Gruha Lakshmi Fake App: ಎಚ್ಚರ! ಗೃಹಲಕ್ಷ್ಮಿ ಯೋಜನೆ ಹೆಸರಲ್ಲೂ ಹುಟ್ಟಿಕೊಂಡಿವೆ ನಕಲಿ ಆಪ್‌ಗಳು
ನೂತನ ಸರ್ಕಾರ ಮಹಿಳೆಯರಿಗಾಗಿ ಜಾರಿಗೆ ತಂದಿರುವ "ಶಕ್ತಿ ಯೋಜನೆಗೆ" ಭರ್ಜರಿ ರೆಸ್ಪಾನ್ಸ್ ಲಭ್ಯವಾಗುತ್ತಿದೆ. ಇದೀಗ ಕರುನಾಡಿನ ಗೃಹ ಲಕ್ಷ್ಮಿಯರೆಲ್ಲಾ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಕಾತುರರಾಗಿ ಕಾಯುತಿದ್ದಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಒಮ್ಮೆ ಓದಲೇಬೇಕು.
ಗೃಹಲಕ್ಷ್ಮಿ ಯೋಜನೆ ಹೆಸರಲ್ಲೂ ಹುಟ್ಟಿಕೊಂಡಿವೆ ನಕಲಿ ಆಪ್‌ಗಳು: ಹೌದು, ಗೃಹಲಕ್ಷ್ಮಿ ಯೋಜನೆ ಹೆಸರಲ್ಲೂ ನಕಲಿ ಆಪ್‌ಗಳು ಹುಟ್ಟಿಕೊಂಡಿದ್ದು ಯಾಮಾರೀ ಈ ಆಪ್ ಗಳನ್ನ ಡೌನ್‌ಲೋಡ್ ಮಾಡಿದ್ರೆ ನಿಮ್ಮ ಅಕೌಂಟ್ ಖಾಲಿ ಆಗೋದಂತು ಗ್ಯಾರಂಟಿ.
ಗೃಹಲಕ್ಷ್ಮಿ ಯೋಜನೆ ಹೆಸರಲ್ಲಿ ನಕಲಿ ಅಫ್ಲೀಕೇಷನ್ ಹಾವಳಿ ಶುರುವಾಗಿದ್ದು, ಅರ್ಜಿ ಸಲ್ಲಿಸುವ ಭರದಲ್ಲಿ ಫೇಕ್ ಆಪ್ಗಳನ್ನು ಡೌನ್ಲೋಡ್ ಮಾಡಿದ್ರೆ ನಿಮ್ಮ ಖಾತೆಗೆ ಹಣ ಬರುವುದಿರಲಿ, ಖಾತೆಯಲ್ಲಿರುವ ಹಣವನ್ನೂ ಕಳೆದುಕೊಳ್ಳಬೇಕಾಗುತ್ತದೆ, ಹುಷಾರ್! ಹುಷಾರ್!
ಈ ನಕಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಅಗತ್ಯ ಮಾಹಿತಿಗಳನ್ನು ಪಡೆದು ಫೇಕ್ ಆಫ್ ಮೂಲಕ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಸೈಬರ್ ಕಳ್ಳರು ಎಂಟ್ರಿ ಕೊಡೋ ಸಾಧ್ಯತೆ ಇದೆ. ಹಾಗಾಗಿ, ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯಾವ ಆಪ್‌ನಲ್ಲಿ ಅರ್ಜಿ ಸಲ್ಲಿಸುತ್ತಿದ್ದೀರಿ. ಅದು ನಿಜವಾದ ಆಪ್ ಆಗಿದೆಯೋ ಇಲ್ಲವೋ ಎಂಬುದನ್ನೂ ತಪ್ಪದೇ ಪರಿಶೀಲಿಸುವುದು ಅಗತ್ಯವಾಗಿದೆ.
ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಅಪ್ಲೀಕೇಶನ್‌ಗೆ ಗ್ರೀನ್ ಸಿಗ್ನಲ್ ದೊರೆತಿದ್ದು, ಇದರ ಬೆನ್ನಲೆ ಪ್ಲೇ ಸ್ಟೋರ್ ನಲ್ಲಿ ಫೇಕ್ ಆಪ್ಸ್ ಹರಿದಾಡುತ್ತಿದೆ. ಗೃಹಲಕ್ಷ್ಮಿ ಹೆಸರಿನ ಐದಾರು ನಕಲಿ ಆಪ್ ಗಳು ಸೃಷ್ಠಿಯಾಗಿದ್ದು, ನೋಡೋಕೇ ಮಾತ್ರ ಥೇಟ್ ಸರ್ಕಾರ ಸಿದ್ದಪಡಿಸಿರೋ ಆಪ್ ರೀತಿಯೇ ಇವೆ.
ಹಾಗಂತ, ನೀವು ಅಪ್ಪಿತಪ್ಪಿ ನಕಲಿ ಆಪ್‌ಗಳನ್ನು ಡೌನ್ಲೋಡ್ ಮಾಡಿದ್ರೆ ಮೊಬೈಲ್‌ನಲ್ಲಿರೊ ನಿಮ್ಮ ಖಾಸಗಿ ಡಿಟೇಲ್ಸ್ ಗಳ ಜೊತೆಗೆ ನಿಮ್ಮ ಬ್ಯಾಂಕ್ ಖಾತೆಗೂ ಖನ್ನ ಬೀಳುವ ಸಾಧ್ಯತೆ ಇರುವುದರಿಂದ ನಕಲಿ ಆಪ್‌ಗಳ ಬಗ್ಗೆ ಎಚ್ಚರದಿಂದಿರಿ.