ದೇಹದಲ್ಲಿ ಯೂರಿಕ್‌ ಆಸಿಡ್‌ ಅಂಶವನ್ನು ಕಡಿಮೆ ಮಾಡಲು 1 ರೂ.ಗೆ ಸಿಗುವ ಈ ಪದಾರ್ಥವನ್ನು ಸೇವಿಸಿ ಸಾಕು!!

Tue, 22 Oct 2024-11:50 am,

Betel Leaves for Uric acid: ಇಂದಿನ ಜೀವನಶೈಲಿಯಿಂದ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಎಲ್ಲಾ ವಯಸ್ಸಿನ ಜನರು ಯೂರಿಕ್ ಆಮ್ಲ ಸಮಸ್ಯಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿ ಕಂಡುಬರುವ ಕೊಳಕು ಸಂಯುಕ್ತವನ್ನು ಯೂರಿಕ್‌ ಆಸಿಡ್‌ ಎಂದು ಕರೆಯಲಾಗುತ್ತದೆ.   

ಯೂರಿಕ್ ಆಮ್ಲವು ದೀರ್ಘಕಾಲದವರೆಗೆ ದೇಹದಲ್ಲಿ ಶೇಖರಣೆಯಾಗುವುದರಿಂದ, ಘನವಸ್ತುಗಳು ಸಂಗ್ರಹವಾಗುತ್ತವೆ ಮತ್ತು ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುತ್ತವೆ.   

ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಕೆಲವು ಮನೆಮದ್ದುಗಳನ್ನು ಉಪಯೋಗಿಸಬಹುದು, ವೀಳ್ಯದೆಲೆ ಯೂರಿಕ್ ಆಸಿಡ್‌ ಅನ್ನು ಕಡಿಮೆ ಮಾಡಲು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ.  

ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ವೀಳ್ಯದೆಲೆ ಬಹಳ ಪರಿಣಾಮಕಾರಿ. ಇದು ಸಂಶೋಧನೆಯಿಂದ ಸಾಬೀತಾಗಿದೆ. ವೀಳ್ಯದೆಲೆಯಲ್ಲಿರುವ ಉರಿಯೂತ ನಿವಾರಕ ಗುಣಗಳು ಕೀಲುಗಳ ಅಸ್ವಸ್ಥತೆ ಮತ್ತು ನೋವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.   

ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಪ್ರತಿದಿನ ವೀಳ್ಯದೆಲೆಯನ್ನು ಜಗಿಯುವುದನ್ನು ತಜ್ಞರು ಶಿಫಾರಸು ಮಾಡುತ್ತಾರೆ. ಇದು ನಿಮ್ಮ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುತ್ತದೆ.   

ವೀಳ್ಯದೆಲೆಯು ಅನೇಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಬಾಯಿಯಲ್ಲಿರುವ ಅನೇಕ ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಊಟವಾದ ನಂತರ ಒಂದಿಷ್ಟು ವೀಳ್ಯದೆಲೆಯನ್ನು ಜಗಿಯುವುದರಿಂದ ಹೊಟ್ಟೆಯು ಆರೋಗ್ಯವಾಗಿರುವುದಲ್ಲದೆ, ಬಾಯಿಯ ದುರ್ವಾಸನೆಯ ವಿರುದ್ಧ ಹೋರಾಡುತ್ತದೆ, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ ಮತ್ತು ಹಲ್ಲುನೋವು, ವಸಡು ನೋವು, ಉರಿಯೂತ ಮತ್ತು ಬಾಯಿಯ ಸೋಂಕುಗಳನ್ನು ನಿವಾರಿಸುತ್ತದೆ.  

ವೀಳ್ಯದೆಲೆಯು ಕರುಳನ್ನು ರಕ್ಷಿಸಲು ಮತ್ತು ವಾಯುವನ್ನು ತಡೆಯಲು ಸಹಾಯ ಮಾಡುತ್ತದೆ. ವೀಳ್ಯದೆಲೆಯು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಕರುಳುಗಳು ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.    

ವೀಳ್ಯದೆಲೆಯು ಟೈಪ್ 2 ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ವೀಳ್ಯದೆಲೆಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಅನಿಯಂತ್ರಿತ ರಕ್ತದಲ್ಲಿನ ಗ್ಲೂಕೋಸ್‌ನಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link