Budha Gochara: ಬುಧ ಸಂಚಾರದಿಂದ ಭದ್ರ ರಾಜಯೋಗ, ಈ ರಾಶಿಯವರಿಗೆ ಶ್ರೀಮಂತರಾಗುವ ಯೋಗ
ವೈದಿಕ ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ, ಜೂನ್ ತಿಂಗಳ ಆರಂಭದಲ್ಲಿ ಅಸ್ತಮಿಸಿದ್ದ ಗ್ರಹಗಳ ರಾಜಕುಮಾರ ಬುಧ ಬಳಿಕ ಮಿಥುನ ರಾಶಿಗೆ ಪ್ರವೇಶಿಸಿದ್ದಾನೆ. ಇದೀಗ ಅದೇ ರಾಶಿಯಲ್ಲಿ ಬುಧ ಉದಯಿಸಿದ್ದಾನೆ. ತನ್ನದೇ ರಾಶಿಯಲ್ಲಿ ಬುಧನ ರಾಶಿ ಪರಿವರ್ತನೆಯಿಂದ ಪಂಚ ಮಹಾಪುರುಷ ರಾಜಯೋಗದಲ್ಲಿ ಒಂದಾದ ಭದ್ರ ಮಹಾಪುರುಷ ರಾಜಯೋಗ ನಿರ್ಮಾಣಗೊಂಡಿದೆ. ಈ ಬುಧ ಸಂಕ್ರಮಣದಿಂದ 3 ರಾಶಿಚಕ್ರದವರು ತಮ್ಮ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.
ಯಾವುದೇ ವ್ಯಕ್ತಿಯ ಜಾತಕದಲ್ಲಿ ಉಬ್ಧನು ಶುಭ ಸ್ಥಾನದಲ್ಲಿದ್ದಾಗ ಆ ವ್ಯಕ್ತಿಯು ಉದ್ಯಮದಲ್ಲಿ ಲಾಭವನ್ನು ಪಡೆಯುವುದರ ಜೊತೆಗೆ ಶ್ರೀಮಂತನಾಗುವ ಸುಯೋಗವೂ ಇರಲಿದೆ ಎಂದು ಹೇಳಲಾಗುತ್ತದೆ. ಇದೀಗ ಬುಧ ಸಂಕ್ರಮಣದಿಂದ ರೂಪುಗೊಂಡಿರುವ ಭದ್ರ ಮಹಾಪುರುಷ ರಾಜಯೋಗವು ಯಾವ ರಾಶಿಯವರಿಗೆ ಅದೃಷ್ಟವನ್ನು ತರಲಿದೆ ಎಂದು ತಿಳಿಯೋಣ...
ಬುಧ ಉದಯದಿಂದ ನಿರ್ಮಾಣವಾಗಿರುವ ಭದ್ರ ರಾಜಯೋಗವು ಕನ್ಯಾ ರಾಶಿಯ ಜನರಿಗೆ ಉದ್ಯೋಗದಲ್ಲಿ ಬಡ್ತಿಯನ್ನೂ, ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ನೀಡಲಿದ್ದಾನೆ. ಇದರಿಂದ ಹಣಕಾಸಿನ ಹರಿವು ಹೆಚ್ಚಾಗಲಿದ್ದು ಜೀವನದಲ್ಲಿ ಯಶಸ್ಸು ಸಾಧಿಸುವಿರಿ.
ಬುಧ ಉದಯದಿಂದ ರೂಪುಗೊಂಡಿರುವ ಶುಭಕರ ಪಂಚ ಮಹಾಪುರುಷ ರಾಜಯೋಗದಲ್ಲಿ ಒಂದಾದ ಭದ್ರ ಮಹಾಪುರುಷ ರಾಜಯೋಗವು ಸಿಂಹ ರಾಶಿಯವರಿಗೆ ನಾನಾ ಕ್ಷೇತ್ರಗಳಲ್ಲಿ ಲಾಭವನ್ನು ನೀಡಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಳಿದ್ದು ದೊಡ್ಡ ಕಂಪನಿಯಿಂದ ಆಫರ್ ಕೂಡ ಲಭ್ಯವಾಗಬಹುದು.
ಬುಧ ಉದಯದಿಂದ ರೂಪುಗೊಂಡಿರುವ ಮಂಗಳಕರ ಭದ್ರಾ ರಾಜಯೋಗವು ಧನು ರಾಶಿಯವರಿಗೆ ಜೀವನದಲ್ಲಿ ಭಾರೀ ಯಶಸ್ಸು, ವ್ಯಾಪಾರದಲ್ಲಿ ಬಂಪರ್ ಲಾಭವನ್ನು ನೀಡಲಿದೆ. ಒಟ್ಟಾರೆಯಾಗಿ ಇದು ನಿಮಗೆ ಬಂಗಾರದಂತ ಸಮಯ ಎಂದು ಸಾಬೀತುಪಡಿಸಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.