸಿ !
ವೀಳ್ಯದೆಲೆಯನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ,ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು ಅನ್ನುವುದು ಸಾಬೀತಾಗಿರುವ ಸತ್ಯ.
ವೀಳ್ಯದೆಲೆಯಲ್ಲಿ ಉರಿಯೂತ ನಿವಾರಕ ಗುಣವಿದ್ದು,ಕೀಲು ನೋವಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವ ಮೂಲಕ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಬಹುದು.
ಯೂರಿಕ್ ಆಸಿಡ್ ಕಡಿಮೆ ಮಾಡಲು ವೀಳ್ಯದೆಲೆಯನ್ನು ಸೇವಿಸುವುದಾದರೆ ತಂಬಾಕು,ಜರ್ದಾ ಬೆರೆಸಿ ಸೇವಿಸಬಾರದು.ಈ ಎಲೆಯನ್ನು ಹಾಗೆಯೇ ನಿಯಮಿತವಾಗಿ ಅಗಿಯಿರಿ. ಹೀಗೆ ಅಗೆಯುವಾಗ ಸ್ವಲ್ಪ ಪ್ರಮಾಣದಲ್ಲಿ ಸುಣ್ಣವನ್ನು ಬೆರೆಸಬಹುದು.
ಹೀಗೆ ನಿಯಮಿತವಾಗಿ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆಯನ್ನು ಸೇವಿಸುತ್ತಾ ಬಂದರೆ ಗಂಟು ಗಂಟುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗುತ್ತದೆ.ಈ ಮೂಲಕ ಕಿಡ್ನಿ ಸ್ಟೋನ್ ಆಗದಂತೆಯೂ ತಡೆಯುತ್ತದೆ.
ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸುವಲ್ಲಿ ವೀಳ್ಯದೆಲೆಯು ಪ್ರಯೋಜನಕಾರಿಯಾಗಿದೆ. ಆದರೂ ವೀಳ್ಯದೆಲೆಗಳನ್ನು ಎಚ್ಚರಿಕೆಯಿಂದ ಸೇವಿಸಿ.(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)